ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಹಕ್ಕಿ ಜ್ವರದ ಶಂಕೆ: ಒಂದೇ ವಾರದಲ್ಲಿ 8 ಸಾವಿರ ಕೋಳಿಗಳ ಸಾವು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 16: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಪೌಲ್ಟ್ರಿ ಫಾರಂಗಳಲ್ಲಿ ಕೋಳಿಗಳ ನಿಗೂಢ ಸಾವು ಕಂಡುಬರುತ್ತಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಹಕ್ಕಿ ಜ್ವರದ ಶಂಕೆ ಎದುರಾಗಿದೆಯಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಕಳೆದ ಎಂಟು ದಿನಗಳಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದ್ದು, ಪೌಲ್ಟ್ರಿ ಮಾಲೀಕರು ಸತ್ತ ಕೋಳಿಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಕೊಂಡಜ್ಜಿ ಗುಡ್ಡದಲ್ಲಿ ಹಾಕಿ ಹೋಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋಳಿ, ಕಾಗೆ, ನವಿಲುಗಳಲ್ಲೂ ಹಕ್ಕಿಜ್ವರ; ಭಾರತದ 12 ರಾಜ್ಯಗಳಿಗೆ ಆಘಾತ!ಕೋಳಿ, ಕಾಗೆ, ನವಿಲುಗಳಲ್ಲೂ ಹಕ್ಕಿಜ್ವರ; ಭಾರತದ 12 ರಾಜ್ಯಗಳಿಗೆ ಆಘಾತ!

ಕುಕ್ಕುಟೋದ್ಯಮದ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ ಎಂಬ ಭಯದಿಂದ ಮಾಲೀಕರು, ಕೋಳಿ ಸಾಯುತ್ತಿರುವ ವಿಷಯವನ್ನು ಪಶು ಆರೋಗ್ಯ ಇಲಾಖೆಗೆ ತಿಳಿಸದೇ ಸತ್ತ ಕೋಳಿಗಳನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

 Bird Flu Scare In Davanagere: 7 to 8 Thousand Hen Died In One Week In The District

Recommended Video

ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ, ಮಾಸ್ಕ್‌ ಧರಿಸದಿದ್ದರೆ ದಂಡ ಹಾಕಲು ಸೂಚನೆ | Oneindia Kannada

ಈಗಾಗಲೇ ಲಕ್ಷಾಂತರ ರೂ. ನಷ್ಟ ಅನುಭವಿಸಿರುವ ಮಾಲೀಕರು 7-8 ಸಾವಿರ ಕೋಳಿ ಸಾವಿಗೀಡಾದರೂ ಕೂಡ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಪಶು ವೈದ್ಯಕೀಯ ಅಧಿಕಾರಿಗಳು ಸಹ ಸತ್ತ ಕೋಳಿಗಳನ್ನು ಲ್ಯಾಬ್‌ಗೆ ಕಳಿಸದ ಹಿನ್ನೆಲೆಯಲ್ಲಿ ಹಕ್ಕಿ ಜ್ವರ ಹರಡಿರುವುದನ್ನು ಮುಚ್ಚಿಡಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಓಡಾಡುತ್ತಿವೆ.

English summary
A mysterious death of hen is seen at Kondajji Poultry Farms in Harihara Taluk in Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X