ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಬೆಲೆ ಏರಿಕೆ ವಿರುದ್ಧ ವಿನೂತನ ಪ್ರತಿಭಟನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 28: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ಖಂಡಿಸಿ ದಾವಣಗೆರೆ ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್‍ನಿಂದ ಭಾನುವಾರ ವಿನೂತನ ಪ್ರತಿಭಟನೆಯನ್ನು ನಡೆಸಲಾಯಿತು.

ನಗರದ ವೀರ ಮದಕರಿ ನಾಯಕ ವೃತ್ತ (ಹೊಂಡದ ಸರ್ಕಲ್)ದಲ್ಲಿ ಸಿಲಿಂಡರ್ ಇಟ್ಟು, ಸಾಂಕೇತಿಕವಾಗಿ ಅಡುಗೆ ಮಾಡುವುದರ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಮೂರು ದಿನಗಳ ನಂತರ ಮತ್ತೆ ಪೆಟ್ರೋಲ್-ಡೀಸೆಲ್ ದರ ಏರಿಕೆಮೂರು ದಿನಗಳ ನಂತರ ಮತ್ತೆ ಪೆಟ್ರೋಲ್-ಡೀಸೆಲ್ ದರ ಏರಿಕೆ

ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಯೂಬ್ ಪೈಲ್ವಾನ್ ನೇತೃತ್ವದಲ್ಲಿ ಹೊಂಡದ ವೃತ್ತದಿಂದ ಜಾಥಾ ಆರಂಭಿಸಿದ ಪ್ರತಿಭಟನಾಕಾರರು ವೀರ ಮದಕರಿನಾಯಕ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗಣೇಶ್ ರಾವ್ ವೃತ್ತದಲ್ಲಿರುವ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರತಿಭಟನೆ ಆರಂಭಿಸಿದರು.

 ತೈಲ ಬೆಲೆ ಏರಿಕೆ ಖಂಡಿಸಿ ಎಎಪಿಯಿಂದ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆ ತೈಲ ಬೆಲೆ ಏರಿಕೆ ಖಂಡಿಸಿ ಎಎಪಿಯಿಂದ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆ

"ಜನಸಮಾನ್ಯರಿಗೆ ಅಚ್ಛೇದಿನ್ ತರುತ್ತೇವೆ ಎಂದು ಹೇಳಿಕೊಂಡು ಕೇಂದ್ರ ಸರ್ಕಾರ ದೇಶದ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ದರ ಆಕಾಶಕ್ಕೆ ಜಿಗಿದಿವೆ. ಇದು ಅಚ್ಛೇದಿನ್ ಅಲ್ಲ ಕೆಟ್ಟ ದಿನ್" ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದರು.

ಟೊಮೆಟೋ ಬೆಲೆ ಕುಸಿತ: ಟ್ರ್ಯಾಕ್ಟರ್ ನಲ್ಲಿ ತುಂಬಿ ಬೀಳು ಹೊಲಕ್ಕೆ ಸುರಿದ ಚಿತ್ರದುರ್ಗ ರೈತ ಟೊಮೆಟೋ ಬೆಲೆ ಕುಸಿತ: ಟ್ರ್ಯಾಕ್ಟರ್ ನಲ್ಲಿ ತುಂಬಿ ಬೀಳು ಹೊಲಕ್ಕೆ ಸುರಿದ ಚಿತ್ರದುರ್ಗ ರೈತ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಉಜ್ವಲ್ ಯೋಜನೆ ಅಡಿ ಮಹಿಳೆಯರಿಗೆ ಅನುಕೂಲವಾಗಲೆಂದು ಉಚಿತ ಗ್ಯಾಸ್ ಒಲೆ, ಸಿಲೆಂಡರ್ ಗಳನ್ನು ಕೇಂದ್ರ ಸರ್ಕಾರ ನೀಡಿತು. ಆದರೆ, ಈಗ ಅಡುಗೆ ಅನಿಲದ ಬೆಲೆ 800 ದಾಟಿದೆ. ಒಂದು ತಿಂಗಳಲ್ಲೇ ಸತತ ಮೂರು ಬಾರಿ ದರ ಏರಿಕೆ ಮಾಡಲಾಗಿದೆ. ಹೀಗಾಗಿ, ಮಹಿಳೆಯರು ಮತ್ತೆ ಸೌದೆ ಒಲೆಯತ್ತ ಅಡುಗೆ ಮಾಡಲು ಮುಖ ಮಾಡಿದ್ದಾರೆ ಎಂದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೋದಿ ದುರಾಡಳಿತ

