ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಮನೂರು ಮೊಮ್ಮಗಳ ಮದುವೆ: ಸಿಎಂ ಬೊಮ್ಮಾಯಿ ಭಾಗಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 16 : ನಗರದ ಬಾಪೂಜಿ‌ ಸಮುದಾಯ ಭವನದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಮೊಮ್ಮಗಳ ಮದುವೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿ ವಧು ವರರಿಗೆ ಆಶೀರ್ವದಿಸಿದರು‌.

ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಬಕ್ಕೇಶ್ ಹಾಗೂ ಪ್ರೀತಿ ಬಕ್ಕೇಶ್ ಪುತ್ರಿ ಅಕ್ಷತಾ ಬಿ. ಶಾಮನೂರು ಮತ್ತು ಚಿನ್ನು ಪಾಟೀಲ್‌ರ ಪುತ್ರ ಅಭಿಷೇಕ್ ಪಾಟೀಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ಭೈರತಿ ಬಸವರಾಜ್, ಜೆ. ಸಿ. ಮಾಧುಸ್ವಾಮಿ, ಅಮೃತ್ ದೇಸಾಯಿ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿ ಶುಭ ಕೋರಿದರು.

'ಸಿದ್ದರಾಮಯ್ಯನವರಿಗೆ ನಕಲಿ ಗಾಂಧಿ ಕುಟುಂಬದ ಸೇವೆ ಮಾಡಲು ಸಾಧ್ಯವೇ?''ಸಿದ್ದರಾಮಯ್ಯನವರಿಗೆ ನಕಲಿ ಗಾಂಧಿ ಕುಟುಂಬದ ಸೇವೆ ಮಾಡಲು ಸಾಧ್ಯವೇ?'

ಶಾಮನೂರು ಶಿವಶಂಕರಪ್ಪರ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ ಕೆಲಹೊತ್ತು ಸಮಾಲೋಚನೆ ನಡೆಸಿದರು.
ಮದುವೆ ಸಮಾರಂಭದಲ್ಲೇ ಶಾಮನೂರು ಶಿವಶಂಕರಪ್ಪರ 92ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಶಿವಶಂಕರಪ್ಪಗೆ ಸಿಎಂ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಶುಭಾಶಯ ಕೋರಿದರು.

ಮೇಕೆದಾಟು ಸಂಬಂಧ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿಲ್ಲ: ಸಿಎಂ ಬೊಮ್ಮಾಯಿಮೇಕೆದಾಟು ಸಂಬಂಧ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿಲ್ಲ: ಸಿಎಂ ಬೊಮ್ಮಾಯಿ

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ

ಒಂದು ಫ್ಯಾಮಿಲಿಗೆ ಒಂದು ಟಿಕೆಟ್ ಎಂಬ ವಿಚಾರ ನಮಗೆ ಅನ್ವಯಿಸದು. ಇನ್ನು ನಮ್ಮ ಕುಟುಂಬದ ನಾಲ್ವರಿಗೆ ಟಿಕೆಟ್ ಕೊಡಿಸುತ್ತೇನೆ. ಆದರೆ ಗೆಲ್ಲಬೇಕಲ್ವಾ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಅಲ್ಲಿಂದ ನನ್ನನ್ನು ಬಿಟ್ಟು ಇನ್ಯಾರು ಸ್ಪರ್ಧೆ ಮಾಡುತ್ತಾರೆ ಎಂದರು.

