ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐವರೂ ಹೆಣ್ಣು ಮಕ್ಕಳು ಹುಟ್ಟಿದರೆಂದು ಮಾರಲು ಮುಂದಾದ ತಂದೆ ತಾಯಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 19: ಗಂಡು ಮಗು ಬೇಕೆಂದು ಬಯಸಿದ್ದ ದಂಪತಿಗೆ ನಾಲ್ಕನೇ ಮಗುವೂ ಹೆಣ್ಣು ಹುಟ್ಟಿದ್ದು, ಅದನ್ನು ಮಾರಾಟ ಮಾಡಲು ಹೋಗಿ ದಂಪತಿ ಪೊಲೀಸರ ಅಥಿತಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಅಂಬೇಡ್ಕರ್ ನಗರದ ಕವಿತಾ-ಮಂಜುನಾಥ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು. ಗಂಡು ಮಗು ಬೇಕೆಂದು ಹಂಬಲಿಸುತ್ತಿದ್ದ ಅವರಿಗೆ ನಾಲ್ಕನೇ ಮಗು ಸಹ ಹೆಣ್ಣು ಹುಟ್ಟಿತ್ತು. ಹೀಗಾಗಿ ನಗರದ ಖಾಸಗಿ ಆಸ್ಪತ್ರೆಯ ನರ್ಸ್ ಸಹಾಯದಿಂದ ಕೊನೆಯ ಮಗುವನ್ನು ಮಾರಾಟ ಮಾಡಲು ಸಿದ್ಧರಾಗಿದ್ದರು. ಕಳೆದ ಡಿಸೆಂಬರ್ 24ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ನಿವಾಸಿಗಳಾದ ದಂಪತಿಯೊಬ್ಬರಿಗೆ ಮಕ್ಕಳಿರಲಿಲ್ಲ. ಇದನ್ನು ನರ್ಸ್ ಕವಿತಾ- ಮಂಜುನಾಥ ದಂಪತಿಗೆ ಹೇಳಿ ಮಗು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. ಅಂದು 25 ಸಾವಿರ ರೂಪಾಯಿ ಕೊಟ್ಟು ಮಗುವನ್ನು ಖರೀದಿಸಿ ಹೋಗಿದ್ದರು. ಏಳು ಜನರ ಶಾಮೀಲಿನೊಂದಿಗೆ ಮಗು ಮಾರಾಟ ನಡೆದಿತ್ತು.

ಹಿರಿಯೂರಲ್ಲಿ ಕಳೆದುಕೊಂಡಿದ್ದ ಮಗು ಇಂದು ತಂದೆಯ ಮಡಿಲು ಸೇರಿತುಹಿರಿಯೂರಲ್ಲಿ ಕಳೆದುಕೊಂಡಿದ್ದ ಮಗು ಇಂದು ತಂದೆಯ ಮಡಿಲು ಸೇರಿತು

ಆದರೆ ಮಗು ಮಾರಾಟವಾದ ಎರಡು ದಿನಗಳ ನಂತರ ಮಕ್ಕಳ ರಕ್ಷಣಾ ಘಟಕಕ್ಕೆ ಕರೆಯೊಂದು ಬಂದು, ಮಗು ಮಾರಾಟದ ವಿಷಯ ಹೇಳಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಸಿಬ್ಬಂದಿ, ಮನೆ ಹುಡುಕಿಕೊಂಡು ಹೊರಟರು. ಆದರೆ ಮಗುವಿನ ತಾಯಿ ತಂದೆ ನಾಪತ್ತೆಯಾಗಿದ್ದರು. ಪಕ್ಕದ ಅಂಗನವಾಡಿಯಲ್ಲಿ ದಾಖಲೆ ಪರಿಶೀಲಿಸಿದಾಗ ಮಗುವಿನ ತಾಯಿಗೆ ನಾಲ್ಕನೇ ಹೆರಿಗೆಯಾಗಿ, ನಾಲ್ಕನೆಯದ್ದು ಹೆಣ್ಣು ಎಂದು ತಿಳಿದುಬಂದಿತ್ತು. ತಂದೆ ತಾಯಿಯನ್ನು ಪತ್ತೆ ಹಚ್ಚಿ ಮಹಿಳಾ ಪೊಲೀಸ್ ಠಾಣೆ ಮಾಹಿತಿ ನೀಡಿದಾಗ ಸತ್ಯ ಬಯಲಾಗಿದೆ.

Couple Arrested For Selling Their Fourth Girl Baby In Davanagere

ಗಂಡು ಮಗು ಹೆರಲಿಲ್ಲವೆಂದು ಹೆಂಡತಿಯನ್ನು ತುಂಡು-ತುಂಡಾಗಿ ಕತ್ತರಿಸಿ ಮಿಕ್ಸಿಗೆ ಹಾಕಿದ ಗಂಡು ಮಗು ಹೆರಲಿಲ್ಲವೆಂದು ಹೆಂಡತಿಯನ್ನು ತುಂಡು-ತುಂಡಾಗಿ ಕತ್ತರಿಸಿ ಮಿಕ್ಸಿಗೆ ಹಾಕಿದ

ಈ ನಡುವೆ ಮಗುವಿನ ತಂದೆ ಮಂಜುನಾಥ ಒಂದು ನಾಟಕವಾಡಿದ್ದ. ತನ್ನ ಹೆಂಡತಿಯನ್ನು ತವರಿಗೆ ಕಳುಹಿಸಿ ನಾಪತ್ತೆಯಾಗಿರುವುದಾಗಿ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಇದನ್ನು ತನಿಖೆ ಮಾಡಿದ ಮಹಿಳಾ ಠಾಣೆ ಪೊಲೀಸರು ಇಬ್ಬರು ಜೊತೆಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ.

English summary
The couple arrested for selling their fourth girl baby in davanagere. The couple wanted to have boy baby
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X