ಕಾಂಗ್ರೆಸ್ ದಲಿತರನ್ನು ನಿರಂತರವಾಗಿ ಅವಮಾನಿಸಿದೆ: ಲಾಲ್‍ಸಿಂಗ್ ಆರ್ಯ
ದಾವಣಗೆರೆ, ಜನವರಿ 06: " ದಲಿತರನ್ನು ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಅವರನ್ನು ನಿರಂತರವಾಗಿ ಅಪಮಾನಿಸಿಕೊಂಡು ಬಂದಿದೆ" ಎಂದು ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್‍ಸಿಂಗ್ ಆರ್ಯ ಆರೋಪಿಸಿದರು.
ಬುಧವಾರ ದಾವಣಗೆರೆ ನಗರದ ಸೋಮೇಶ್ವರ ವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯ ಬಿಜೆಪಿ ಎಸ್ಸಿ ಕಾರ್ಯಕಾರಣಿ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಜಿ. ಎಂ. ಸಿದ್ದೇಶ್ವರ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು.
ಗುರು ಹಾದಿಯಲ್ಲಿ ಶಿಷ್ಯರ ಹೆಜ್ಜೆ; ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ
ರಾಜ್ಯ ಕಾರ್ಯಕಾರಣಿ ಉದ್ಘಾಟಿಸಿ ಮಾತನಾಡಿದ ಲಾಲ್‌ಸಿಂಗ್ ಆರ್ಯ, "ಸುಧೀರ್ಘವಾಗಿ ದೇಶ ಆಳಿರುವ ಕಾಂಗ್ರೆಸ್ ದೇಶದ ಬಡ ಜನರ ಜೀವನದ ಜೊತೆ ಚೆಲ್ಲಾಟ ಆಡಿಕೊಂಡು ಬಂದಿದೆ" ಎಂದು ದೂರಿದರು.
ಚಾಮರಾಜನಗರ: ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದವನಿಗೆ ಜೀವಾವಧಿ ಶಿಕ್ಷೆ
"ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೇ, ಅವರ ಅಂತ್ಯಕ್ರಿಯೆಯನ್ನೂ ದೆಹಲಿಯಲ್ಲಿ ನಡೆಸದೇ, ಮಹಾರಾಷ್ಟ್ರದ ಸ್ಲಂನಲ್ಲಿ ನಡೆಸುವ ಮೂಲಕ ಅಪಮಾನ ಮಾಡಿದೆ" ಎಂದು ಹೇಳಿದರು.
ದಲಿತ ಕೇರಿಗೆ ಗ್ರಾಮ ದೇವತೆ ಮೆರವಣಿಗೆ ಆಹ್ವಾನಿಸಿದ್ದಕ್ಕೆ 60 ಸಾವಿರ ದಂಡ

ಗುಡಿಸಲು ಮುಕ್ತ ರಾಷ್ಟ್ರ ನಿರ್ಮಾಣ
"ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಐದು ಕಡೆಗಳಲ್ಲಿ ಅಂಬೇಡ್ಕರ್ ಅವರ ಸ್ಮಾರಕ ನಿರ್ಮಿಸಿ ಅವರನ್ನು ಗೌರವಿಸಿದೆ. ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನತೆಯ ವಿಕಾಸ ಮಾಡಲಿಲ್ಲ. ಹೀಗಾಗಿ ಈ ವರ್ಗದ ಜನ ಇಂದಿಗೂ ಗುಡಿಸಲುಗಳಲ್ಲಿ ವಾಸುತ್ತಿದ್ದಾರೆ. ಆದರೆ, ಗುಡಿಸಲು ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ 2022ರ ವೇಳೆಗೆ ದೇಶದ ಪ್ರತಿ ಕುಟುಂಬಕ್ಕೂ ಸೂರು ಕಲ್ಪಿಸುವ ಗುರಿ ಹೊಂದಿದ್ದಾರೆ" ಎಂದು ಲಾಲ್ ಸಿಂಗ್ ಆರ್ಯಾ ಹೇಳಿದರು.

ದೇಶವನ್ನು ರಕ್ಷಣೆ ಮಾಡುವ ಹೊಣೆಗಾರಿಕೆ
"ಗಾಂಧಿ, ಅಂಬೇಡ್ಕರ್ ಎಂದೂ ಬೆಂಕಿ ಹಚ್ಚುವ ಕೆಲಸ ಮಾಡಲಿಲ್ಲ. ಆದರೆ, ಸಿಎಎ, ಎನ್‍ಆರ್‌ಸಿ ವಿರೋಧಿಸಿ ಈ ಇಬ್ಬರು ಮಹಾನಾಯಕರ ಭಾವಚಿತ್ರ ಇಟ್ಟುಕೊಂಡು ದೇಶಕ್ಕೆ ಕೊಳ್ಳಿ ಇಡುವ ಕೆಲಸ ಮಾಡಲಾಗುತ್ತಿದೆ, ಇವರಿಂದ ದೇಶವನ್ನು ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಮೇಲಿದೆ" ಎಂದು ಲಾಲ್ ಸಿಂಗ್ ಆರ್ಯಾ ಹೇಳಿದರು.

ಕಡೆಗಣಿಸಿದ್ದು ಕಾಂಗ್ರೆಸ್ ಪಕ್ಷದ ಸಾಧನೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ದೇಶವನ್ನು ಸುಧೀರ್ಘವಾಗಿ ಆಳಿರುವ ಕಾಂಗ್ರೆಸ್ ಗಾಂಧಿ ಹಾಗೂ ಅಂಬೇಡ್ಕರ್ ಹೆಸರು ಹೇಳಿ ಮತ ಬ್ಯಾಂಕ್ ಸೃಷ್ಟಿಕೊಂಡು, ಇವರಿಬ್ಬರನ್ನು ಅತಿ ಹೆಚ್ಚು ಅಪಮಾನ ಮಾಡಿದೆ. ಎಸ್ಸಿ, ಎಸ್ಟಿ ಅವರನ್ನು ಶಿಕ್ಷಣ, ಉದ್ಯೋಗ ಮಾತ್ರವಲ್ಲಾ ಎಲ್ಲಾ ಕ್ಷೇತ್ರಗಳಲ್ಲಿಯೂ ಕಡೆಗಣಿಸಿದ್ದು ಕಾಂಗ್ರೆಸ್ ಸಾಧನೆಯಾಗಿದೆ" ಎಂದು ಆರೋಪಿಸಿದರು.

ದಲಿತ ಮುಖ್ಯಮಂತ್ರಿ
"ದಲಿತ ಮುಖ್ಯಮಂತ್ರಿ ವಿಚಾರವನ್ನು ಮುನ್ನೆಲೆಗೆ ತಂದ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ. ಜಿ. ಪರಮೇಶ್ವರ ಅವರಿಗೂ ಸರಿಯಾದ ಸ್ಥಾನಮಾನ ನೀಡಲಿಲ್ಲ. ಹೀಗೆ ನಿರಂತವಾಗಿ ದಲಿತ ನಾಯಕರನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಿಕೊಂಡು ಬಂದಿದ್ದಾರೆ. ಆದರೆ, ಬಿಜೆಪಿ ದಲಿತ ವರ್ಗಕ್ಕೆಸೇರಿದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ, ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿ ಮಾಡಿತು. ಇದನ್ನು ಗಮನಿಸಿರುವ ಪರಿಶಿಷ್ಟ ಜಾತಿಯ ಜನ ಬಿಜೆಪಿ ಕಡೆ ಹೆಚ್ಚು ಮುಖ ಮಾಡುತ್ತಿದ್ದಾರೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.