ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಕಾಂಗ್ರೆಸ್ ಮುಖಂಡನ ಕೊಂದವರ ಸುಳಿವು ಸಿಕ್ಕಿದ್ದು ಹೇಗೆ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 12; ಆತ ಬೆಸ್ಕಾಂ ಗುತ್ತಿಗೆದಾರ‌, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡನೂ ಆಗಿದ್ದ. ಕಳೆದ ಸೆಪ್ಟಂಬರ್ 2ರಂದು ಇದ್ದಕ್ಕಿದ್ದಂತೆ ದಿಢೀರ್ ನಾಪತ್ತೆಯಾಗಿದ್ದ. ವಾಯುವಿಹಾರಕ್ಕೆ ಅಂತಾ ಹೋದವನು ನಿಗೂಢವಾಗಿ ಕಣ್ಮರೆಯಾಗಿದ್ದ.

ಆತನ ಪತ್ನಿ ಠಾಣೆಗೆ ಬಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಪತಿ ಕಾಣುತ್ತಿಲ್ಲ, ಹುಡುಕಿಕೊಡಿ ಎಂದು ಮನವಿ ಮಾಡಿದ್ದರು. ಆದರೆ ತನಿಖೆಗೆ ಇಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಆತನನ್ನು ಕೊಂದು ಹಾಕಿ ಮಣ್ಣಿನಲ್ಲಿ ಶವ ಹೂತಿಟ್ಟಿದ್ದರು. ಖಾಕಿ ತನ್ನದೇ ದಾಟಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

ದಾವಣಗೆರೆ; ಸಿಲಿಂಡರ್ ಸ್ಫೋಟ, ಬೀದಿಗೆ ಬಿದ್ದ ಕುಟುಂಬದಾವಣಗೆರೆ; ಸಿಲಿಂಡರ್ ಸ್ಫೋಟ, ಬೀದಿಗೆ ಬಿದ್ದ ಕುಟುಂಬ

ಇದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ನಡೆದ ಹತ್ಯೆಯ ಸ್ಯಾಂಪಲ್. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮೂವರು ಈ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಮಂಗಳೂರು; ಪಕ್ಕದ ಫ್ಲ್ಯಾಟ್ ವ್ಯಕ್ತಿಯನ್ನೇ ಹನಿಟ್ರ್ಯಾಪ್ ಮಾಡಿದ ಜೋಡಿ! ಮಂಗಳೂರು; ಪಕ್ಕದ ಫ್ಲ್ಯಾಟ್ ವ್ಯಕ್ತಿಯನ್ನೇ ಹನಿಟ್ರ್ಯಾಪ್ ಮಾಡಿದ ಜೋಡಿ!

 Chennagiri Congress leader Murder 3 Arrested

ಬೆಸ್ಕಾಂ ಗುತ್ತಿಗೆದಾರ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡ ಜೈನುಲ್ಲಾ ಖಾನ್ ಹತ್ಯೆಗೀಡಾದವರು. ಅದೇ ಗ್ರಾಮದ ಇಸ್ಮಾಯಿಲ್ ಖಾನ್, ಅಮ್ಜದ್ ಖಾನ್ ಹಾಗೂ ನೂರ್ ಅಹ್ಮದ್ ಬಂಧಿತ ಆರೋಪಿಗಳು.

 ದಾವಣಗೆರೆ ಫೈರಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಎಫ್ಐಆರ್! ದಾವಣಗೆರೆ ಫೈರಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಎಫ್ಐಆರ್!

ಘಟನೆ ಹಿನ್ನಲೆ; ವಾಕಿಂಗ್ ಗೆ ಹೋಗಿದ್ದ ಜೈನುಲ್ಲಾ ಖಾನ್ ಸೆಪ್ಟಂಬರ್ 2ರಂದು ದಿಢೀರ್ ನಾಪತ್ತೆಯಾಗಿದ್ದರು‌‌‌. ಎಲ್ಲೇ ಹುಡುಕಾಡಿದರೂ ಪತ್ತೆ ಆಗಿರಲಿಲ್ಲ. ಅವರ ಪತ್ನಿ ಸಬ್ರಿನ್ ಬಾನು ಬಸವಾಪಟ್ಟಣ ಪೊಲೀಸರಿಗೆ ತನ್ನ ಪತಿ ಮನೆಗೆ ಬಂದಿಲ್ಲ ಎಂದು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಬಸವಪಟ್ಟಣ ಪೊಲೀಸರು ತನಿಖೆ ಕೈಗೊಂಡರು. ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಅಮ್ಜದ್ ಖಾನ್ ತನ್ನ ಸಹೋದರ ಇಸ್ಮಾಯಿಲ್ ಖಾನ್ ಹಾಗೂ ನೂರ್ ಅಹ್ಮಸದ್ ಜೊತೆ ಸೇರಿಕೊಂಡು ಹಲ್ಲೆ ನಡೆಸಿ ಜೈನುಲ್ಲಾ ಖಾನ್ ಹತ್ಯೆ ಮಾಡಿ ಬಳಿಕ ಮಣ್ಣಲ್ಲಿ ಹೂತು ಹಾಕಿದ್ದರು‌. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಈ ವಿಷಯ ಬಾಯ್ಬಿಟ್ಟಿದ್ದಾರೆ.

