ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಷಾಢದಲ್ಲಿ ರೇಷ್ಮೆ ಸೀರೆಗಳಿಗೆ ಡಿಮ್ಯಾಂಡ್, ಭರ್ಜರಿ ಸೇಲ್

By Mahesh
|
Google Oneindia Kannada News

ದಾವಣಗೆರೆ, ಜುಲೈ 31: ಆಷಾಢ ಮಾಸ ಹಾಗೂ ವರಲಕ್ಷ್ಮಿಹಬ್ಬದ ಪ್ರಯುಕ್ತ ನೀಡಲಾಗಿರುವ ರಿಯಾಯಿತಿ ಲಾಭ ಪಡೆದಿರುವ ಗ್ರಾಹಕರು ಹೆಚ್ಚೆಚ್ಚು ರೇಷ್ಮೆ ಸೀರೆಯನ್ನು ಖರೀದಿಸುತ್ತಿದ್ದಾರೆ ಎಂದು ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ ಪ್ರಕಟಿಸಿದೆ.

ಲಭ್ಯ ಮಾಹಿತಿ ಪ್ರಕಾರ ಕಳೆದ ನಾಲ್ಕು ತಿಂಗಳಿನಲ್ಲಿ ಸರಿ ಸುಮಾರು 22 ಸಾವಿರ ಸೀರೆಗಳನ್ನು ಮಾರಾಟ ಮಾಡಲಾಗಿದ್ದು, 48 ಕೋಟಿ ರು ಗಳಿಸಲಾಗಿದೆ. ಜುಲೈ ತಿಂಗಳೊಂದರಲ್ಲೇ ವಹಿವಾಟಿನಿಂದಲೇ 17 ಕೋಟಿ ರು ಆದಾಯ ಪಡೆಯಲಾಗಿದೆ ಎಂದು ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ ಬಸವರಾಜ್ ಹೇಳಿದರು.

KSIC silk saree sales boom

ನೂರು ವರ್ಷಗಳ ಸಂಭ್ರಮ ಕಂಡಿರುವ ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ (ಕೆಎಸ್ಐಸಿ) ಈಗ ಲಾಭದತ್ತ ಮುಖ ಮಾಡಿದೆ. ಹೀಗಾಗಿ ಸರ್ಕಾರದಿಂದ ಪಡೆದಿದ್ದ 22 ಕೋಟಿ ರು ಸಾಲ ವಾಪಸ್ ಮಾಡಲಾಗುತ್ತದೆ. 146.42 ಕೋಟಿ ರು ಗಳಿಕೆಯೊಂದಿಗೆ ಪ್ರಸಕ್ತ ವರ್ಷವಾಗಿದ್ದು, ಆರ್ಥಿಕ ಪ್ರಗತಿ ಕಾಣಲಾಗುತ್ತಿದೆ ಎಂದರು.

2013-14ರಲ್ಲಿ 104.68 ಕೋಟಿ ರು, 2014-158ರಲ್ಲಿ 127.15 ಕೋಟಿ ರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 146.42 ಕೋಟಿ ರು ಗಳಿಸಲಾಗಿದೆ.

ಎಲ್ಲೆಲ್ಲಿ ಮಳಿಗೆ: ಮೈಸೂರಿನಲ್ಲಿ ಆರು, ಬೆಂಗಳೂರಲ್ಲಿ ಏಳು, ಚೆನ್ನೈ, ಹೈದರಾಬಾದ್, ಚನ್ನಪಟ್ಟಣ, ದಾವಣಗೆರೆಯಲ್ಲಿ ತಲಾ 1 ಮಳಿಗೆ ಇದೆ. ಹುಬ್ಬಳ್ಳಿ-ಧಾರವಾಡ, ತುಮಕೂರು, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಮಳಿಗೆ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. (ಒನ್ ಇಂಡಿಯಾ ಸುದ್ದಿ)

English summary
The Karnataka Silk Industries Corporation (KSIC), which has a history of more than a century, has recorded a total business of Rs. 48 crore in the past four months with Ashada month special offers said KSIC chairman, D. Basavaraj in Davangere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X