ಮೋದಿ ದುರಾಡಳಿತ

ಕಾಂಗ್ರೆಸ್ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ 60 ರೂ., ದಾಟಿರಲಿಲ್ಲ. ಈಗ ಮೋದಿ ಸರ್ಕಾರದಲ್ಲಿ 100 ರೂ., ಸನಿಹಕ್ಕೆ ಪೆಟ್ರೋಲ್ ದರ ತಲುಪಿದ್ದು, ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದೆ. ಆಗೆಲ್ಲಾ ಪ್ರಧಾನಿ ಮೋದಿ ಕೊಂಡಾಡುತ್ತಿದ್ದವರು ಈಗ ದುರಾಡಳಿತ ಕಂಡು ಮೋದಿ ತಿರುಗಿಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರು ಜೀವನ ನಡೆಸುವುದು ಹೇಗೆ?

ಜನರು ಜೀವನ ನಡೆಸುವುದು ಹೇಗೆ?

ಆಯೂಬ್ ಪೈಲ್ವಾನ್ ಮಾತನಾಡಿ, "ದೇಶದ ಜನರು ಮೋದಿ ಆಡಳಿತದಲ್ಲಿ ಸಾಕಷ್ಟು ತೊಂದರೆಗೆ ಈಡಾಗಿದ್ದಾರೆ. ಆಹಾರ ವಸ್ತುಗಳ ಬೆಲೆಯೂ ಗಗನಕ್ಕೇರಿವೆ, ಇತ್ತ ಕಡೆ ಜಿಎಸ್ ಟಿ ಅಂತಹ ನೀತಿಗಳಿಂದಾಗಿ ಕೈಗಾರಿಕೆಗಳು, ಉದ್ಯಮಗಳು ಬಾಗಿಲು ಹಾಕಿರುವುದರಿಂದ ನಿರುದ್ಯೋಗ ಸೃಷ್ಟಿಯಾಗಿದೆ. ಪೆಟ್ರೋಲ್, ಡಿಸೇಲ್ ದರ ನೂರರ ಗಡಿಗೆ ತಲುಪಿದೆ ಜನರು ಜೀವನ ನಡೆಸುವುದಾದರೂ ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದರು.

ಕೈ ಸುಟ್ಟುಕೊಂಡಂತಾಗಿದೆ

ಕೈ ಸುಟ್ಟುಕೊಂಡಂತಾಗಿದೆ

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್ ಜಾಧವ್ ಮಾತನಾಡಿ, "ಅಡುಗೆ ಅನಿಲ ದರ ಏರಿಕೆ ಕೇಳಿಯೇ ಮಹಿಳೆಯರು ಕೈಸುಟ್ಟುಕೊಂಡಂತಾಗಿದೆ. ಎರಡ್ಮೂರು ತಿಂಗಳಲ್ಲಿ ಕೇಂದ್ರವು ಅಡುಗೆ ಅನಿಲ ದರವನ್ನು ದುಪ್ಪಟ್ಟು ಮಾಡಿದೆ. ಮತ್ತೆ ಹಿಂದಿನಂತೆ ಮಹಿಳೆಯರು ಸೌದೆ ಒಲೆ ಕಡೆಗೆ ಮುಖ ಮಾಡಿದ್ದಾರೆ" ಎಂದು ಕಿಡಿಕಾರಿದರು.

English summary
Davanagere south block Congress unique protest against price hike. Congress workers cooked food in the road to protest against LPG cylinder price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X