• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಠ್ಯಪರಿಷ್ಕರಣೆ ವಿವಾದಕ್ಕೆ ಸಿಎಂ ಅಂತ್ಯ ಹಾಡಲಿ: ಬರಗೂರು ರಾಮಚಂದ್ರಪ್ಪ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, 29: "ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಲಾಗುತ್ತಿದೆ.‌ ಆ ಮಟ್ಟಕ್ಕೆ ಇಳಿದು ಉತ್ತರವಾಗಲೀ, ಪ್ರತಿಕ್ರಿಯೆ ಆಗಲೀ ನೀಡುವ ಮನುಷ್ಯ ನಾನಲ್ಲ. ಕರ್ನಾಟಕದ ಜನ ನೋಡಿಕೊಳ್ಳುತ್ತಾರೆ‌. ಬೇಕಾದಂತಹ ಉತ್ತರವನ್ನು ಜನರೇ ನೀಡುತ್ತಾರೆ" ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಪಠ್ಯಪುಸ್ತಕ ಮರು ಪರಿಷ್ಕರಣೆ ಸಂಬಂಧ ಈಗ ವಿವಾದವಾಗುತ್ತಿದೆ. ನನ್ನ ಕಳಕಳಿ ಎಂದರೆ ಶೈಕ್ಷಣಿಕ ಕ್ಷೇತ್ರದ ಘನತೆ ಉಳಿಯಬೇಕು. ಈಗಿನ ಕಲುಷಿತ ವಾತಾವರಣದಲ್ಲಿ ನಾನು ಯಾವುದೇ ಆರೋಪಕ್ಕೆ ಉತ್ತರ ಕೊಡಲು ಹೋಗಲ್ಲ. ನನಗೆ ಕನ್ನಡ ಸಂವೇದನೆಯು ಕನ್ನಡ ಮೌಲ್ಯ ಕಲಿಸಿಕೊಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಮಧ್ಯಪ್ರವೇಶಿಬೇಕು. ಎಲ್ಲವನ್ನೂ ಪರಾಮರ್ಶಿಸಿ ವಿವಾದಕ್ಕೆ ಕೊನೆ ಹಾಡಬೇಕು'' ಎಂದು ಒತ್ತಾಯಿಸಿದರು.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಸಿ. ನಾಗೇಶ್‌, "ಪ್ರಸ್ತುತ ರಾಜ್ಯದಲ್ಲಿ ಉಂಟಾಗಿರುವ ಪಠ್ಯಪುಸ್ತಕ ವಿವಾದ ನಿಕಟಪೂರ್ವ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಾರಣ" ಎಂದು ನೇರ ಆರೋಪ ಮಾಡಿದ್ದರು. ಇದಕ್ಕೆ ರಾಮಚಂದ್ರಪ್ಪ ತಮ್ಮ ಸ್ಪಷ್ಟನೆ ನೀಡಿದ್ದಾರೆ.

