ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ದಾವಣಗೆರೆಯ ಎರಡು ಕಡೆಗಳಲ್ಲಿ ಬೆಂಕಿ ಅವಘಡ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 21: ನಗರದ ಎರಡು ಕಡೆ ಪ್ರತ್ಯೇಕ ಪ್ರಕರಣಗಳಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಘಟನೆ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಟ್ರಾನ್ಸ್ ಫಾರ್ಮರ್ ಹೊತ್ತಿ ಉರಿದ ಘಟನೆ ಆಜಾದ್ ನಗರದ ಮಂಡಕ್ಕಿಭಟ್ಟಿ ಲೇಔಟ್ ನಲ್ಲಿ ನಡೆದಿದ್ದು, ಇಡೀ ಟ್ರಾನ್ಸ್ ಫಾರ್ಮರ್ ಸೇರಿ ಸುತ್ತಲೂ ಬೆಂಕಿ ಆವರಿಸಿತ್ತು.

Breaking: Fire accident two places in Davanagere

ಮಳೆಯಿಂದಾಗಿ ಟಿಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಟ್ರಾನ್ಸ್ ಫಾರ್ಮರ್ ಧಗ ಧಗ ಹೊತ್ತಿ ಉರಿದ ಪರಿಣಾಮ ಸುತ್ತಲಿನ ಜನರಲ್ಲಿ ಆತಂಕ ಮೂಡಿತ್ತು. ಬೆಂಕಿ ಹೊತ್ತಿಕೊಂಡಿದ್ದನ್ನ ಗಮನಿಸಿದ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಬಳಿಕ ಬೆಸ್ಕಾಂ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಸಿಬ್ಬಂದಿ ಬೆಂಕಿ ನಂದಿಸಿದರು‌‌. ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Breaking: Fire accident two places in Davanagere

ಸಿಲಿಂಡರ್ ಪೈಪ್ ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಘಟನೆ ಕುಂದವಾಡ ರಸ್ತೆಯ ಸರ್ಕಲ್ ನಲ್ಲಿರುವ ಮಾರ್ವಾಡಿ ತಿಂಡಿ ಹೋಟೆಲ್ ನಲ್ಲಿ ಸಂಭವಿಸಿದೆ‌. ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ಹೊತ್ತಿ ಉರಿದ ಪರಿಣಾಮ ಸ್ಥಳದಲ್ಲಿ ಸ್ವಲ್ಪ ಸಮಯ ಆತಂಕ ಉಂಟಾಗಿತ್ತು.

English summary
fair accident The incident took place in two separate cases in Davanagere city,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X