• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶೇಷ ವರದಿ; ಸೋಲಿಲ್ಲದ ಸರದಾರ 'ಬೆಳಗುತ್ತಿಯ ಡಾನ್'

By ಯೋಗರಾಜ್ ಜಿ. ಹೆಚ್.
|
Google Oneindia Kannada News

ದಾವಣಗೆರೆ, ಜುಲೈ 14; ಇದು ಅಂತಿಂಥ ಹೋರಿಯಲ್ಲ, ಈಗ 14ರ ಹರೆಯ. ಇದುವರೆಗೆ ಪಾಲ್ಗೊಂಡಿರುವುದು ಬರೋಬ್ಬರಿ 400 ಸ್ಪರ್ಧೆಗಳಲ್ಲಿ. ಹೋದಲೆಲ್ಲಾ ಜಯದ ಹೂಮಾಲೆ ಹಾಕಿಕೊಂಡು 'ಬೆಳಗುತ್ತಿಯ ಡಾನ್' ಅಂತಾನೇ ಫೇಮಸ್. ಇದುವರೆಗೆ ಈ ಹೋರಿಯ ಕೊರಳಿಗೆ ಕೈ ಹಾಕಿ ಕೊಬ್ಬರಿ ಪಡೆದ ಗಂಡುಗಲಿ ಯಾರೂ ಇಲ್ಲ.

ಹೌದು. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಮಂಜುನಾಥ್ ಎಂಬುವವರ ಬಳಿ ಇರುವ ಈ ಹೋರಿಯ ಸಾಧನೆ ಕೇಳಿದರೆ ನಿಬ್ಬೆರಗಾಗುವುದು ಖಚಿತ. 2007ರಲ್ಲಿ ಜನಿಸಿದ ಈ ಹೋರಿ ಇದುವರೆಗೆ ಯಾವ ಸ್ಪರ್ಧೆಯಲ್ಲಿಯೂ ಸೋತಿಲ್ಲ.

ಹೊನ್ನಾಳಿ; ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಹೋರಿ ಸಾವು ಹೊನ್ನಾಳಿ; ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಹೋರಿ ಸಾವು

ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ಹಸನ್ ಎಂಬುವವರು ಬರೋಬ್ಬರಿ 12 ವರ್ಷ ಈ ಹೋರಿ ಸಾಕಿಸಲಹಿದ್ದಾರೆ. ಕಳೆದ ಒಂದು ವರ್ಷದ ಹಿಂದೆ‌ ಬೆಳಗುತ್ತಿಯ ಮಂಜುನಾಥ್ 85 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ.

ಹೋರಿ ಕದ್ದವನಿಗೆ ಊರೆಲ್ಲಾ 'ಕತ್ತೆ ಮೇಲೆ ಬೆತ್ತಲೆ ಮೆರವಣಿಗೆ’ಹೋರಿ ಕದ್ದವನಿಗೆ ಊರೆಲ್ಲಾ 'ಕತ್ತೆ ಮೇಲೆ ಬೆತ್ತಲೆ ಮೆರವಣಿಗೆ’

ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಆಭಗದಲ್ಲಿ ನಡೆಯುವ ಹೋರಿ ಬೆದರಿರುವ ಸ್ಪರ್ಧೆಯಲ್ಲಿ ಈ ಹೋರಿ ಪಾಲ್ಗೊಳ್ಳುತ್ತದೆ. ಇದುವರೆಗೂ ಹೋರಿಯ ಕೊರಳಿಗೆ ಕೈ ಹಾಕಿ ಕೊಬ್ಬರಿ ಪಡೆಯಲು ಯಾರಿಗೂ ಸಾಧ್ಯವಾಗಿಲ್ಲ.

ಶಿವಮೊಗ್ಗ : ಹೋರಿ ಬೆದರಿಸುವ ಸ್ಪರ್ಧೆ ತಡೆದ ಪೊಲೀಸರುಶಿವಮೊಗ್ಗ : ಹೋರಿ ಬೆದರಿಸುವ ಸ್ಪರ್ಧೆ ತಡೆದ ಪೊಲೀಸರು

ಏನು ಆಹಾರ ಕೊಡಲಾಗುತ್ತೆ?

ಏನು ಆಹಾರ ಕೊಡಲಾಗುತ್ತೆ?

ಅಂದ ಹಾಗೆ ಈ ಹೋರಿಗೆಂದೇ ಪ್ರತಿನಿತ್ಯ 400 ರಿಂದ 500 ರೂಪಾಯಿ ಖರ್ಚಾಗುತ್ತದೆ. ಕಾಳು, ಮೆಕ್ಕೆಜೋಳ, ಬಿಳಿಜೋಳ, ಹುರಳಿ ಕಾಳು, ಭತ್ತ ಮಿಶ್ರಣ ಮಾಡಿದ ಪುಡಿ ಸೇರಿದಂತೆ ಇತರೆ ಪೌಷ್ಠಿಕಾಂಶಯುಕ್ತ ಆಹಾರ ಕೊಡಲಾಗುತ್ತಿದೆ. ದಿನದಲ್ಲಿ ಮೂರು ಹೊತ್ತು ಎರಡು ನಾಟಿಕೋಳಿ ಮೊಟ್ಟೆಯನ್ನು ನೀಡಲಾಗುತ್ತದೆ. ಇದೇ ಹೋರಿಯ ಶಕ್ತಿಯ ಗುಟ್ಟು.

