• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ ಪಾಲಿಕೆ ಉಪ ಚುನಾವಣೆ; ಶಾಮನೂರು ಸೊಸೆ ಪ್ರಚಾರ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ17: ದಾವಣಗೆರೆ ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್ ಉಪ ಚುನಾವಣೆ ಕಣ ರಂಗೇರಿದೆ. ಚುನಾವಣಾ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಹಿರಿಯ ಕಾಂಗ್ರೆಸ್ ನಾಯಕ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಪ್ರಚಾರ ನಡೆಸಿದರು.

ಪಾಲಿಕೆಯ 37ನೇ ವಾರ್ಡ್‌ನಿಂದ ರೇಖಾರಾಣಿ ಹಾಗೂ 28ನೇ ವಾರ್ಡ್‌ನಿಂದ ಹುಲ್ಲುಮನೆ ಗಣೇಶ್ ಅಭ್ಯರ್ಥಿಗಳು. ಪ್ರಭಾ ಮಲ್ಲಿಕಾರ್ಜಿನ್ ಅಭ್ಯರ್ಥಿಗಳ ಪರವಾಗಿ ಮನೆ-ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದರು. ಶುಕ್ರವಾರ ಉಪ ಚುನಾವಣೆ ಮತದಾನ ನಡೆಯಲಿದೆ.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಂಗಳವಾರ ಬೆಳಗ್ಗೆಯಿಂದಲೇ ಉತ್ಸಾಹದಿಂದಲೇ ಮತಬೇಟೆ ನಡೆಸುತ್ತಿದ್ದಾರೆ. ಕೆಟಿಜೆ ನಗರದ ಬನ್ನಿ ಮಹಾಕಾಳಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಭಾ ಮಲ್ಲಿಕಾರ್ಜುನ್ ಅಭ್ಯರ್ಥಿಗಳ ಗೆಲುವಿಗೆ ಪ್ರಾರ್ಥಿಸಿದರು.

ಕಳೆದ ಒಂದು ವಾರದಿಂದ ರೇಖಾ ರಾಣಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲರೂ ಕಾಂಗ್ರೆಸ್‌ಗೆ ಮತ ನೀಡಬೇಕು. ಜನರ ನಿರೀಕ್ಷೆಯೂ ಕಾಂಗ್ರೆಸ್ ಗೆಲ್ಲಿಸಬೇಕು ಎಂದಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರ ನಿರೀಕ್ಷೆಯಂತೆ ಸಮಾಜ ಸೇವೆ ಮಾಡಲು ರೇಖಾರಾಣಿ ಉತ್ಸುಹಕರಾಗಿದ್ದಾರೆ. ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

City Corporation By Eelection Prabha Mallikarjun Campaign For Congress

ಎಲ್ಲರೂ ಕಾಂಗ್ರೆಸ್ ಗೆ ನಿಮ್ಮ ಮತ ನೀಡಿ; ಹುಲ್ಲುಮನೆ ಗಣೇಶ್ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ್, "ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್, ತೈಲ ಬೆಲೆ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಪಕ್ಷ ಬಿಟ್ಟು ಹೋದವರ ಬಗ್ಗೆ ನಾವು ಯಾವ ರೀತಿ ಉತ್ತರ ಕೊಡಬಹುದು ಎಂಬುದಕ್ಕೆ ಇರುವುದು ಒಂದೇ ಅಸ್ತ್ರ ಮತದಾನ. ಪ್ರೀತಿ, ವಿಶ್ವಾಸಕ್ಕೆ ನಿಮ್ಮ ಮತ ನೀಡಿ. ಎಲ್ಲರೂ ಕಾಂಗ್ರೆಸ್‌ ಬೆಂಬಲಿಸಿ" ಎಂದರು.

English summary
Davanagere city corporation by-election for ward 28 and 37 of. Congress MLA Dr. Shamanur Shivashankarappa's daughter in law Prabha Mallikarjun campaign for Congress candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X