ಪರಿಷ್ಕರಣೆ ವೇಳೆ ಬದಲಾವಣೆ ಸಾಮಾನ್ಯ

ಪರಿಷ್ಕರಣೆ ವೇಳೆ ಬದಲಾವಣೆ ಸಾಮಾನ್ಯ

"ಪಠ್ಯ ಪರಿಷ್ಕರಣೆ ವೇಳೆ ಅನೇಕ ಪಠ್ಯಗಳನ್ನು ಕೈಬಿಟ್ಟಿದ್ದಾರೆ. ಮತ್ತೆ ಕೆಲ ಪಠ್ಯವನ್ನು ಸೇರಿಸಿದ್ದಾರೆ. ನಾವು ಕೂಡ ಪರಿಷ್ಕರಣೆ ಮಾಡುವಾಗಲೂ ಕೆಲವು ಪಠ್ಯವನ್ನು ಕೈಬಿಟ್ಟಿದ್ದೆವು. ಮತ್ತೆ ಕೆಲವನ್ನು ಸೇರಿಸಿದ್ದೆವು. ಯಾಕೆ ಸೇರಿಸಿದ್ವಿ, ಯಾಕೆ ಕೈ ಬಿಟ್ವಿ ಎನ್ನುವುದಕ್ಕೆ ಎಲ್ಲವನ್ನೂ ಸಾಧಾರಣವಾಗಿ ಎಲ್ಲರಿಗೂ ಅರ್ಥ ಮಾಡಿಸುವ ನಿಟ್ಟಿನಲ್ಲಿ ಕೊಟ್ಟಿದ್ದೆವು. ಪರಿಷ್ಕರಣೆ ಆಗುತ್ತಲೇ ಇರುತ್ತದೆ. ಆಯಾ ಸಂದರ್ಭಕ್ಕೆ ಪಠ್ಯ ಪರಿಷ್ಕರಣೆ ಆಗಲೇಬೇಕು. ಆದರೆ ಹೇಗಾಗಬೇಕು ಎಂಬುದು ಬಹಳ ಮುಖ್ಯ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ಸಂವಿಧಾನ ಆಶಯಗಳುಳ್ಳ ಚೌಕಟ್ಟು ಎಂಬ ಎರಡು ಅಂಶಗಳಿವೆ. ಸಂವಿಧಾನದ ವಿರುದ್ಧ ಪಠ್ಯಪುಸ್ತಕಗಳ ರಚನೆ, ಪರಿಷ್ಕರಣೆ ನಡೆಯಬಾರದು" ಎಂದು ಪ್ರತಿಪಾದಿಸಿದರು.

ಸಿಎಂ ಬೊಮ್ಮಾಯಿ ಮಧ್ಯ ಪ್ರವೇಶಿಸಬೇಕು

ಸಿಎಂ ಬೊಮ್ಮಾಯಿ ಮಧ್ಯ ಪ್ರವೇಶಿಸಬೇಕು

"ಪಠ್ಯ ಪುಸ್ತಕ ಪರಿಷ್ಕರಣೆ ವಿಷಯದಲ್ಲಿ ವೈಯಕ್ತಿಕ ತೇಜೋವಧೆ ಮಾಡುವ ರೀತಿಯಲ್ಲಿ ವಿವಾದ ನಡೆಯುತ್ತಿದೆ. ಈ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಈ ವಿವಾದಗಳು ತಾರಕಕ್ಕೇರುತ್ತಿರುವ ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಬೇಕು. ಕೂಲಂಕುಷವಾಗಿ ಪರಿಶೀಲಿಸಬೇಕು. ಪ್ರಮುಖ ಲೇಖಕರು ಪಠ್ಯದಿಂದ ಹೋಗಿರುವುದರಿಂದ ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಸಾಧ್ಯವಾಗದಿರುವ ಸನ್ನಿವೇಶ ಸೃಷ್ಟಿಯಾಗಿದೆ. ಇವೆಲ್ಲವನ್ನೂ ಪರಿಶೀಲಿಸಿ ಸಿಎಂ ವಿವಾದಕ್ಕೆ ತೆರೆ ಎಳೆಯಬೇಕು. ವಿದ್ಯಾರ್ಥಿಗಳು, ಪೋಷಕರಲ್ಲಿ ಪಠ್ಯಪರಿಷ್ಕರಣೆ ವಿವಾದದಿಂದ ಬೇಸರವಾಗಬಾರದು, ನೋವುಂಟಾಗಬಾರದು. ಶಿಕ್ಷಣದ ಘನತೆ ಹೋಗಬಾರದು ಎಂಬ ಕಾರಣಕ್ಕೆ ಸಿಎಂ ಅವರು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು" ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ಸಂಪೂರ್ಣ ಬದಲಾಯಿಸಿಲ್ಲ, ಕೆಲವನ್ನು ಸೇರಿಸಿದ್ದೇವೆ

