• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರ ಕೆಡವುದರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ; ಖರ್ಗೆ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಫೆಬ್ರವರಿ 26: "ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಗೆಲ್ಲುವುದಕ್ಕಿಂತ, ಬಹುಮತ ಇರುವ ಸರ್ಕಾರವನ್ನು ಕೆಡುವುದರ ಮೂಲಕ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು" ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ದಾವಣಗೆರೆ ನಗರದ ಎಂಬಿಎ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೊದಲಿಗೆ ಗೋವಾ, ಮಧ್ಯ ಪ್ರದೇಶ, ಮಣಿಪುರ, ಅರುಣಾಚಲ ಪ್ರದೇಶ, ಕರ್ನಾಟಕ ಈಗ ಪಾಂಡೇಚರಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಿದ್ದಾರೆ" ಎಂದು ಆರೋಪಿಸಿದ್ದಾರೆ.

ಜನಸಾಮಾನ್ಯರಿಗೆ ತೊಂದರೆ ಮಾಡುವ ವಿಷಯಗಳಲ್ಲಿ ರಾಜಿ ಇಲ್ಲ: ಮಲ್ಲಿಕಾರ್ಜುನ ಖರ್ಗೆಜನಸಾಮಾನ್ಯರಿಗೆ ತೊಂದರೆ ಮಾಡುವ ವಿಷಯಗಳಲ್ಲಿ ರಾಜಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

"ಸರ್ಕಾರವನ್ನು ಕೆಡವಲು ಐಟಿ, ಇಡಿ, ಸಿಬಿಐ ಬಳಕೆ ಆಗುತ್ತಿದೆ. ಈ ಸಂಸ್ಥೆಗಳ ಮೂಲಕ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಬೆದರಿಕೆ ಹಾಕುವ ಮೂಲಕ ರಾಜ್ಯಗಳಲ್ಲಿ ಅಧಿಕಾರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ" ಎಂದು ಟೀಕಿಸಿದರು.

ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೇರಿದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೇರಿದ ಮಲ್ಲಿಕಾರ್ಜುನ ಖರ್ಗೆ

"ಸಂವಿಧಾನ ರಕ್ಷಣೆ ಪ್ರಜಾಪ್ರಭುತ್ವ ಉಳಿಸುವ ದೃಷ್ಟಿಯಿಂದ ಕಾಂಗ್ರೆಸ್ ಜನರಿಗೆ ತಿಳಿವಳಿಕೆ ನೀಡಲು ಮುಂದಾಗಿದೆ. ದೇಶದಲ್ಲಿನ ಮಹಿಳೆ ಮತ್ತು ರೈತರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೋಸ ಮಾಡಿದ್ದಾರೆ" ಎಂದು ಆರೋಪಿಸಿದರು.

ಅತ್ಯಂತ ಕಡಿಮೆ ದರದಲ್ಲಿ ಪೆಟ್ರೋಲ್ ಸಿಗುವುದು ಯಾವ ದೇಶದಲ್ಲಿ ಗೊತ್ತೇ?ಅತ್ಯಂತ ಕಡಿಮೆ ದರದಲ್ಲಿ ಪೆಟ್ರೋಲ್ ಸಿಗುವುದು ಯಾವ ದೇಶದಲ್ಲಿ ಗೊತ್ತೇ?

"ದೇಶದ ಮಹಿಳೆಯರಿಗೆ ಸಿಲಿಂಡರ್ ಉಚಿತವಾಗಿ ಕೊಟ್ಟರು. ನಂತರ ಸಿಲಿಂಡರ್ ಬೆಲೆ ದಿನೇ ದಿನೇ ಏರಿಕೆ ಮಾಡುವ ಮೂಲಕ ಇದೇ ಮಹಿಳೆಯಿಂದ ದುಪ್ಪಟ್ಟು ಬೆಲೆ ಪಡೆಯುತ್ತಿದ್ದಾರೆ" ಎಂದು ಖರ್ಗೆ ವ್ಯಂಗ್ಯವಾಡಿದರು.

"ಅದೇ ರೀತಿ ಡಿಸೇಲ್ ಬೆಲೆ ಹೆಚ್ಚು ಮಾಡುತ್ತಿದ್ದು, ಬಹಳಷ್ಟು ರೈತರು ತಮ್ಮ ಪಂಪ್‍ಸೆಟ್, ಟ್ರ್ಯಾಕ್ಟರ್‌ಗಳಿಗೆ ಬಳಕೆ ಮಾಡುತ್ತಾರೆ. ಹೀಗೆ ಮಾಡುವ ಮೂಲಕ ರೈತರಿಂದ ದುಪ್ಪಟ್ಟು ಬೆಲೆಯನ್ನು ಪಡೆಯುತ್ತಿದ್ದಾರೆ" ಎಂದು ಟೀಕಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಬೈತಾರೆ; "ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ ಎಂದು ಹೇಳಿದರೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನಾಯಕರಿಗೆ ಬೈಯುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ 75, ಡೀಸೆಲ್‍ನ ಬೆಲೆ 65 ರ ಮೇಲೆ ಹೋಗಿರಲಿಲ್ಲ. ಈ ಬೆಲೆ ಏರಿಕೆಯಿಂದಲೇ 21 ಲಕ್ಷ ಕೋಟಿ ರೂ. ನಷ್ಟು ಮೋದಿ ಸರ್ಕಾರ ಸಂಪಾದನೆ ಮಾಡಿದೆ" ಎಂದು ದೂರಿದರು.

   ಬೆಲೆ ಏರಿಕೆ ಖಂಡಿಸಿ ಭಾರತ ಬಂದ್-ದೇಶದ 1,500 ಪಟ್ಟಣಗಳಲ್ಲಿ ನಡೆಯುತ್ತಿರುವ ಬಂದ್ | Oneindia Kannada

   ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿಧಾನ ಪರಿಷತ್ ಸದಸ್ಯರಾದ ಕೆ. ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಮೋಹನ್ ಕುಮಾರ್ ಕೊಂಡಜ್ಜಿ, ಮಾಜಿ ಸಚಿವ ಮಲ್ಲಿಕಾಜುನ ನಾಗಪ್ಪ ಮುಂತಾದವು ಉಪಸ್ಥಿತರಿದ್ದರು.

   English summary
   Rajya sabha opposition leader Mallikarjun Kharge said that BJP doesn't believe in democracy so they topple Congress government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X