ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಇಂದು ಬರಲಿದೆ 900 ಪ್ರಕರಣಗಳ ಫಲಿತಾಂಶ

|
Google Oneindia Kannada News

ದಾವಣಗೆರೆ, ಮೇ 19: ದಾವಣಗೆರೆಯಲ್ಲಿ ಇಂದು ಬರೋಬ್ಬರಿ 900 ಕೊರೊನಾ ವೈರಸ್‌ ಪ್ರಕರಣಗಳ ಫಲಿತಾಂಶ ಹೊರಬರಲಿದೆ. ಈ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ನಡೆಸಿದ್ದು, 1437 ವರದಿಗಳ ಫಲಿತಾಂಶ ಬಾಕಿ‌ ಇವೆ. ಜಿಲ್ಲಾಡಳಿತ ಕಂಟೈನ್ಮೆಂಟ್ ಝೋನ್‌ನಲ್ಲಿದ್ದ ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ್ದು, ಆ ಪರೀಕ್ಷೆಯ ವರದಿ ಬರುವುದು ಬಾಕಿ ಇದೆ.

ವಾಣಿಜ್ಯ ಚಟುವಟಿಕೆಗೆ ದಾವಣಗೆರೆಯಲ್ಲಿ ಷರತ್ತು ಬದ್ಧ ಅವಕಾಶವಾಣಿಜ್ಯ ಚಟುವಟಿಕೆಗೆ ದಾವಣಗೆರೆಯಲ್ಲಿ ಷರತ್ತು ಬದ್ಧ ಅವಕಾಶ

ಒಟ್ಟು ಒಂಬತ್ತು ಏರಿಯಾಗಳನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಪೊಲೀಸ್ ಕ್ವಾಟ್ರಸ್ ಏರಿಯಾವನ್ನ ಕಂಟೈನ್ಮೆಂಟ್ ಜೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಘೋಷಣೆ ಮಾಡಿದ್ದಾರೆ.

Coronavirus In Davanagere: 900 Case Report Will Be Coming Today

ಈವರೆಗೆ, ಜಿಲ್ಲೆಯಲ್ಲಿ ಒಟ್ಟು 90 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಇಬ್ಬರು ಮಾತ್ರ ಗುಣಮುಖರಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದಾರೆ. 84 ಸಕ್ರೀಯ ಕೊರೊನಾ ಪ್ರಕರಣಗಳು ಇವೆ.

ಇಂದಿನಿಂದ ಬಸ್‌ ಸಂಚಾರ ಶುರುವಾಗಿದ್ದು, ಕೊರೊನಾ ಪ್ರಕರಣ ಹೆಚ್ಚಾಗುವ ಭೀತಿ ಎದುರಾಗಿದೆ. ಅಲ್ಲದೆ, 900 ಪ್ರಕರಣಗಳ ಫಲಿತಾಂಶ ಬಂದ ಮೇಲೆ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ.

English summary
Coronavirus in karnataka: 900 coronavirus case report will be coming today in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X