ಸಂಪೂರ್ಣ ಬದಲಾಯಿಸಿಲ್ಲ, ಕೆಲವನ್ನು ಸೇರಿಸಿದ್ದೇವೆ

ಭಾನುವಾರ ಪಠ್ಯಪುಸ್ತಕ ವಿವಾದದ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, "ಎಲ್ಲಾ ಪುಸ್ತಕಗಳನ್ನು ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯೇ ಪರಿಷ್ಕರಣೆ ಮಾಡಿದೆ. ಈಗ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯವನ್ನು ಪರಿಷ್ಕರಣೆ ಮಾಡಲಾಗಿದೆ. ಅದರಲ್ಲಿ ಭಗತ್‍ಸಿಂಗ್ ಕುರಿತಾದ ಪಾಠವನ್ನು ತೆಗೆದು ಹಾಕಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ವೀರರು ಎನ್ನುವ ಶಿರೋನಾಮೆಯಲ್ಲಿ ರಚನೆಯಾಗಿರುವ ಪಾಠದಲ್ಲಿ ಟಿಪ್ಪುಸುಲ್ತಾನ್ ಕುರಿತೂ ಬರೆಯಲಾಗಿದೆ. ವೀರಮದಕರಿ ನಾಯಕ, ಕಿತ್ತೂರುರಾಣಿ ಚೆನ್ನಮ್ಮ, ಹಲಗಲಿ ಬೇಡರು ಹೋರಾಡಿಲ್ಲವೇ, ಈಗ ಅವರನ್ನು ಸಹ ಸೇರ್ಪಡೆ ಮಾಡಿದ್ದೇವೆ. ಇದು ತಪ್ಪೇ?" ಎಂದು ಪ್ರಶ್ನಿಸಿದ್ದರು.

ಪಠ್ಯ ಪರಿಷ್ಕರಣೆ ಸಮರ್ಥಿಸಿಕೊಂಡಿದ್ದ ಚಕ್ರತೀರ್ಥ

ಪಠ್ಯ ಪರಿಷ್ಕರಣೆ ಸಮರ್ಥಿಸಿಕೊಂಡಿದ್ದ ಚಕ್ರತೀರ್ಥ

ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣೆಯ ವೇಳೆ ಬ್ರಾಹ್ಮಣೀಕರಣವಾಗಿದೆ ಎಂದು ರಾಮಚಂದ್ರಪ್ಪ ಬಳಗ ಆರೋಪಿಸಿದೆ. ಇದಕ್ಕೆ ತಮ್ಮ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಉತ್ತರಿಸಿರುವ ರೋಹಿತ್ ಚಕ್ರತೀರ್ಥ, "ರಾಮಚಂದ್ರಪ್ಪ ಬಳಗ ಪಠ್ಯ ಪರಿಷ್ಕರಣೆ ವೇಳೆ 1ರಿಂದ 10ನೇ ತರಗತಿಯ ಕನ್ನಡ ಪಠ್ಯವೊಂದರಿಂದಲೇ ಬ್ರಾಹ್ಮಣೇತರರಾದ 33 ಸಾಹಿತಿಗಳ ಬರಹಗಳನ್ನು ಕೈಬಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಮತ್ತೆ 33 ಬೇರೆ ಬೇರೆ ಸಾಹಿತಿಗಳ ಬರಹಗಳನ್ನು ಸೇರಿಸುವಾಗ 22 ಮಂದಿ ಬ್ರಾಹ್ಮಣ ಸಾಹಿತಿಗಳ ಬರಹಳನ್ನು ಸೇರಿಸಲಾಗಿದೆ. ಆದರೆ ಅವರು ಮಾಡಿದ್ದು ಬ್ರಾಹ್ಮಣೀಕರಣ ಆಗುವುದಿಲ್ಲವೇ, ನಾವು ಮಾಡಿದ್ದು ಮಾತ್ರ ಹೇಗೆ ಬ್ರಾಹ್ಮಣೀಕರಣ ಆಗುತ್ತದೆ?" ಎಂದು ಪ್ರಶ್ನಿಸಿದ್ದರು.

v
English summary
Writer Pro.Baraguru Ramachandrappa urge to chief minister Basavaraj Bommai to stop the textbook revision controversy. Education minister directly target Baraguru Ramachandrappa in the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X