ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ವಿರೋಧ ಪಕ್ಷದವರಿಗೆ ಕನಸಲ್ಲೂ ಸಿಎಂ ಬರ್ತಿದ್ದಾರೆ" ಎಂದು ಅಣಕಿಸಿದ ಗೃಹ ಸಚಿವ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್ 2: "ವಿರೋಧ ಪಕ್ಷಗಳಿಗೆ ಕನಸಿನಲ್ಲೂ ಯಡಿಯೂರಪ್ಪ ಬರ್ತಾರೆ, ಅದಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ" ಎಂದು ದಾವಣಗೆರೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಯಿ ವ್ಯಂಗ್ಯವಾಡಿದ್ದಾರೆ.

ಹಾವೇರಿಯ ರಾಣಿಬೆನ್ನೂರು ಕ್ಷೇತ್ರದ ಉಪ ಚುನಾವಣೆಯ ಪ್ರಚಾರಕ್ಕೆ ಹೊರಡುವ ಮುನ್ನ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ‌ ಮಾತನಾಡಿದ ಅವರು, "ಬಿಜೆಪಿಯವರು ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಾರೆ ಎಂದು ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವ ಎರಡು ಪಕ್ಷಗಳು ಈ ರೀತಿ ಮಾಡುವಂತಹ ಸಾಧ್ಯತೆ ಇರಬಹುದು ಎಂದು ನನಗೆ ಅನ್ನಿಸುತ್ತೆ. ಆದ್ದರಿಂದ ಈ ರೀತಿ ಹೇಳುತ್ತಿದ್ದಾರೆ. ಕಾನೂನಿನ ಪ್ರಕಾರ ಚುನಾವಣೆ ನಡೆಯಬೇಕು ಹಾಗೂ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ" ಎಂದು ತಿಳಿಸಿದರು.

ಚುನಾವಣಾ ಪ್ರಕ್ರಿಯೆಯಿಂದ ಬೊಮ್ಮಾಯಿ ದೂರವಿಡಲು ಎಚ್.ಕೆ.ಪಾಟೀಲ್ ಆಗ್ರಹಚುನಾವಣಾ ಪ್ರಕ್ರಿಯೆಯಿಂದ ಬೊಮ್ಮಾಯಿ ದೂರವಿಡಲು ಎಚ್.ಕೆ.ಪಾಟೀಲ್ ಆಗ್ರಹ

"ವಿರೋಧ ಪಕ್ಷಗಳಿಗೆ ಗೊತ್ತಾಗಿದೆ 15 ಕ್ಕೆ 15 ಕ್ಷೇತ್ರಗಳಲ್ಲಿ ಸೋಲು ಖಚಿತ ಎಂದು. ಅದಕ್ಕೆ ನಾವು ಹೊಸ ಸರ್ಕಾರ ಮಾಡ್ತೀವಿ ಎಂದು ಹೊಸ ರಾಗ ಪ್ರಾರಂಭಿಸಿದ್ದಾರೆ. ಒಂದು ವಾರದಿಂದ ಸರ್ಕಾರ ಮಾಡೋಲ್ಲ ಎಂದವರು ಈಗ ಸರ್ಕಾರ ಮಾಡ್ತಿವಿ ಎಂದಿದ್ದಾರೆ. ಸೋಲುವ ಭೀತಿಯಿಂದ ನಮ್ಮ ಮತದಾರರಾದ್ರೂ ಮತ ಹಾಕಲಿ ಎಂದು ಈ ರೀತಿ‌ ಮಾತನಾಡುತ್ತಿದ್ದಾರೆ. ಇಷ್ಟೇ ಅಲ್ಲ, ಕಾಂಗ್ರೆಸ್ ನ ಹರಿಪ್ರಸಾದ್ ಹಾಗೂ ಮೊಯ್ಲಿ ಇತ್ತೀಚಿನ ಮಾತುಗಳನ್ನು ಕೇಳಿದರೆ ಸೋಲುತ್ತೇವೆ ಎನ್ನುವುದು ಅವರಿಗೆ ಗೊತ್ತಾಗಿರುವಂತಿದೆ" ಎಂದರು.

CM IS Coming In The Dreams Of Opposition Party Members Said Home Minister In Davanagere

"ಕಾಂಗ್ರೆಸ್ ನಲ್ಲಿ ಆಂತರಿಕ ಹೊಂದಾಣಿಕೆ ಇಲ್ಲ ಎನ್ನುವುದು ಗೊತ್ತಾಗಿದೆ. ಸಿದ್ದರಾಮಯ್ಯ ಎಲ್ಲಾ ಕಡೆ ಒಬ್ರೆ ಓಡಾಡುತ್ತಾರೆ, ಉಳಿದವರು ಪತ್ರಿಕಾಗೋಷ್ಠಿಗೆ ಸೀಮಿತವಾಗಿದ್ದಾರೆ. ಕಾಂಗ್ರೆಸ್ ಗೆ ಸೋಲು ಖಚಿತ ಎನಿಸಿದೆ" ಎಂದು ಹೇಳಿದರು.

English summary
"CM Yeddyurappa is coming in the dreams of opposition parties. So they are blaming unnecessarily" said home minister basavaraj bommai in davanagere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X