ಎಲ್ಲಾ ರೀತಿಯೂ ಬೇಸಾಯಕ್ಕೂ ಸೈ

ಎಲ್ಲಾ ರೀತಿಯೂ ಬೇಸಾಯಕ್ಕೂ ಸೈ

'ಬೆಳಗುತ್ತಿ ಡಾನ್' ಕೇವಲ ಹೋರಿ ಸ್ಪರ್ಧೆ, ಹಬ್ಬಗಳಲ್ಲಿನ ಓಟದಲ್ಲಿ ಮಾತ್ರವಲ್ಲ, ಕೃಷಿಗೂ ಸಹಕಾರಿಯಾಗಿದೆ. ವರ್ಷದ ಮೂರು ಬೆಳೆಗಳಲ್ಲಿಯೂ ಕೃಷಿಗೆ ಬಳಕೆ ಮಾಡಲಾಗುತ್ತದೆ. ಎಲ್ಲಾ ರೀತಿಯ ಬೇಸಾಯ ಮಾಡುವುದಕ್ಕೂ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಈ ಹೋರಿಯ ಮತ್ತೊಂದು ಹೆಗ್ಗಳಿಕೆ.

ಸೋಲಿಲ್ಲದ ಸರದಾರ ಈ ಡಾನ್

ಸೋಲಿಲ್ಲದ ಸರದಾರ ಈ ಡಾನ್

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ ಹಾವೇರಿ, ಹಾನಗಲ್, ದಾವಣಗೆರೆ ಸೇರಿದಂತೆ ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ಈ ಹೋರಿ ಎಲ್ಲಿಯೂ ಪರಾಜಯ ಕಂಡಿಲ್ಲ. ಹಬ್ಬಗಳಲ್ಲಿ ನಡೆಯುವ ಹೋರಿ ಹಿಡಿಯುವ ಸ್ಪರ್ಧೆಯಲ್ಲಂತೂ ಇದರ ಕೊರಳಿಗೆ ಜೈ ಹಾಕಿ ಕೊಬ್ಬರಿ ತೆಗೆಯಲು ಯಾರೊಬ್ಬರಿಂದಲೂ ಸಾಧ್ಯವಾಗಿಲ್ಲ‌. ಈ ಹಿನ್ನೆಲೆಯಲ್ಲಿ "ತೀರ್ಥಗಿರಿಯ ಡಾನ್'' ಅಂತಾನೇ ಎಲ್ಲರೂ ಕರೆಯುತ್ತಾರೆ. ಇದು ಜನರು ಪ್ರೀತಿಯಿಂದ ಇಟ್ಟಿರುವ ಹೆಸರು.

ಸುತ್ತಮುತ್ತ ಜಿಲ್ಲೆಯ ಡಾನ್

ಸುತ್ತಮುತ್ತ ಜಿಲ್ಲೆಯ ಡಾನ್

ಫ್ರಿಡ್ಜ್, ಗಾಡ್ರೇಜ್ ಬೀರ್, ಬೆಳ್ಳಿ ಖಡ್ಗ ಸೇರಿದಂತೆ ನೂರಾರು ಬಹುಮಾನಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿರುವ ಈ ಹೋರಿ ಅಂದರೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಡಾನ್ ಅಂತಾನೇ ಖ್ಯಾತಿಗೊಂಡಿದೆ. ಕೃಷಿಕ ಹಾಲೇಶ್ ಹೋರಿ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಮಂಜುನಾಥ್ ಎಲ್ಲಾ ಖರ್ಚು ನೋಡಿಕೊಳ್ಳುತ್ತಿದ್ದಾರೆ.

  ದಲಿತ ಯುವಕನಿಗೆ ಮನಸ್ಸಿಗೆ ಬಂದಂತೆ ಹೊಡೆದ ದರ್ಶನ್ ಅಂಡ್ ಗ್ಯಾಂಗ್ | Oneindia Kannada
  ಕೇಕ್ ಕತ್ತರಿಸಿ ಹುಟ್ಟು ಹಬ್ಬ

  ಕೇಕ್ ಕತ್ತರಿಸಿ ಹುಟ್ಟು ಹಬ್ಬ

  ಕೆಲವು ದಿನಗಳ ಹಿಂದೆ 'ತೀರ್ಥಗಿರಿ ಡಾನ್' ಹೋರಿಗೆ ಹುಟ್ಟುಹಬ್ಬದ ಸಂಭ್ರಮ. ತೀರ್ಥರಾಮೇಶ್ವರ ಸನ್ನಿಧಿಯಲ್ಲಿ ನಡೆದ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಪಾಲ್ಗೊಂಡಿದ್ದರು. ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.

  English summary
  Know about bull at the Honnali taluk Belagutti village. It is participated in around 400 hori bedarisuva sparde. Bull famous like don on Belagutti.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X