• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊನ್ನಾಳಿ; ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಹೋರಿ ಸಾವು

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಮಾರ್ಚ್ 07: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹೋರಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಹೊನ್ನಾಳಿಯಲ್ಲಿ ನಡೆದಿದೆ. ಹೋರಿ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಸಕ ಎಂ. ಪಿ. ರೇಣುಕಾಚಾರ್ಯ ಮಾಲೀಕರಿಗೆ ಧೈರ್ಯ ತುಂಬಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಶಿಕಾರಿಪುರದ 'ಭ್ರಾತೇಶ್' ಎಂಬ ಹೋರಿ ಮೃತಪಟ್ಟಿದೆ. ರಸ್ತೆಯಲ್ಲಿ ಸಾಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಮೃತಪಟ್ಟಿದೆ.

ಹೋರಿ ಕದ್ದವನಿಗೆ ಊರೆಲ್ಲಾ 'ಕತ್ತೆ ಮೇಲೆ ಬೆತ್ತಲೆ ಮೆರವಣಿಗೆ’ಹೋರಿ ಕದ್ದವನಿಗೆ ಊರೆಲ್ಲಾ 'ಕತ್ತೆ ಮೇಲೆ ಬೆತ್ತಲೆ ಮೆರವಣಿಗೆ’

ರಸ್ತೆ ಮೇಲೆ ಹೋರಿ ಸಾವನ್ನಪ್ಪುತ್ತಿದ್ದಂತೆ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೋರಿಗಳ ಸ್ಪರ್ಧೆ ಮುಗಿಸಿಕೊಂಡು ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅಪಘಾತ ನೋಡಿ ಕಾರು ನಿಲ್ಲಿಸಿ, ಹೋರಿ ಸಾವಿಗೆ ಸಂತಾಪ ಸೂಚಿಸಿದರು. ಮಾಲೀಕರಿಗೆ ಧೈರ್ಯ ಹೇಳಿದರು.

ವೀಡಿಯೋ: ಜಲ್ಲಿಕಟ್ಟು ಹೋರಿ ಹಿಡಿಯಲು ಹೋದವನೇ ಹೋದ ಹಾರಿ!ವೀಡಿಯೋ: ಜಲ್ಲಿಕಟ್ಟು ಹೋರಿ ಹಿಡಿಯಲು ಹೋದವನೇ ಹೋದ ಹಾರಿ!

ಹಣದ ಸಹಾಯ; ರಸ್ತೆ ಅಪಘಾತದಲ್ಲಿ ಹೋರಿ ಮೃತಪಟ್ಟಿದ್ದರಿಂದ ಶಾಸಕರು ಸಹ ಸಂತಾಪ ವ್ಯಕ್ತಪಡಿಸಿದರು. ಮಾಲೀಕರಿಗೆ ಹಣದ ಸಹಾಯವನ್ನು ಮಾಡಿದರು.

ಮತ್ತೊಮ್ಮೆ ಗುಮ್ಮಿದ ಹೋರಿ; ಹೊನ್ನಾಳಿ ರೇಣುಕಾಚಾರ್ಯಗೆ ಹೋರಿ ಕಂಟಕ!ಮತ್ತೊಮ್ಮೆ ಗುಮ್ಮಿದ ಹೋರಿ; ಹೊನ್ನಾಳಿ ರೇಣುಕಾಚಾರ್ಯಗೆ ಹೋರಿ ಕಂಟಕ!

ಕಳೆದ ವರ್ಷ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಎಂ. ಪಿ. ರೇಣುಕಾಚಾರ್ಯ ಹೋರಿಯಿಂದ ತಿವಿಸಿಕೊಂಡಿದ್ದರು. ಈ ವರ್ಷವೂ ಶಾಸಕರು ಹೋರಿ ಸ್ಪರ್ಧೆಯಲ್ಲಿ ಭಾಗವಹಿಸಿ, ಹೋರಿಗಳ ಜೊತೆ ಫೋಟೋ ತೆಗೆಸಿಕೊಂಡರು.

English summary
The bull which take part in Hori Bedarisuva Spardhe (bull scaring event) died in road accident at Honnali, Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X