• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಯುವತಿಯರ ಜೊತೆ ಸೇರಿ ಬ್ಲಾಕ್‌ಮೇಲ್ ಮಾಡುತ್ತಿದ್ದ ನಾಲ್ವರ ಬಂಧನ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್‌, 15: ಯುವತಿಯರೊಂದಿಗೆ ಸೇರಿಕೊಂಡು ರಕ್ಷಣಾ ವೇದಿಕೆ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಶಿವರಾಜ್ ಚಂದ್ರಪಟ್ಟಣ, ಹಾಸನದ ರಮ್ಯಾ ಅಲಿಯಾಸ್ ಭೂಮಿಕಾ ಅಲಿಯಾಸ್ ಸಹನಾ, ತುಮಕೂರು ಜಿಲ್ಲೆಯ 24 ವರ್ಷದ ಪವಿತ್ರಾ, ಚಿಕ್ಕಮಗಳೂರಿನ ಸುರೇಶ್ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1,20,000 ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ್ದ ಮಾರುತಿ ಜಿನ್, ಆರು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ಹಿನ್ನೆಲೆ ಏನು?
ದಾವಣಗೆರೆಯ ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ. ಯುವತಿ ಜೊತೆ ಹೋಂ ಸ್ಟೇಗೆ ಹೋಗುವಷ್ಟರ ಮಟ್ಟಿಗೆ ಸಲುಗೆ ಬೆಳೆದಿದೆ. ಮೊದಲೇ ಯೋಜನೆ ರೂಪಿಸಿದ್ದ ಆರೋಪಿಗಳು ವ್ಯಕ್ತಿಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನೂ ಸಹ ಯುವತಿ ಮೇಲಿನ ಮೋಹಕ್ಕೆ ಬಿದ್ದಿದ್ದಾನೆ. ಹೋಂ ಸ್ಟೇನಲ್ಲಿ ಯುವತಿ ಜೊತೆ ಈತ ಇದ್ದಾಗ ಇದ್ದಕ್ಕಿದ್ದಂತೆ ನಾಲ್ವರು ಆಗಮಿಸಿ ತಮ್ಮ ಖಾಸಗಿ ಫೋಟೋ ಸೆರೆ ಹಿಡಿದಿದ್ದೇವೆ. ನಾವು ರಕ್ಷಣಾ ವೇದಿಕೆಯವರು, 15 ಲಕ್ಷ ರೂಪಾಯಿ ನೀಡದಿದ್ದರೆ ನಿಮ್ಮ ಮನೆಯವರಿಗೆ ಈ ವಿಷಯ ತಿಳಿಸುತ್ತೇವೆ ಎಂಬ ಬೆದರಿಕೆಯನ್ನೂ ಹಾಕಿದ್ದಾರೆ. ಆಗ ಹೆದರಿದ ಆ ವ್ಯಕ್ತಿ ಕಿರಾತಕರಿಗೆ 1,20,000 ರೂಪಾಯಿ ನೀಡಿದ್ದಾನೆ. ಇನ್ನು ಹೆಚ್ಚಿನ ಹಣವನ್ನು ಆದಷ್ಟು ಬೇಗ ನೀಡುವಂತೆ ತಾಕೀತು ಮಾಡಿದ್ದರು.

ಇದರಿಂದ ಭಯಗೊಂಡಿದ್ದ ವ್ಯಕ್ತಿಯು ವಿದ್ಯಾನಗರ ಪೊಲೀಸ್ ಠಾಣೆಗೆ ಆಗಮಿಸಿ ಘಟನೆಯ ಬಗ್ಗೆ ವಿವರಿಸಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಚೀತಾ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ನಾಗರಾಜ್ ಅವರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದಿದ್ದ ಮಂಜಪ್ಪ, ಬುಡೇನ್‌ವಲಿ ಅವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ.

Black mail case: Four people arrested in Davanagere

ದಾವಣಗೆರೆ ನಗರ ಉಪವಿಭಾಗದ ಡಿವೈಎಸ್‌ಪಿ ನರಸಿಂಹ ತಾಮ್ರ ಧ್ವಜ, ಕೆಟಿಜೆ ನಗರ ವೃತ್ತದ ಸಿಪಿಐ ಶಶಿಧರ್ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಪಿಎಸ್ಐ ಜಿ. ಎಂ. ರೇಣುಕಾ, ಪಿಎಸ್ಐ ಕಾಂತರಾಜ್, ಸಿಬ್ಬಂದಿ ಎಎಸ್ಐ ನಾಗರಾಜ್, ನಾಗರಾಜ್ ಕೊಲೆರ, ಮಂಜಪ್ಪ, ಬುಡೇನ್‌ವಲಿ, ಗಿರಿಧರ್, ಬಸವರಾಜ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ ಅವರು ಅಭಿನಂದಿಸಿದರು.

English summary
Davangere police arrested four persons in connection with blackmail case, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X