ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ಜಿಲ್ಲೆಯ 28 ಚೀಟಿ ಸಂಸ್ಥೆಗಳ ರದ್ದತಿಗೆ ನಿರ್ಧಾರ

|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 20: ಮಧ್ಯ ಕರ್ನಾಟಕದ ವಾಣಿಜ್ಯ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಕೆಲವು ಚೀಟಿ ಸಂಸ್ಥೆಗಳು ಹೊಸದಾಗಿ ಚೀಟಿ ವ್ಯವಹಾರ ಪ್ರಾರಂಭಿಸಲು ಅನುಮತಿ ಪಡೆದಿವೆ.

ಚೀಟಿ ಅಧಿನಿಯಮ-1982 ರನ್ವಯ ಚೀಟಿ ಗುಂಪುಗಳಿಗೆ ಪೂರ್ವ ಮಂಜೂರಾತಿ ಹಾಗೂ ಪ್ರಾರಂಭಿಕ ದೃಢೀಕರಣ ಪತ್ರಗಳನ್ನು ಸಹಕಾರ ಸಂಘಗಳ ಪ್ರಾಧಿಕಾರದಿಂದ ಪಡೆದಿಲ್ಲದ ಚೀಟಿ ಸಂಸ್ಥೆಗಳನ್ನು ಗುರುತಿಸಲಾಗಿದೆ.

ಅಲ್ಲದೆ ಅನುಮತಿ ಪಡೆದ ಬಳಿಕವೂ ಚೀಟಿ ವ್ಯವಹಾರ ಕೈಗೊಂಡಿಲ್ಲದ ದಾವಣಗೆರೆ ಜಿಲ್ಲೆಯ 28 ಚೀಟಿ ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಇಂತಹ ಚೀಟಿ ಸಂಸ್ಥೆಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ದಾವಣಗೆರೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.

Co-operative Societies Authority Decision To Cancelation Of 28 Chit Fund Companies In Davanagere District


ದಾವಣಗೆರೆ ಜಿಲ್ಲೆಯಲ್ಲಿ ಕೆಲವು ಚೀಟಿ ಸಂಸ್ಥೆಗಳು ಹೊಸದಾಗಿ ಚೀಟಿ ವ್ಯವಹಾರ ಪ್ರಾರಂಭಿಸಲು ಅನುಮತಿ ಪಡೆದು, ಚೀಟಿ ಅಧಿನಿಯಮ-1982ರ ಪ್ರಕರಣ 4(1) ಪ್ರಕಾರ ಚೀಟಿ ಗುಂಪುಗಳಿಗೆ ಪೂರ್ವ ಮಂಜೂರಾತಿ ಹಾಗೂ ಪ್ರಾರಂಭಿಕ ದೃಢೀಕರಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿಲ್ಲ.

ಕೆಲವು ಚೀಟಿ ಸಂಸ್ಥೆಗಳು ಅನುಮತಿ ಪಡೆದ ಆದೇಶ ದಿನಾಂಕದಿಂದ 6 ತಿಂಗಳೊಳಗೆ ಚೀಟಿ ವ್ಯವಹಾರವನ್ನು ಕೈಗೊಂಡಿಲಗಲ್ಲದ 28 ಚೀಟಿ ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಚೀಟಿ ಸಂಸ್ಥೆಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ.

