ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಈವರೆಗೂ ದಾಖಲಾದ ಕೊರೊನಾ ವೈರಸ್ ಪ್ರಕರಣಗಳೆಷ್ಟು?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 27: ದಾವಣಗೆರೆ ಜಿಲ್ಲೆಯಲ್ಲಿ‌ ಇಂದು ಮತ್ತೆ ಆರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.

Recommended Video

3C ಪಾಲಿಸಿ ಮೂಲಕ ಕೊರೊನಾ ವಿರುದ್ಧ ಜಯಸಾಧಿಸಿದ ಜಪಾನ್..! | Japan against Corona

48 ವರ್ಷದ ಪುರುಷ, 21 ವರ್ಷದ ಯುವತಿ, 18 ವರ್ಷದ ಯುವತಿ, 46 ವರ್ಷದ ಪುರುಷ ಹಾಗೂ 20 ವರ್ಷದ ಯುವಕ, 73 ವರ್ಷದ ವೃದ್ಧೆಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಜಿಲ್ಲಾ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇದ್ದವರಾಗಿದ್ದಾರೆ.

ದಾವಣಗೆರೆಯ ಸೋಂಕಿತ ಸ್ಟಾಫ್ ನರ್ಸ್ ಗುಣಮುಖದಾವಣಗೆರೆಯ ಸೋಂಕಿತ ಸ್ಟಾಫ್ ನರ್ಸ್ ಗುಣಮುಖ

ಇಂದು ಸೋಂಕು ಪತ್ತೆಯಾದ ನಾಲ್ವರಿಗೆ ಇದೇ 19ರಂದು ಸೋಂಕು ಪತ್ತೆ ಆಗಿದ್ದ 30 ವರ್ಷದ ವ್ಯಕ್ತಿಯೊಬ್ಬರಿಂದ ಸೋಂಕು ಹರಡಿದೆ. ಇವರೆಲ್ಲರೂ ಜಾಲಿನಗರದ ನಿವಾಸಿಗಳಾಗಿದ್ದಾರೆ. ಇದೇ 25 ರಂದು ಸೋಂಕು ಪತ್ತೆಯಾಗಿದ್ದ, ಕಂಟೈನ್ಮೆಂಟ್ ಝೋನ್ ನಿವಾಸಿ 18 ವರ್ಷದ ಯುವಕನಿಂದ ಮತ್ತಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

Coronavirus Cases Raised To 142 In Davanagere

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 142 ಇದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 66 ಮಂದಿ ಗುಣಮುಖರಾಗಿದ್ದು, 72 ಸಕ್ರಿಯ ಪ್ರಕರಣಗಳಿವೆ.

English summary
6 more coronavirus positive cases confirmed today in davanagere, total cases raised to 142 in district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X