ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರೇಣುಕಾಚಾರ್ಯಗೆ 10 ಸಾವಿರ ಮತಗಳ ಅಂತರದಿಂದ ಸೋಲು'

By Mahesh
|
Google Oneindia Kannada News

ಹೊನ್ನಾಳಿ, ಮೇ 14: 'ಈ ಬಾರಿ ತಮ್ಮ ಗೆಲುವು ಖಚಿತ. ಆದರೆ ಗೆಲುವಿನ ಅಂತರ ಈಗಲೇ ಹೇಳಲಾರೆ. ಅದೇನಿದ್ದರೂ ಮತ ಎಣಿಕೆಯ ನಂತರ, ಅದರೆ, ಸುಮಾರು 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ' ಎಂದು ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ. ಜಿ.ಶಾಂತನಗೌಡ ಘೋಷಿಸಿದ್ದಾರೆ.

ನಾಮಪತ್ರ ಸಲ್ಲಿಕೆಯಾದ ನಂತರ ಆರಂಭಗೊಂಡ ವಿಶ್ರಾಂತಿ ರಹಿತ ಮತ ಬೇಟೆ ಪ್ರಕ್ರಿಯೆಗೆ ಮೇ 12ರ ಮತದಾನದ ದಿನದವರೆಗೂ ಬಿಡುವಿಲ್ಲದೆ ತಾಲ್ಲೂಕಿನಾದ್ಯಂತ ತಿರುಗಾಟ ನಡೆಸಿ ಸುಸ್ತಾಗಿದ್ದ ಶಾಂತನಗೌಡ ಅವರು ಸದ್ಯ ಗೊಲ್ಲರಹಳ್ಳಿಯ ತಮ್ಮ ನಿವಾಸದಲ್ಲಿ ಇಂದು ನಿರಾತಂಕವಾಗಿ ಟಿ.ವಿ. ನೋಡುತ್ತಾ ವಿಶ್ರಾಂತಿ ಮೂಡ್ ನಲ್ಲಿದ್ದಾರೆ.

ಕ್ಷೇತ್ರ ಪರಿಚಯ : ಐತಿಹಾಸಿಕ ಹಿನ್ನಲೆ ಹೊಂದಿರುವ ಹೊನ್ನಾಳಿ
1978 ರಿಂದ ತಮ್ಮ ಸಹೋದರ ದಿ. ಬಸವನಗೌಡರ ಕಾಲದಿಂದ 10 ಚುನಾವಣೆಗಳನ್ನು ಮಾಡಿದ ಅನುಭವವಿದ್ದು, ಇದರಲ್ಲಿ ತಾವೇ ವೈಯಕ್ತಿಕವಾಗಿ ಈ ಚುನಾವಣೆ ಸೇರಿ 5ನೇ ಚುನಾವಣೆ ಸ್ಪರ್ಧಿಸಿದ್ದು 2 ಬಾರಿ ಗೆಲುವು, 2 ಬಾರಿ ಸೋತಿದ್ದು 2018ರ ಚುನಾವಣೆಯಲ್ಲೂ ಕೂಡ ಗೆಲ್ಲುವ ಬಗ್ಗೆ ದೃಢ ನಂಬಿಕೆ ಇದೆ ಎಂದರು. ಈ ಚುನಾವಣೆ ಗೆದ್ದರೆ ಹೊನ್ನಾಳಿ ರಾಜಕೀಯ ಇತಿಹಾಸದಲ್ಲಿ 3 ಬಾರಿ ಗೆದ್ದು ದಾಖಲೆ ಮಾಡಿದಂತಾಗುತ್ತದೆ.

Assembly Elections 2018 : BJP candidate MP Renukacharya allegations are false : G Shanthanagowda

ಪವಿತ್ರ ಕ್ಷೇತ್ರ ಹಿರೇಕಲ್ಮಠದಲ್ಲಿ ಪ್ರಮಾಣಕ್ಕೆ ಸಿದ್ದ

ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ಮೇಲೆ ಕೆಲವೊಂದು ಆರೋಪಗಳನ್ನು ಮಾಡಿದ್ದು, ಚಿನ್ನೇನಹಳ್ಳಿಯಲ್ಲಿ ಬಗರ್ ಹುಕ್ಕುಂ ಹಕ್ಕುಪತ್ರ ವಿತರಣೆಯಲ್ಲಿ ಹಣ ಪಡೆದಿದ್ದೇನೆ ಎಂದು ಹಾಗೂ ಮರಳು ದಂಧೆಯಲ್ಲಿ ಕೂಡ ಕಮೀಷನ್ ಪಡೆದಿದ್ದೇನೆ ಎಂದು ಆರೋಪಿಸಿದ್ದು, ಈ ಬಗ್ಗೆ ತಾವು ಮತ ಎಣಿಕೆಯಾದ ನಂತರ ಬುಧವಾರ ತಾಲ್ಲೂಕಿನ ಪವಿತ್ರ ಕ್ಷೇತ್ರ ಹಿರೇಕಲ್ಮಠದಲ್ಲಿ ಪ್ರಮಾಣಕ್ಕೆ ಸಿದ್ಧನಿದ್ದು, ಅವರೂ ಕೂಡ ಅಂದು ಹಿರೇಕಲ್ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ತಿರುಗೇಟು ನೀಡಿದರು.

ಕಾರ್ಯಕರ್ತರು ನೀಡಿದ ಮಾಹಿತಿ ಪ್ರಕಾರ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತಗಳ ಲೀಡ್ ಇದೆ ಎಂಬ ಕಾರ್ಯಕರ್ತರ, ಮುಖಂಡರ ಅನಿಸಿಕೆಗಳನ್ನು ಆಲಿಸಿ ಕ್ಷೇತ್ರದಲ್ಲಿ ತಮ್ಮ ಗೆಲುವಿನ ಲೆಕ್ಕಾಚಾರದ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದರು.

ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ನಾನು ಜನ ಸೇವಕನೇ ಹೊರತು ನಾಯಕನಲ್ಲ. ತನ್ನ ಸೇವೆಯನ್ನು ಗುರುತಿಸಿ ಮತದಾರರು ಈ ಬಾರಿ ಬಿಜೆಪಿಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದು, 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ನಮ್ಮದಾಗಿ ಕ್ಷೇತ್ರದಲ್ಲಿ ಕಮಲ ಅರಳಿಸಲು ತಮ್ಮ ಕಾರ್ಯಕರ್ತರು ಶ್ರಮಿಸಿದ್ದಾರೆ. ಅವರಿಗೂ ಮತ್ತು ತಾಲ್ಲೂಕಿನ ಮತದಾರರಿಗೆ ಶಾಂತಿಯುತವಾಗಿ ಮತದಾನ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

English summary
Karnataka Assembly Elections 2018-Honnalli : BJP candidate MP Renukacharya allegations are false said Congress candidate G Shanthanagowda and I will win the contest by a margin over 10,000 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X