ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಅಮಿತ್‌ ಶಾ ಅಲ್ಲ, ರಾಜ್ಯದ ಜನರಿಗೆ ಲೆಕ್ಕ ಕೊಡಬೇಕು : ಸಿದ್ದರಾಮಯ್ಯ

|
Google Oneindia Kannada News

ದಾವಣಗೆರೆ, ಮಾರ್ಚ್ 13 : 'ನಾನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಲ್ಲ, ಕರ್ನಾಟಕದ ಜನರಿಗೆ ಲೆಕ್ಕ ಕೊಡಬೇಕು. ನಾನು ನಮ್ಮ ರಾಜ್ಯದ ಜನರಿಗೆ ಮಾತ್ರ ಉತ್ತರ ಕೊಡಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಸಿದ್ದರಾಮಯ್ಯ ಅವರು ದಾವಣಗೆರೆಗೆ ಭೇಟಿ ನೀಡಿದ್ದರು. ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದರು. ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು. ನಂತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ವಿರುದ್ಧ ಯಾರಿಗೆ ಜಯ?ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ವಿರುದ್ಧ ಯಾರಿಗೆ ಜಯ?

siddaramaiah

ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು

ದಾವಣಗೆರೆಯ ಸುಂದರ ಗ್ಲಾಸ್ ಹೌಸ್ ವಿಶೇಷತೆಗಳುದಾವಣಗೆರೆಯ ಸುಂದರ ಗ್ಲಾಸ್ ಹೌಸ್ ವಿಶೇಷತೆಗಳು

Newest FirstOldest First
7:13 PM, 13 Mar

ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರ ಉದ್ಯಾನ ಎಂದು. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಖುಷಿಗಾಗಿ ನಾಡಗೀತೆ ಹಾಡುವುದಲ್ಲ, ಎಲ್ಲರೂ ಅದನ್ನು ಅರ್ಥ ಮಾಡಿಕೊಳ್ಳಬೇಕು
7:11 PM, 13 Mar

ನಾವು ರಾಜ್ಯದಲ್ಲಿ ನಾಡಗೀತೆ ಹಾಡುತ್ತೇವೆ. ಅದರಲ್ಲಿ ಎರಡು ಸಾಲುಗಳಿವೆ ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂದು
7:10 PM, 13 Mar

ನಮ್ಮ ಸರ್ಕಾರ ಬಸವಣ್ಣ, ಅಂಬೇಡ್ಕರ್ ಹೇಳಿದಂತಹ ಸಮಾಜ ನಿರ್ಮಾಣದಲ್ಲಿ ನಂಬಿಕೆ ಹೊಂದಿದೆ. ಅದರಂತೆ ನಡೆಯುತ್ತಿದೆ.
7:09 PM, 13 Mar

ನಮ್ಮ ದೇಶದಲ್ಲಿ ಎಲ್ಲ ಜಾತಿ, ಧರ್ಮದವರನ್ನು ಗೌರವಿಸಬೇಕು. ಎಲ್ಲಾ ಧರ್ಮದ ಬಗ್ಗೆ ಸಹಿಷ್ಠುತೆ ಇರಬೇಕು. ಬೇರೆ ಧರ್ಮದ ಬಗ್ಗೆ ಅಸಹಿಷ್ಣುತೆ ಇರಬಾರದು
7:08 PM, 13 Mar

ಜಾತಿ, ಧರ್ಮ ಇದನ್ನೇ ಮಾತನಾಡುತ್ತಾರೆ. ಏನು ಹಿಂದುತ್ವವನ್ನು ಗುತ್ತಿಗೆ ಪಡೆದಿದ್ದಾರೆಯೇ?
7:08 PM, 13 Mar

ಬಿಜೆಪಿಯವರಿಗೆ ಬೇರೆ ಏನೂ ಗೊತ್ತಿಲ್ಲ. ಅಭಿವೃದ್ಧಿ ಬಗ್ಗೆ ಅವರು ಚರ್ಚೆಯನ್ನೇ ಮಾಡೋಲ್ಲ.
7:07 PM, 13 Mar

ಇಷ್ಟು ವರ್ಷದಿಂದ ನಾನು ರಾಜಕೀಯದಲ್ಲಿದ್ದೇನೆ. ಹಲವಾರು ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ. ಆದರೆ, ನರೇಂದ್ರ ಮೋದಿಯಂತೆ ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಲ್ಲ.
Advertisement
7:02 PM, 13 Mar

ರಾಜ್ಯಕ್ಕೆ ಬಂದು ಸುಳ್ಳು ಹೇಳುತ್ತಾರೆ. ಬರೀ ಸುಳ್ಳು ಹೇಳುವುದು ಮಾತ್ರ ಅವರ ಕೆಲಸ. ಕರ್ನಾಟಕದ ಬಿಜೆಪಿ ನಾಯಕರು ಇದನ್ನೇ ಮಾಡುತ್ತಿದ್ದಾರೆ.
6:58 PM, 13 Mar

ಸಂವಿಧಾನದ ಪ್ರಕಾರ ನಾನು ಕರ್ನಾಟಕದ ಜನರಿಗೆ ಮಾತ್ರ ಉತ್ತರ ಕೊಡಬೇಕು.
6:56 PM, 13 Mar

ಲೆಕ್ಕಕೊಡಬೇಕು ಸಿದ್ದರಾಮಯ್ಯ ಎನ್ನುತ್ತಾರೆ. ಲೆಕ್ಕ ಕೇಳಲು ಅಮಿತ್ ಶಾ ಯಾರು?
6:53 PM, 13 Mar

ನಾನು ನಮ್ಮ ಕರ್ನಾಟಕ ರಾಜ್ಯದ ಜನರಿಗೆ ಲೆಕ್ಕ ಕೊಡಬೇಕು. ಅಮಿತ್‌ ಶಾಗೆ ಅಲ್ಲ
6:52 PM, 13 Mar

ಅಮಿತ್‌ ಶಾಗೆ ಕಾನೂನು ಗೊತ್ತಿಲ್ಲ. ಸಂವಿಧಾನವೂ ಗೊತ್ತಿಲ್ಲ. ಮಾತೆತ್ತಿದರೆ ನಾವು ಹಣ ಕೊಡುತ್ತಿದ್ದೇವೆ. ಲೆಕ್ಕಕೊಡಿ ಎಂದು ಕೇಳುತ್ತಾರೆ.
Advertisement

English summary
Karnataka Chief Minister Siddaramaaiah alleged that BJP national president Amit Shah and Karnataka party leaders continuously telling lies. In Davanagere on March 13, 2018 Siddaramaiah said he is only answerable for Karnataka people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X