ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಕ್ಯಾರೆಟ್, ಬೀದರ್‌ನಲ್ಲಿ ಕಲ್ಲಂಗಡಿ ನಾಶ

|
Google Oneindia Kannada News

ದಾವಣಗೆರೆ ಮತ್ತು ಬೀದರ್, ಮೇ 16: ಲಾಕ್ ಡೌನ್ ಹಿನ್ನೆಲೆ ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ದಾವಣಗೆರೆಯಲ್ಲಿ ರೈತ ಕ್ಯಾರೆಟ್ ಬೆಳೆ ನಾಶ ಮಾಡಿದ್ದಾರೆ.

Recommended Video

ಮೋದಿ ವಿರುದ್ಧ ಚಿಕ್ಕ ಮಗು ಮಾತಾಡಿದ್ದು ಕೇಳಿ ಎಲ್ಲರೂ ಶಾಕ್..! | Narendra Modi

ಟ್ಯಾಕ್ಟರ್ ನಿಂದ ಇಡಿ ಬೆಳೆ ನಾಶ ಮಾಡಿ, ಕ್ಯಾರೆಟ್ ಮೇಯಲು ಕುರಿ ಹಾಗೂ ಮೇಕೆ ಜಮೀನು ರೈತ ಬಿಟ್ಟಿದ್ದಾರೆ. ಭೈರನಾಯಕನಹಳ್ಳಿಯ ಚೌಡಪ್ಪ ನಷ್ಟ ಅನುಭವಿಸಿದ ರೈತನಾಗಿದ್ದಾರೆ.

ಕೃಷಿ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂ ಘೋಷಣೆ ಕೃಷಿ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂ ಘೋಷಣೆ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ, ದಾವಣಗೆರೆಗೆ ಕ್ಯಾರೆಟ್ ಮಾರಾಟ ಮಾಡಲು ಹೋಗಿ ರೈತನಿಗೆ ನಷ್ಟವಾಗಿದೆ. ಹೀಗಾಗಿ, ಮನೆಯಲ್ಲಿದ್ದ ರಾಗಿ‌ ಮಾರಾಟ ಮಾಡಿ ವಾಹನ ಬಾಡಿಗೆ ಕೊಟ್ಟಿದ್ದಾರೆ.

Davanagere And Bidar Farmers Destroyed The Crop

ನಾಲ್ಕು ಎಕರೆ ಪ್ರದೇಶದಲ್ಲಿ ಕ್ಯಾರೆಟ್ ನಾಶ ಮಾಡಿದ್ದು, ಅದನ್ನು ಬೆಳೆಯಲು ಸುಮಾರು ಒಂದು ಲಕ್ಷ ಐವತ್ತು ಸಾವಿರ ವೆಚ್ಚ ಮಾಡಲಾಗಿತ್ತು.

ಇನ್ನು, ಬೀದರ್‌ನಲ್ಲಿ ಲಾಕ್ ಡೌನ್ ಹಿನ್ನಲೆ ಕಲ್ಲಂಗಡಿ ಬೆಳೆದ ರೈತನಿಗೆ ಭಾರಿ‌ ನಷ್ಟವಾಗಿದೆ. ನಷ್ಟ‌ ಪರಿಹಾರ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪಗೆ ತಾಲೂಕಿನ ಬಸವವಾಡಿ ಗ್ರಾಮದ ರೈತ ಲಕ್ಷ್ಮಣ ಮನವಿ ಮಾಡಿದ್ದಾರೆ.

ಎರಡುವರೆ ಎಕರೆ ಪ್ರದೇಶದಲ್ಲಿ ಬೆಳೆದ‌ ಕಲ್ಲಂಗಡಿ ಮಾರುಕಟ್ಟೆ ಇಲ್ಲದೆ ಹೊಲದಲ್ಲೆ ಗಬ್ಬೆದ್ದು‌ ನಾರುತ್ತಿದೆ. ಎರಡುವರೆ ಲಕ್ಷ ಸಾಲ‌ ಮಾಡಿ ಬೆಳೆದ ಕಲ್ಲಂಗಡಿ ಮಣ್ಣು ಪಾಲಾಗಿದೆ. ಇಲ್ಲಿಯವರೆಗೆ ಹೊಲಕ್ಕೆ ಸೌಜನ್ಯಕ್ಕೂ ಭೇಟಿ ನೀಡಿದ‌ ತೋಟಗಾರಿಕಾ ಇಲಾಖೆ ಅಧಿಕಾರಿ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

English summary
Davanagere and Bidar farmers destroyed the crop as they can't sell their fruits and vegetables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X