ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮುಲು ಪಿಎಯದ್ದು ಎನ್ನಲಾದ ಆಡಿಯೋ ಟೇಪ್ ವಿರುದ್ಧ ಕಾಂಗ್ರೆಸ್ ದೂರು

|
Google Oneindia Kannada News

ದಾವಣಗೆರೆ, ಡಿಸೆಂಬರ್ 04: ರಾಮುಲು ಅವರ ಪಿಎ ಮಾತನಾಡಿದ್ದ ಎನ್ನಲಾಗುತ್ತಿರುವ ಶಾಸಕರ ಖರೀದಿಗೆ ಯತ್ನಿಸುತ್ತಿರುವ ಸಂಭಾಷಣೆ ಉಳ್ಳ ಆಡಿಯೋ ಕ್ಲಿಪ್‌ ಒಂದು ವೈರಲ್ ಆಗಿದ್ದ ಆ ಬಗ್ಗೆ ರಾಜ್ಯ ಕಾಂಗ್ರೆಸ್‌ ದೂರು ನೀಡುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಿಜೆಪಿ ಎಷ್ಟು ಶಾಸಕರನ್ನಾದರೂ ಭೇಟಿ ಆಗಲಿ ಡೋಂಟ್ ಕೇರ್: ಡಿ.ಕೆ.ಶಿವಕುಮಾರ್ ಬಿಜೆಪಿ ಎಷ್ಟು ಶಾಸಕರನ್ನಾದರೂ ಭೇಟಿ ಆಗಲಿ ಡೋಂಟ್ ಕೇರ್: ಡಿ.ಕೆ.ಶಿವಕುಮಾರ್

ದಾವಣೆಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಲ್ ಆಗಿರುವ ಆಡಿಯೋ ಕ್ಲಿಪ್‌ ಬಗ್ಗೆ ಇಂದು ಸಂಜೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.

ಯಾವ ಶಾಸಕರೂ ಪಕ್ಷ ಬಿಟ್ಟುಹೋಗಲ್ಲ: ಸಿದ್ದರಾಮಯ್ಯಯಾವ ಶಾಸಕರೂ ಪಕ್ಷ ಬಿಟ್ಟುಹೋಗಲ್ಲ: ಸಿದ್ದರಾಮಯ್ಯ

ಆಡಿಯೋ ಕ್ಲಿಪ್‌ನಲ್ಲಿ ಶಾಸಕರಿಗೆ ಆಮೀಷ ಒಡ್ಡುತ್ತಿರುವ ಧ್ವನಿ ರಾಮುಲು ಪರಮಾಪ್ತ ಸುರ್ಜಿತ್ ಎಂಬುವರದ್ದು ಎನ್ನಲಾಗುತ್ತಿದೆ. ಆದರೆ ಕೆಲವು ಬಿಜೆಪಿ ಶಾಸಕರು ಅದು ಡಿ.ಕೆ.ಶಿವಕುಮಾರ್ ಆಪ್ತನ ಧ್ವನಿ ಎಂದಿದ್ದಾರೆ.

Congress give complaint against audio clip which is about MLA purchase

ಈ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದು, ಸುರ್ಜಿತ್ ನನ್ನ ಪಿಎ ಅಲ್ಲ ಅವರು ರಾಮುಲು ಅವರ ಪಿಎ. ಹಗಲು ರಾತ್ರಿ ಅವರ ಬೆನ್ನಹಿಂದೆಯೇ ಅವರು ಓಡಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆ ಸನಿಹ: ಕಾಂಗ್ರೆಸ್‌ಗೆ ಬಂಡಾಯದ ಭೀತಿ ಸಂಪುಟ ವಿಸ್ತರಣೆ ಸನಿಹ: ಕಾಂಗ್ರೆಸ್‌ಗೆ ಬಂಡಾಯದ ಭೀತಿ

ಆಡಿಯೋ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬರು ಶಾಸಕರೊಬ್ಬರಿಗೆ ಪಕ್ಷ ತ್ಯಜಿಸಲು ಭಾರಿ ಮೊತ್ತದ ಹಣದ ಆಫರ್ ನೀಡಿದ್ದಾರೆ, ಮುಂದಿನ ಚುನಾವಣೆಯ ಖರ್ಚು ನಾವೇ ಭರಿಸುತ್ತೇವೆ ಎಂದು ಸಹ ಆಡಿಯೋ ಕ್ಲಿಪ್‌ನಲ್ಲಿ ಇದೆ.

English summary
Congress decided to give complaint about audio clip in which a man trying to purhase a mla by offering crores of money and minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X