ಸಿಕ್ಕಿಬಿದ್ದದ್ದು ಹೇಗೆ?; ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆಗೆ ಇಳಿದರು. ಬೆಸ್ಕಾಂ ಗುತ್ತಿಗೆದಾರ ಹಾಗೂ ರಾಜಕಾರಣಿಯಾದ ಕಾರಣ ವೈಯಕ್ತಿಕ ದ್ವೇಷದಿಂದಲೋ ರಾಜಕೀಯ ಮತ್ಸರದಿಂದ ಹತ್ಯೆ ಆಗಿರಬಹುದು ಎಂಬ ನಿಟ್ಟಿನಲ್ಲಿಯೂ ತನಿಖೆಗೆ ಇಳಿದರು.

ಆಗ ಜೈನುಲ್ಲಾ ಖಾನ್ ವಾಕಿಂಗ್ ಗೆ ಹೋದ ಪ್ರದೇಶದ ಮೊಬೈಲ್ ಟವರ್ ಪರಿಶೀಲಿಸಿದ್ದಾರೆ‌. ಈ ವೇಳೆ ಹಂತಕರು ಹಾಗೂ ಜೈನುಲ್ಲಾ ಖಾನ್ ಮೊಬೈಲ್ ಟವರ್ ಹತ್ತಿರದಲ್ಲೇ ತೋರಿಸಿದೆ. ಆಗ ಆರೋಪಿಗಳು ಯಾರು? ಎಂಬುದು ಪತ್ತೆ ಹಚ್ಚುವುದು ಕಷ್ಟವಾಗಲಿಲ್ಲ.

ಇನ್ನು ಈ ಹಿಂದೆಯೇ ಅಮ್ಜದ್ ಖಾನ್ ಹಾಗೂ ಜೈನುಲ್ಲಾ ಖಾನ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ತನ್ನ ಪತ್ನಿ ಜೊತೆಗಿನ ಸಂಬಂಧ ಕೈಬಿಡದಿದ್ದರೆ ಪರಿಣಾಮ ನೆಟ್ಟಗಿರದು ಎಂಬ ಎಚ್ಚರಿಕೆ ನೀಡಿದ್ದ ಅಮ್ಜದ್ ಖಾನ್ ಒಬ್ಬರೇ ವಾಯುವಿಹಾರಕ್ಕೆ ಹೋಗುತ್ತಿದ್ದನ್ನು ಗಮನಿಸಿ ಯೋಜನೆ ರೂಪಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 2ರಂದು ವಾಯು ವಿಹಾರಕ್ಕೆ ಹೋಗಿದ್ದಾಗ ಜೈನುಲ್ಲಾ ಖಾನ್ ಅಪಹರಣ ಮಾಡಿ ಹತ್ಯೆ ಮಾಡಲಾಗಿತ್ತು. ಆರೋಪಿಗಳು ಉಸಿರುಗಟ್ಟಿಸಿ ಹತ್ಯೆ ಮಾಡಿ ಶವವನ್ನು ಹೂತು ಹಾಕಿದ್ದರು. ಸೆಪ್ಟೆಂಬರ್ 10ರಂದು ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್, ಡಿವೈಎಸ್ಪಿ ಸಂತೋಷ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಬಸವಾಪಟ್ಟಣ ಎಸ್ ಐ ಭಾರತಿ ಕಂಕಣವಾಡಿ ಮತ್ತು ತಂಡವು ಪ್ರಕರಣವನ್ನು ಭೇದಿಸಿದೆ.

English summary
Davanagere district Chennagiri police arrested three people in connection with the Congress leader Jainlulla Khan who missing on September 2 and found dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X