ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಳಿ ಕಟ್ಟಿದ ಮೇಲೆ ಸಂವಿಧಾನದ ಮೇಲಾಣೆ!

|
Google Oneindia Kannada News

ದಾವಣಗೆರೆ, ನವೆಂಬರ್.11: ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಹೊರತಾಗಿ ಬೇರೆನನ್ನೂ ಹೇಳುವುದಿಲ್ಲ. ನಾನು ಹೇಳುವುದೆಲ್ಲ ಸತ್ಯ. ಕೋರ್ಟ್ ನಲ್ಲಿ ಸಾಕ್ಷಿಗಳಿಂದ ಹೇಳಿಕೆ ಪಡೆಯೋವಾಗ ಭಗವದ್ಗೀತೆ ಮೇಲೆ ಕೈ ಇರಿಸಿ ಹೀಗೆ ಹೇಳಿಸಲಾಗುತ್ತದೆ. ಆ ಮಾದರಿಯಲ್ಲೇ ಇಲ್ಲೊಂದು ಘಟನೆ ನಡೆದಿದೆ. ಆದರೆ, ಇಲ್ಲಿ ಸಾಕ್ಷಿಯಾಗಿದ್ದು ಭಗದ್ಗೀತೆ ಅಲ್ಲ. ಬದಲಿಗೆ ಭಾರತದ ಸಂವಿಧಾನ.

ಹೊಸದಾಗಿ ಪಟ್ಟಕ್ಕೇರುವ ಜನಪ್ರತಿನಿಧಿಗಳು ಕೂಡಾ ಸಂವಿಧಾನದ ಮೇಲೆ ಪ್ರಮಾಣ ಮಾಡುತ್ತಾರೆ. ಅದರಲ್ಲೇನೂ ವಿಶೇಷವಿಲ್ಲ. ಆದರೆ, ಬೆಣ್ಣೆನಗರಿಯಲ್ಲಿ ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದು ಶಾಸಕರಲ್ಲ, ಸಚಿವರಲ್ಲ, ಸಂಸದರಲ್ಲ. ಇಲ್ಲಿ ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದು ನವ ದಾಂಪತ್ಯ ಬದುಕಿಗೆ ಕಾಲಿರಿಸಿದ ನವಜೋಡಿಗಳು.

ಟಿಕ್ ಟಾಕ್ ನಲ್ಲಿ ವೈರಲ್ ಆದ ಕುರಿಗಾಹಿ ಮದುವೆ; ಪ್ರಚಾರಕ್ಕಲ್ಲ ಎಂದ ಪ್ರೇಮಿಟಿಕ್ ಟಾಕ್ ನಲ್ಲಿ ವೈರಲ್ ಆದ ಕುರಿಗಾಹಿ ಮದುವೆ; ಪ್ರಚಾರಕ್ಕಲ್ಲ ಎಂದ ಪ್ರೇಮಿ

ಹೌದು, ಇಂಥದೊಂದು ಢಿಪರೆಂಟ್ ಮದುವೆಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮ ಸಾಕ್ಷಿಯಾಯಿತು. ಅರಿಶಿಣ ಶಾಸ್ತ್ರ, ಧಾರೆ ಶಾಸ್ತ್ರ, ಮಾಂಗಲ್ಯಧಾರಣೆ, ಸಪ್ತಪದಿ ತುಳಿಯುವುದೆಲ್ಲ ಮದುವಗೆಳಲ್ಲಿ ಸಾಮಾನ್ಯ. ಆದರೆ, ಈ ಗ್ರಾಮದಲ್ಲಿ ನಡೆದ ಮದುವೆ ಎಲ್ಲ ಮದುವಗಳಿಗಿಂತ ಸ್ವಲ್ಪ ಡಿಫರೆಂಟ್.

 Constitutional Marriage In Davanagere!

ಸಂವಿಧಾನ ಬದ್ಧ ಮದುವೆ:

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮದಲ್ಲಿ ಎರಡು ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿಸಿದ್ದು ವಿಶೇಷವಾಗಿತ್ತು. ಸುನೀಲ್ - ರೂಪಾ ಹಾಗೂ ಮಂಜುನಾಥ್ - ಸುಷ್ಮಾ ದಾಂಪತ್ಯ ಬದುಕಿಗೆ ಇಲ್ಲಿ ಸಂವಿಧಾನವೇ ಸಾಕ್ಷಿಯಾಯಿತು. ಧಾರೆ ಮುಹೂರ್ತ ನಂತರದ ನವದಂಪತಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮದುವೆಯಾಗಿದ್ದು ಎಲ್ಲಕ್ಕಿಂದ ವಿಶೇಷವಾಗಿತ್ತು.

 Constitutional Marriage In Davanagere!

ಉಕ್ಕಡಗಾತ್ರಿಯಲ್ಲಿ ನಡೆದ ಸಂವಿಧಾನಬದ್ಧ ಮದುವೆಗೆ ಸಂಬಂಧಿಕರೆಲ್ಲ ಸಂತಸ ವ್ಯಕ್ತಪಡಿಸಿದರು. ವಿಶೇಷ ಹಾಗೂ ವಿಶಿಷ್ಟ ಮದುವೆಯನ್ನು ಹಾಗೂ ಇಲ್ಲಿನ ಆಚರಣೆಗಳನ್ನು ನೂರಾರು ಮಂದಿ ಗ್ರಾಮಸ್ಥರು ಕೂಡಾ ಕಣ್ತುಂಬಿಕೊಂಡರು. ಅದೇನೇ ಇರಲಿ ಡಿಫರೆಂಟ್ ಆಗಿ ದಾಂಪತ್ಯ ಬದುಕಿಗೆ ಕಾಲಿಟ್ಟ ಈ ಜೋಡಿಯ ಜೀವನಕ್ಕೆ ಆಲ್ ದಿ ಬೆಸ್ಟ್.

English summary
Davanagere Witnessed A Different Marriage. Couples Oath on constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X