• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆಯಲ್ಲಿ ವೆಂಟಿಲೇಟರ್ ಸಿಗದೆ ಒದ್ದಾಡಿದ್ದ ಕೊರೊನಾ ಸೋಂಕಿತೆ ಸಾವು

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಏಪ್ರಿಲ್ 27: ಆಂಬ್ಯುಲೆನ್ಸ್‌ನಲ್ಲಿ ವೆಂಟಿಲೇಟರ್ ಸಿಗದೆ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕೊರೊನಾ‌ ಸೋಂಕಿತೆ ಚಿಕಿತ್ಸೆ ಫಲಕಾರಿಯಾಗದೇ ದಾವಣಗೆರೆಯಲ್ಲಿ ಮೃತಪಟ್ಟಿದ್ದಾರೆ.

ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೆ ಒಂದು ಗಂಟೆಯ ಕಾಲ ಆಂಬ್ಯುಲೆನ್ಸ್‌ನಲ್ಲೇ ಒದ್ದಾಡಿದ್ದ ಲೋಕಿಕೆರೆ ಗ್ರಾಮದ ಮಹಿಳೆ ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ದಾವಣಗೆರೆ: ವೆಂಟಿಲೇಟರ್ ಸಿಗದ ಮಹಿಳೆಗೆ ಮಾಜಿ ಸಚಿವರಿಂದ ಸಹಾಯದಾವಣಗೆರೆ: ವೆಂಟಿಲೇಟರ್ ಸಿಗದ ಮಹಿಳೆಗೆ ಮಾಜಿ ಸಚಿವರಿಂದ ಸಹಾಯ

ದಾವಣಗೆರೆ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಎಸ್.ಎಸ್ ಹೈಟೆಕ್ ಆಸ್ಪತ್ರೆಗೆ ಮಹಿಳೆ ತರಲಾಗಿತ್ತು. ಆದರೆ ಎಸ್.ಎಸ್ ಹೈಟೆಕ್ ಆಸ್ಪತ್ರೆಯಲ್ಲೂ ಬೆಡ್ ಸಿಗದ ಹಿನ್ನೆಲೆಯಲ್ಲಿ ಹೈಟೆಕ್ ಆಸ್ಪತ್ರೆಯಿಂದ ಬಾಪೂಜಿ ಆಸ್ಪತ್ರೆಗೆ ಸಂಬಂಧಿಕರು ಕರೆ ತಂದಿದ್ದರು.

ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಶಿಫಾರಸ್ಸಿನ ಮೇರೆಗೆ ಸೋಂಕಿತ ಮಹಿಳೆ ದಾಖಲಾಗಿದ್ದರು. ಅಡ್ಮಿಟ್ ಮಾಡಿಕೊಂಡಿದ್ದ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿದರೂ ಕೊನೆಗೂ ಚಿಕಿತ್ಸೆ ಫಲಿಸದೇ ಕೊರೊನಾಕ್ಕೆ ಬಲಿಯಾಗಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬಹುತೇಕ ಹಾಸಿಗೆಗಳಲ್ಲಿ ರೋಗಿಗಳು ಇದ್ದಾರೆ. ಇದರಿಂದಾಗಿ ಯಾವ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣ ರೋಗಿಗಳ ಪರದಾಟ ಮುಂದುವರಿದಿದೆ.

ಬೆಡ್, ವೆಂಟಿಲೇಟರ್ ಸೂಕ್ತ ಸಮಯದಲ್ಲಿ ರೋಗಿಗಳಿಗೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬೆಡ್ ಗಳ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತವನ್ನು ಜನರು ಆಗ್ರಹಿಸಿದ್ದಾರೆ.

   #Covid19Updates ಕರ್ನಾಟಕ: ರಾಜ್ಯದಲ್ಲಿ ಇಂದು 29744 ಜನರಿಗೆ ಸೋಂಕು | Oneindia Kannada
   English summary
   Covid-19 Patient who suffers from severe respiratory problems died fter failing to get ventilator support in Davanagere Bapuji hospital.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X