ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯ ಮಗುವಿನಲ್ಲಿ MIS-C ಸೋಂಕು ಪತ್ತೆ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 23: ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ದಾವಣಗೆರೆಯಲ್ಲಿ ಮತ್ತೊಂದು ಆಘಾತಕಾರಿ ವೈರಸ್ ಪತ್ತೆಯಾಗಿದೆ. ಮಕ್ಕಳಲ್ಲಿ MIS-C ಅನ್ನುವ ಹೊಸ ಸೋಂಕು ಪತ್ತೆಯಾಗಿದೆ.

ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಮಗುವಿನಲ್ಲಿ MIS-C ಅನ್ನುವ ರೋಗದ ಲಕ್ಷಣ ಪತ್ತೆಯಾಗಿದೆ.‌ ಮಕ್ಕಳ ತಜ್ಞ ವೈದ್ಯರ ಮೂಲಕ ಹೊಸ ರೋಗ ಲಕ್ಷಣಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ: ಇದು ಆಘಾತಕಾರಿ ಎಂದ ವೈದ್ಯರುಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ: ಇದು ಆಘಾತಕಾರಿ ಎಂದ ವೈದ್ಯರು

ಜ್ವರ, ಮೈ ಕೈ ನೋವು, ಸುಸ್ತು, ಕಣ್ಣು ಮಂಜಾಗುವಿಕೆಯಂತ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವನ್ನು ತೀರಾ ನಿಗಾ ಘಟಕದಲ್ಲಿಟ್ಟು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹೊಸ ಕಾಯಿಲೆಯ ಚಿಕಿತ್ಸೆಗೆ ಸರ್ಕಾರದ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರನ್ನು ಸ್ಥಳೀಯ ಆರೋಗ್ಯ ಇಲಾಖೆ ಸಂಪರ್ಕಿಸಿದೆ.

Davanagere: Baby Tests Positive For MIS-C Infection

"MIS-C ಕಾಯಿಲೆಗೆ ಬೇಕಾಗುವಂತ ಔಷಧಗಳಿಗೆ ಸರ್ಕಾರಕ್ಕೆ ತಿಳಿಸಿರುವ ಆರೋಗ್ಯ ಇಲಾಖೆಯು, ಮಗುವಿನಲ್ಲಿ ಕಂಡುಬಂದ ಹೊಸ ರೋಗ ಲಕ್ಷಣಗಳ ಬಗ್ಗೆಯೂ ತಜ್ಞರು ಮಾಹಿತಿ ಕಲೆ ಹಾಕುತ್ತಿದ್ದಾರೆ,'' ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.

Recommended Video

ಜೋಗ ಜಲಪಾತದ ಅಂದ ನೋಡಿ ಮೈಮರೆತ ಜನ | Shimoga Jog Falls | Oneindia Kannada

English summary
MIS-C infection found in a child admitted to a private hospital in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X