ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರ ಪೂಜೆಗೆ ಅಡ್ಡಿ ಎಂದು ಅಂಬೇಡ್ಕರ್ ಪ್ರತಿಮೆ ತೆರವಿಗೆ ಮುಂದಾದ ಗ್ರಾ.ಪಂ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 12: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ತೆರವುಗೊಳಿಸಲು ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮೇಗಳಗೆರೆ ಗ್ರಾಮ ಪಂಚಾಯತಿ ನಿರ್ಧಾರ ತೆಗೆದುಕೊಂಡಿದೆ.

ಕಳೆದ ನಾಲ್ಕು ತಿಂಗಳಿನಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದ್ದ ಪ್ರತಿಮೆ, ಇನ್ನೇನು ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಇದೀಗ ಪ್ರತಿಮೆಗೆ ವಿರೋಧ ವ್ಯಕ್ತವಾಗಿ, ಪ್ರತಿಮೆ ತೆರವು ಮಾಡುವಂತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೂಡ ಕೈಗೊಳ್ಳಲಾಗಿದೆ.

ಕಾನೂನು ಹಿಂದೂಗಳಿಗೆ ಮಾತ್ರವಾ, ಮುಸ್ಲಿಮರಿಗೆ ಇಲ್ವಾ: ಮುತಾಲಿಕ್ಕಾನೂನು ಹಿಂದೂಗಳಿಗೆ ಮಾತ್ರವಾ, ಮುಸ್ಲಿಮರಿಗೆ ಇಲ್ವಾ: ಮುತಾಲಿಕ್

ಇದರಿಂದ ಆಕ್ರೋಶಗೊಂಡ ದಲಿತ ಸಂಘಟನೆಗಳು ಇದೀಗ ಹೋರಾಟಕ್ಕೆ ಮುಂದಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮೇಗಳಗೆರೆ ಗ್ರಾಮದ ಬಸ್ ನಿಲ್ದಾಣದ ಬಳಿ ಕಳೆದ ನಾಲ್ಕು ತಿಂಗಳಿಂದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ.

Decision To Clear Ambedkar Statue By Chikkamegalagere Grama Panchayat

ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಕರಗಲ್ಲು ಇದ್ದು, ಪೂಜೆಗೆ ತೊಂದರೆಯಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಗಲಾಟೆ ಉಂಟಾಗಬಹುದೆಂದು ಗ್ರಾಮಪಂಚಾಯಿತಿ ಸದಸ್ಯರು ತುರ್ತು ಸಭೆ ಕರೆದು, ಅಂಬೇಡ್ಕರ್ ಪ್ರತಿಮೆ ತೆರವು ಮಾಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.

ವಿಡಿಯೋ: ದಾವಣಗೆರೆಯಲ್ಲಿ ನೋ ಕೊರೊನಾ ಫಿಯರ್, ಹೋಳಿ ಹಬ್ಬ ಫುಲ್ ಜೋರುವಿಡಿಯೋ: ದಾವಣಗೆರೆಯಲ್ಲಿ ನೋ ಕೊರೊನಾ ಫಿಯರ್, ಹೋಳಿ ಹಬ್ಬ ಫುಲ್ ಜೋರು

ಅಂಬೇಡ್ಕರ್ ಪ್ರತಿಮೆ ತೆರವು ಮಾಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರು ನಿರ್ಣಯ ಕೈಗೊಂಡು, ಅಂಬೇಡ್ಕರ್ ಪ್ರತಿಮೆ ಬಳಿ ನೋಟಿಸ್ ಕೂಡ ಅಂಟಿಸಿದ್ದಾರೆ. ಇದು ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

Decision To Clear Ambedkar Statue By Chikkamegalagere Grama Panchayat

ನಾವು ಯಾವುದೇ ರಾಜಕಾರಣಿಯ ಪ್ರತಿಮೆ ನಿರ್ಮಾಣ ಮಾಡುತ್ತಿಲ್ಲಾ, ಸಂವಿಧಾನ ಶಿಲ್ಪಿಯ ಪ್ರತಿಮೆ ನಿರ್ಮಾಣ ಮಾಡುತ್ತಿರೋದು ಯಾವುದೇ ಕಾರಣಕ್ಕೂ ಪ್ರತಿಮೆ ತೆರವು ಮಾಡಲು ಬಿಡುವುದಿಲ್ಲಾ, ಒಂದು ವೇಳೆ ತೆರವು ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.

ಇದೀಗ ಅಂಬೇಡ್ಕರ್ ಪ್ರತಿಮೆ ತೆರವು ವಿಚಾರದಿಂದ ಇದೀಗ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಈ ರೀತಿಯ ನಿರ್ಣಯ ಕೈಗೊಂಡಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

English summary
The Chikmegalagere Gram Panchayat of Harapanahalli taluk has taken a decision to clear the statue of Dr BR Ambedkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X