ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ 9 ವಿದ್ಯಾರ್ಥಿಗಳು, 3 ಉಪನ್ಯಾಸಕರಿಗೆ ಕೊರೊನಾ: ಪೋಷಕರಲ್ಲಿ ಆತಂಕ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 22: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಿದ್ದು, 9 ವಿದ್ಯಾರ್ಥಿಗಳು ಹಾಗೂ 3 ಉಪನ್ಯಾಸಕರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತರಗತಿಗೆ ಬರುವ ಮುಂಚೆ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು. ಇದೀಗ ಅದರ ಫಲಿತಾಂಶ ಬರಲು ಆರಂಭಗೊಂಡಿದೆ.

ಮದುವೆ ಸಂಭ್ರಮದಲ್ಲಿ ಕೊರೊನಾ ವಾರಿಯರ್ಸ್‍ಗೆ ಗೌರವಮದುವೆ ಸಂಭ್ರಮದಲ್ಲಿ ಕೊರೊನಾ ವಾರಿಯರ್ಸ್‍ಗೆ ಗೌರವ

2,967 ಮಂದಿ ಬೋಧಕರು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. 1,890 ಮಂದಿಗೆ ನೆಗೆಟಿವ್‌ ಎಂದು ವರದಿ ಬಂದಿದೆ. 1,074 ಮಂದಿಯ ಫಲಿತಾಂಶ ಬರಬೇಕಿದೆ. 6,749 ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅವರಲ್ಲಿ 4,380 ಮಂದಿಗೆ ನೆಗೆಟಿವ್‌ ಎಂದು ಫಲಿತಾಂಶ ಬಂದಿದೆ. ಇನ್ನೂ 2,360 ಮಂದಿಯ ಫಲಿತಾಂಶ ಬರಬೇಕಿದೆ.

Coronavirus Positive For 9 Students And 3 Lecturers In Davanagere

1963 ಮಂದಿ ಬೋಧಕೇತರ ಸಿಬ್ಬಂದಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಅವರಲ್ಲಿ 970 ಮಂದಿಯ ಫಲಿತಾಂಶ ಬಂದಿದ್ದು, ಯಾರಿಗೂ ಪಾಸಿಟಿವ್ ಕಂಡುಬಂದಿಲ್ಲ. 993 ಮಂದಿಯ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ.

ಈ ಪದವಿ ಪರೀಕ್ಷೆಗಳು ಕಳೆದ ಹತ್ತು ದಿನಗಳಿಂದ ನಡೆದಿವೆ. ವರದಿ ಬಾರದೇ ತರಗತಿಗೆ ಹೋಗುವಂತಿರಲಿಲ್ಲ. ಹಾಗಾಗಿ ಪಾಸಿಟಿವ್‌ ಬಂದವರು ಯಾರೂ ಕಾಲೇಜಿನಲ್ಲಿ ಇತರರ ಸಂ‍ಪರ್ಕಕ್ಕೆ ಬಂದಿಲ್ಲ. ಪಾಸಿಟಿವ್ ಬಂದವರು ಮನೆಯ ವಿಳಾಸ ನೀಡದ್ದರಿಂದ ಅವರು ವಿದ್ಯಾರ್ಥಿಗಳೋ, ಉಪನ್ಯಾಸಕರೋ, ಇತರರೋ ಎಂಬುದನ್ನು ಪತ್ತೆ ಮಾಡಲು ಸಮಯ ಹಿಡಿಯಿತು.

9 ಮಂದಿ ವಿದ್ಯಾರ್ಥಿಗಳು ಮತ್ತು ಮೂವರು ಉಪನ್ಯಾಸಕರಿಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಹಾಗಾಗಿ ಎಲ್ಲರೂ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ, ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ ರಾಘವನ್‌ ಹೇಳಿದರು.

ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆ 21,400 ಮಂದಿಗೆ ಸೋಂಕು ತಗುಲಿದ್ದು, 20,898 ಸೋಂಕಿತರು ಗುಣಮುಖರಾಗಿದ್ದಾರೆ. 263 ಮಂದಿ ಮೃತಪಟ್ಟಿದ್ದು, ಇನ್ನೂ 239 ಸಕ್ರಿಯ ಪ್ರಕರಣಗಳಿವೆ.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

English summary
Nine students and 3 lecturers have confirmed coronavirus infection, said Davanagere District Surveyor Officer Dr. GD Raghavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X