• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಸ್‌.ಎಸ್‌ ಮಲ್ಲಿಕಾರ್ಜುನ ಅವರಿಗೆ ನಟ ದರ್ಶನ್ ನೀಡಿದ ಉಡುಗೊರೆ ಏನು?

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಮಾರ್ಚ್ 3: ಇತ್ತೀಚಿನ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೊಟ್ಟ ಮಾತಿನಂತೆ ನಡೆದಿರುವ ಚಿತ್ರನಟ ದರ್ಶನ್ ಅವರು, ಮಂಗಳವಾರ ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರಿಗೆ ಅಮೆರಿಕಾದಿಂದ ತಂದ್ದಿದ ಕುದುರೆಯ ತಡಿ (ಜೀನ್)ನನ್ನು ಉಡುಗೊರೆಯಾಗಿ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ಹುಬ್ಬಳ್ಳಿಯಲ್ಲಿ ರಾಬರ್ಟ್‌​ ಸಿನಿಮಾದ ಪ್ರೀ ರಿಲೀಸಿಂಗ್ ಇವೆಂಟ್‌​ ಮುಗಿಸಿದ ನಟ ದರ್ಶನ್, ದಾವಣಗೆರೆಗೆ ಭೇಟಿ ನೀಡಿ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿ ಸೌಹಾರ್ದ ಮಾತುಕತೆ ನಡೆಸಿದರು.

ಮಗುವಿನೊಂದಿಗೆ ಬಂದು ಎಫ್‌ಡಿಎ ಪರೀಕ್ಷೆ ಬರೆದ ಮಹಿಳೆ!

ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್​​ ಅವರ ಒಡೆತನದ ಬಾಪೂಜಿ ಅತಿಥಿ ಗೃಹಕ್ಕೆ ತೆರಳಿದ ವೇಳೆ ನಟರಾದ ಚಿಕ್ಕಣ್ಣ, ವಿನೋದ್ ಪ್ರಭಾಕರ್, ರವಿಶಂಕರ್ ಕೂಡ ಜೊತೆಗಿದ್ದರು.

ಮೊದಲಿನಿಂದಲೂ ಎಸ್‌.ಎಸ್‌.ಮಲ್ಲಿಕಾರ್ಜುನ್​​​ಗೆ ನಟ ದರ್ಶನ್ ಆಪ್ತರಾಗಿದ್ದು, ಕಳೆದ ಬಾರಿ ದರ್ಶನ್‌ಗೆ ಮಲ್ಲಿಕಾರ್ಜುನ್‌​ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು.

ಅಮೆರಿಕಾದಿಂದ ತಂದ್ದಿದ ಕುದುರೆಯ ತಡಿ (ಜೀನ್)ನನ್ನು ಉಡುಗೊರೆಯಾಗಿ ನೀಡಿದರು. ನಂತರ ಮಲ್ಲಿಕಾರ್ಜುನ್ ರವರ ಒಡೆತನದ ಮುಧೋಳದ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 20 ಲಕ್ಷ ಟನ್ ಕಬ್ಬ ಅರೆದಿದ್ದು, ಮಲ್ಲಿಕಾರ್ಜುನ್ ಅವರನ್ನು ದರ್ಶನ್ ಅವರು ರೈತರ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಬಿ.ಕೆ.ಪರಶುರಾಮ ಸೇರಿದಂತೆ ಮಲ್ಲಿಕಾರ್ಜುನ ಮತ್ತು ದರ್ಶನ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

English summary
Actor Darshan Gifts Special Horse Jeen To Former MLA SS Mallikarjuna In Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X