ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 27: ದಾವಣಗೆರೆ ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.

ಪ್ಯಾರಿಸ್ ನಲ್ಲಿ ವೈದ್ಯಕೀಯ ಉನ್ನತ ವ್ಯಾಸಂಗ ಓದಲು ಆ ಯುವಕ ಹೋಗಿದ್ದನು. 24 ವರ್ಷದ ಯುವಕನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. 14 ದಿನಗಳ ಕಾಲ ಹೋಮ್‌ ಕ್ವಾರೆಂಟೈನ್ ಮುಗಿಸಿದ್ದನು.

ಮಾರ್ಚ್ 25 ರಂದು ಕೆಮ್ಮು, ಗಂಟಲು ನೋವು, ಜ್ವರ ಕಾಣಿಸಿಕೊಂಡಿತ್ತು. ಅಂದು ಬೆಳಿಗ್ಗೆ 10 ಗಂಟೆಗೆ ಚಿಗಟೇರಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ಶಿಪ್ಟ್ ಮಾಡಲಾಗಿತ್ತು.

Corona Positive Case Detected In Davanagere

ಮಾ. 23 ರ ಸಂಜೆ 7 ಗಂಟೆಗೆ ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಲ್ಯಾಬ್ ಗೆ ಕಳಿಸಲಾಗಿತ್ತು, ಇಂದು ಬಂದ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಎಂದು ಕಾಣಿಸಿದೆ.

ಮಾ. 17 ರಂದು 11:40 ಕ್ಕೆ ಪ್ಯಾರಿಸ್ ನಿಂದ ಅಬುಧಾಬಿ ಮುಖಾಂತರ ಬೆಂಗಳೂರಿಗೆ ಮಾ. 18 ರ ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿಗೆ ಸೋಂಕಿತ ವ್ಯಕ್ತಿ ಬಂದಿದ್ದನು.

ಏರ್ ಪೋರ್ಟ್ ನಿಂದ ವೋಲ್ವೋ ಬಸ್ ಮೂಲಕ ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ರಾಜಹಂಸ ಬಸ್ ನಲ್ಲಿ ಬೆಳಗ್ಗೆ 10 ಗಂಟೆಗೆ ಹೊರಟು, ಮಧ್ಯಾಹ್ನ 4 ಗಂಟೆಗೆ ದಾವಣಗೆರೆಗೆ ತಲುಪಿದ್ದಾನೆ. ಬಸ್ ನಿಲ್ದಾಣದಿಂದ ಮನೆಗೆ ಕಾರಿನಲ್ಲಿ ತಲುಪಿದ್ದಾರೆ.‌

English summary
The first coronavirus positive case was detected in Davangere district. DC Mahantesh Beelagi informed about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X