ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಂಬರ್ ಬಗ್ಗೆ ತಮ್ಮ ಹೇಳಿಕೆ ಉಲ್ಟಾ ಹೊಡೆದ ಗೃಹ ಸಚಿವ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 23: ಆರ್ ಎಸ್ಎಸ್, ಭಜರಂಗದಳ ನಿಷೇಧ ಮಾಡಬೇಕು ಎಂದು ಮಾಜಿ‌ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ, ಆದರೆ ಅವುಗಳನ್ನು ನಿಷೇಧ ಮಾಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಘಗಳು, ದೇಶಭಕ್ತ ಸಂಘಟನೆಗಳು. ನೆರೆ ಪರಿಹಾರ ಸೇರಿದಂತೆ ಹಲವು ಒಳ್ಳೆಯ ಕೆಲಸ ಮಾಡಿವೆ ಆದ್ದರಿಂದ ನಿಷೇಧ ಮಾಡುವುದಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಯಾವ ಹೇಳಿಕೆಗಳನ್ನು ಕೊಡುತ್ತಾರೋ ಅದರ ಬಗ್ಗೆ ಅವರಿಗೇ ಗೊತ್ತಿರುವುದಿಲ್ಲ ಆದ್ದರಿಂದ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಆದಿತ್ಯ ರಾವ್ RSS ಕಾರ್ಯಕರ್ತನೇ? ಕಲ್ಲಡ್ಕ ಪ್ರಭಾಕರ್ ಭಟ್ಟರ ಜೊತೆಗಿರುವುದು ಯಾರು?ಆದಿತ್ಯ ರಾವ್ RSS ಕಾರ್ಯಕರ್ತನೇ? ಕಲ್ಲಡ್ಕ ಪ್ರಭಾಕರ್ ಭಟ್ಟರ ಜೊತೆಗಿರುವುದು ಯಾರು?

ಇನ್ನು ಮಂಗಳೂರು ಬಾಂಬರ್ ಆದಿತ್ಯ ರಾವ್ ಬಗ್ಗೆ ಉಲ್ಟಾ ಹೊಡೆದ ಗೃಹ ಸಚಿವ ಬಸವರಾಜ್ ಬೊಮ್ಮಯಿ, ಮಂಗಳೂರು ಬಾಂಬರ್ ವಿಚಾರವಾಗಿ ಆತ ಮಾನಸಿಕ ಅಸ್ವಸ್ಥ ಎಂದು ನಾನು ಹೇಳಿಲ್ಲ. ಈ ಬಗ್ಗೆ ಈಗಾಗಲೇ ಮಂಗಳೂರು ಕಮೀಷನರ್ ಡಾ. ಹರ್ಷ ಪತ್ರಿಕಾಗೋಷ್ಠಿ ನಡೆಸಿ, ಎಲ್ಲಾ ವಿಚಾರಗಳನ್ನು ಹೇಳಿದ್ದಾರೆ ಎಂದರು.

Basavaraj Bommai U-turn His Statement About Mangaluru Bomber

ಸ್ಫೋಟಕ ಪತ್ತೆ ಪ್ರಕರಣ ಆರೋಪಿ ಬಂಧನ: ಎಚ್‌ಡಿಕೆಗೆ ಬೊಮ್ಮಾಯಿ ತಿರುಗೇಟು

ತನಿಖೆ ಮುಂದುವರಿದಿದೆ, ಪೂರ್ಣಗೊಂಡ ಬಳಿಕ ಸತ್ಯಾಂಶ ಹೊರ ಬರಲಿದೆ.ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ಗೊಂದಲ ಇತ್ತು. ಈಗ ಎಲ್ಲವೂ ಸರಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಸಚಿವರು ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದರು. ಈ ವೇಳೆ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಜೊತೆಯಲ್ಲಿದ್ದರು.

English summary
Home Minister Basavaraj Bommai made it clear that I did not say that he was mentally ill of Mangalore bomber.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X