ನಾವೆಲ್ಲಾ ಒಂದೇ ಜಾತಿಯವರು

ನಾವೆಲ್ಲಾ ಒಂದೇ ಜಾತಿಯವರು

ಬಿಜೆಪಿ ನಾಯಕರ ಆಗಮನದ ಬಗ್ಗೆ ಮಾತನಾಡಿ, "ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿಎಂ ಬಸವರಾಜ ಬೊಮ್ಮಾಯಿ, ಬಿ. ಎಸ್. ಯಡಿಯೂರಪ್ಪ ಹಾಗೂ ಎಂ. ಬಿ. ಪಾಟೀಲ್ ಸಂಬಂಧಿಕರು. ನಮ್ಮ ಮನೆ ಶಕ್ತಿ ಕೇಂದ್ರ ಅಂದ್ರೆ ತಪ್ಪೇನು? ನಾವೆಲ್ಲರೂ ವೀರಶೈವ ಲಿಂಗಾಯತರು. ನಾವೆಲ್ಲಾ ಒಂದೇ, ಎಲ್ಲರೂ ಜೊತೆಗಿದ್ದೇವೆ, ಜೊತೆಗಿರುತ್ತೇವೆ. ಯಾರು ಸಿಎಂ ಆಗುತ್ತಾರೆ ಎಂಬುದನ್ನು ಮುಂಬರುವ ದಿನಗಳಲ್ಲಿ ನೋಡೋಣ, ಈಗ ಚರ್ಚೆ ಬೇಡ. ಜ್ಯೋತಿಷ್ಯ ಹೇಳಲು ನಾನೇನೂ ಕೋಡಿಮಠದ ಸ್ವಾಮೀಜಿ ಅಲ್ಲ" ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಶಾಮನೂರು ಶಿವಶಂಕರಪ್ಪ ಈ ರೀತಿ ಪ್ರತಿಕ್ರಿಯಿಸಿದರು.

ಜನರ ಗಮನ ಬೇರೆಡೆ ಸೆಳೆಯುವ ನಾಟಕ

ಜನರ ಗಮನ ಬೇರೆಡೆ ಸೆಳೆಯುವ ನಾಟಕ

"ಡಾ. ಸುಬ್ರಹ್ಮಣ್ಯ ನೀಡಿದ ದೂರಿನ ಆಧಾರದ ಮೇಲೆ ಇಡಿ ಕಾನೂನಿನ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಚಾಲೆಂಜ್ ಮಾಡಬಹುದಿತ್ತು. 2000 ಕೋಟಿ ರೂ ಆಸ್ತಿ ಇರುವಂತೆ ಕಂಪನಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಆರೋಪವಿದೆ, ಅದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆದರೆ ಇದನ್ನು ಕಾನೂನಿನ ಪ್ರಕಾರ ಪ್ರಶ್ನಿಸುವ ಅವಕಾಶವಿದೆ. ಆದರೆ ಬೀದಿಗಳಿದು ಹೋರಾಟ ಮಾಡುವುದು ಸರಿಯಲ್ಲ. ಜನರ ಗಮನ ಬೇರೆಡೆ ಸೆಳೆಯುವ ನಾಟಕ ಮಾಡುತ್ತಿದ್ದಾರೆ" ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.

ನ್ಯಾಯಾಲಯದಲ್ಲಿ ಪ್ರಶ್ನಿಸಲಿ

ನ್ಯಾಯಾಲಯದಲ್ಲಿ ಪ್ರಶ್ನಿಸಲಿ

ಬಿಜೆಪಿ ರಾಜಕೀಯ ಧ್ವೇಷದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸುತ್ತಾರೆ. ಆದರೆ ಬಿಜೆಪಿ ಕಾನೂನು ಮೀರಿ ಏನೂ ಮಾಡುತ್ತಿದ್ದರೆ, ಇವತ್ತು ಸುಪ್ರೀಂಕೋರ್ಟ್‌, ಹೈಕೋರ್ಟ್‌ ಸೇರಿದಂತೆ ಹಲವು ನ್ಯಾಯಾಲಗಳಿವೆ. ಆದರೆ ಅದನ್ನೆಲ್ಲಾ ಬಿಟ್ಟು ಹೋರಾಟ ಮಾಡುತ್ತಿದ್ದಾರೆ. ಸಂವಿಧಾನ ಮೂಲಕ ಚಾಲೆಂಜ್ ಮಾಡಬಹುದು. ಆದರೆ ತಮ್ಮ ದುರ್ಬಲ, ತಪ್ಪು ಗೊತ್ತಿರುವುದುರಿಂದ ಅವರು ಬೀದಿಗಿಳಿದಿದ್ದಾರೆ ಎಂದರು.

English summary
Karnataka Chief Minister Basavaraj Bommai, Jagadeesh Shetter and other BJP leaders attended Congress senior leader Shamanuru Shivashankarappa grand daughter marriage at Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X