28 ಚೀಟಿ ಸಂಸ್ಥೆಗಳ ವಿವರ ಇಲ್ಲಿದೆ
1. ದಾವಣಗೆರೆಯ ನಗರದ ಎನ್.ಆರ್. ರಸ್ತೆಯಲ್ಲಿರುವ ಶ್ರೀರಾಮ ಚಿಟ್ಸ್ ಪ್ರೈ.ಲಿ.
2. ನಯನ ಚಿಟ್ ಫಂಡ್, ಕೆಬಿ ಬಡಾವಣೆ.
3. ಕಪಿಲ್ ಚಿಟ್ಸ್ ಪ್ರೈ.ಲಿ., ಎನ್.ಆರ್. ರಸ್ತೆ.
4. ಸಮೃದ್ಧಿ ಚಿಟ್‍ಫಂಡ್, ಡೆಂಟಲ್ ಕಾಲೇಜು ರಸ್ತೆ.
5. ಚನ್ನಪ್ಪ ಚಿಟ್‍ಫಂಡ್, ಪಿಜೆ ಬಡಾವಣೆ.
6. ಗೌರಿಗಣೇಶ ಚಿಟ್ಸ್ ಪೈ.ಲಿ, ಪಿ.ಬಿ. ರಸ್ತೆ.
7. ಕರಾಯಿಲ್ ಚಿಟ್ಸ್ ಲಿ., ರಾಂ ಅಂಡ್ ಕೋ ಸರ್ಕಲ್.
8. ನಿಮಿಷಾಂಬ ಚಿಟ್‍ ಫಂಡ್, ಆರ್‌ಟಿಒ ಕಚೇರಿ ಎದುರು.
9. ಜಿ-1 ಚಿಟ್ಸ್ ಕರ್ನಾಟಕ, ಪಿಬಿ ರಸ್ತೆ.
10. ಎಸ್‍ಎಂಜೆ ಶ್ರೀನಿಧಿ ಚಿಟ್‍ ಫಂಡ್ಸ್, ಮಂಡಿಪೇಟೆ.
11. ರಾಘವೇಂದ್ರ ಚಿಟ್‍ ಫಂಡ್, ಎಸ್‍ಎಸ್ ಬಡಾವಣೆ.
12. ಅಪೂರ್ವ ಚಿಟ್‍ ಫಂಡ್, ಆರ್‌ಟಿಒ ಎದುರು.
13. ವಿನಯ್ ಚಿಟ್ ಫಂಡ್ಸ್, ಐಬಿ ರಸ್ತೆ.
14. ಸಿರಿ ಚಿಟ್‍ಫಂಡ್ಸ್ ಕೆಟಿಜೆ ನಗರ, ನಿಟ್ಟುವಳಿ ಮುಖ್ಯರಸ್ತೆ.
15. ಚೇತನಾ ಚಿಟ್ಸ್ ಹಾವೇರಿ ಪ್ರೈ.ಲಿ., ಪಿ.ಬಿ. ರಸ್ತೆ.
16. ಗೋಕುಲಂ ಚಿಟ್ ಅಂಡ್ ಫೈನಾನ್ಸ್ ಕಂಪನಿ ಲಿ. ಡೆಂಟಲ್ ಕಾಲೇಜು ರಸ್ತೆ.
17. ಕುಬೇರ ಚಿಟ್ಸ್ ಫಂಡ್ಸ್ ಕುವೆಂಪು ರಸ್ತೆ, ಕೆಬಿ ಬಡಾವಣೆ.
18. ಕೆಬಿಎಸ್ ಅದೃಷ್ಟ ಚಿಟ್‍ಫಂಡ್ಸ್.
19. ದುರ್ಗಾ ಚಿಟ್‍ ಫಂಡ್ಸ್ ಪ್ರಜಾ ಹೋಟೆಲ್ ಹತ್ತಿರ.
20. ಸಮೃದ್ಧಿ ಚಿಟ್ ಫಂಡ್ಸ್ ಸಿದ್ದವೀರಪ್ಪ ಬಡಾವಣೆ.
21. ಸೇವಾಲಾಲ್ ಚಿಟ್‍ ಫಂಡ್ಸ್ ದೇವರಾಜ ಅರಸು ಬಡಾವಣೆ.
22. ಮಂಜುನಾಥ ಚಿಟ್‍ ಫಂಡ್ಸ್ ಸರಸ್ವತಿ ನಗರ.
23. ಶಶಿಕಿರಣ್ ಚಿಟ್‍ ಫಂಡ್ಸ್ ಸಿಜಿ ಆಸ್ಪತ್ರೆ ರಸ್ತೆ, ಪಿ.ಜೆ.ಬಡಾವಣೆ.
24. ಹರಿಹರದ ಹೊಯ್ಸಳ ಚಿಟ್‍ಫಂಡ್ಸ್,
25. ಸಿದ್ದಿವಿನಾಯಕ ಚಿಟ್ ಫಂಡ್ಸ್ ಹರಿಹರ.
26. ಭಾಗ್ಯೋದಯ ಚಿಟ್ ಫಂಡ್ಸ್ ಹಾಗೂ
27. ಹರಪನಹಳ್ಳಿಯ ಆರ್‌ಕೆ ಚಿಟ್ ಫಂಡ್ಸ್.

ಈ ಮೇಲೆ ತಿಳಿಸಿದ ಚೀಟಿ ಸಂಸ್ಥೆಗಳಿಗೆ ಸಂಬಂಧಿಸಿದವರು 10 ದಿನಗಳ ಒಳಗಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಆಂಜನೇಯ ಸ್ವಾಮಿ ದೇವಸ್ಥಾನದ ಎದುರು, ವಿದ್ಯಾನಗರ 4ನೇ ಬಸ್‌ಸ್ಟಾಪ್, ದಾವಣಗೆರೆ ಇವರನ್ನು ಭೇಟಿ ಮಾಡುವಂತೆ ಸೂಚನೆ ನೀಡಲಾಗಿದೆ.

ತಪ್ಪಿದಲ್ಲಿ ಎಲ್ಲ 28 ಚೀಟಿ ಸಂಸ್ಥೆಗಳನ್ನು ರದ್ದುಪಡಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು. ಹಾಗೂ ಮುಂದೆ ಬರುವ ಯಾವುದೇ ಹೊಣೆಗಾರಿಕೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹೊಣೆಗಾರರಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recommended Video

ಕಾಂಗ್ರೆಸ್ಸ್ ಗೆ ಮುಖ ಭಂಗ | Oneindia Kannada

English summary
28 Chit Fund Companies have been identified which have not yet started Chit Business In Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X