ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಪ್ಟೆಂಬರ್ 2ರಂದು ದಾವಣಗೆರೆಗೆ ಅಮಿತ್ ಶಾ ಆಗಮನ

|
Google Oneindia Kannada News

ದಾವಣಗೆರೆ, ಆಗಸ್ಟ್ 31; ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟೆಂಬರ್ 2ರಂದು ದಾವಣಗೆರೆಗೆ ಭೇಟಿ ನೀಡಲಿದ್ದಾರೆ. ಗೃಹ ಸಚಿವರ ಆಗಮನದ ಹಿನ್ನಲೆಯಲ್ಲಿ ಪೊಲೀಸರು ಬಂದೋಬಸ್ತ್ ಬಿಗಿಗೊಳಿಸಿದ್ದಾರೆ.

ಸೆಪ್ಟೆಂಬರ 2ರ ಗುರುವಾರ ದಾವಣಗೆರೆ ನಗರದ ಗಾಂಧಿ ಭವನ, ಹರಿಹರ ತಾಲೂಕು ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆ ಕಾಮಗಾರಿಗಳನ್ನು ಉದ್ಘಾಟಿಸಲು ಅಮಿತ್ ಶಾ ಆಗಮಿಸುತ್ತಿದ್ದಾರೆ. ಜಿಲ್ಲಾಡಳಿತ ಕಾರ್ಯಕ್ರಮಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

 ದಾವಣಗೆರೆ ಫೈರಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಎಫ್ಐಆರ್! ದಾವಣಗೆರೆ ಫೈರಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಎಫ್ಐಆರ್!

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಈ ಕುರಿತು ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಅಮಿತ್ ಶಾ ಮತ್ತು ಮುಖ್ಯಮಂತ್ರಿಗಳ ಆಗಮನದ ಹಿನ್ನಲೆಯಲ್ಲಿ ಪೂರ್ವ ಸಿದ್ಧತಾ ಸಭೆಯನ್ನು ಜಿಲ್ಲಾಧಿಕಾರಿಗಳು ನಡೆಸಿದರು.

 ದಾವಣಗೆರೆ: ಆಕಸ್ಮಿಕವಾಗಿ ಹಾರಿ ಬಂದ ಗುಂಡು ಪೊಲೀಸ್ ಕಾನ್‌ಸ್ಟೆಬಲ್ ಜೀವ ತೆಗೀತು! ದಾವಣಗೆರೆ: ಆಕಸ್ಮಿಕವಾಗಿ ಹಾರಿ ಬಂದ ಗುಂಡು ಪೊಲೀಸ್ ಕಾನ್‌ಸ್ಟೆಬಲ್ ಜೀವ ತೆಗೀತು!

ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಾಗೂ ಮುಖ್ಯಮಂತ್ರಿಗಳು ಬೆಳಗ್ಗೆ ಗಾಂಧಿ ಭವನವನ್ನು ಉದ್ಘಾಟಿಸಿ, ಕೊಂಡಜ್ಜಿಯ ಕೊಂಡಜ್ಜಿ ಬಸಪ್ಪ ಸ್ಮಾರಕ ಮತ್ತು ಸಮಾಧಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸುವರು. ನಂತರ ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ನಾಮಫಲಕ ಉದ್ಘಾಟನೆ, ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

 ಕೌಶಲಯುಕ್ತ, ವೃತ್ತಿ ಆಧಾರಿತ, ಮೌಲಿಕ ಶಿಕ್ಷಣಕ್ಕೆ ದಾವಣಗೆರೆ ವಿಶ್ವವಿದ್ಯಾಲಯ ಒತ್ತು ಕೌಶಲಯುಕ್ತ, ವೃತ್ತಿ ಆಧಾರಿತ, ಮೌಲಿಕ ಶಿಕ್ಷಣಕ್ಕೆ ದಾವಣಗೆರೆ ವಿಶ್ವವಿದ್ಯಾಲಯ ಒತ್ತು

ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ಜಿಲ್ಲಾ ಪ್ರವಾಸ ಕೈಗೊಳ್ಳಲಿರುವುದರಿಂದ ಅಧಿಕಾರಿಗಳು, ನೌಕರರು ಯಾವುದೇ ರಜೆಯ ಮೇಲೆ ತೆರಳಬಾರದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಜಿಲ್ಲಾ ಪ್ರವಾಸ ಮುಗಿಯುವವರೆಗೂ ಯಾವುದೇ ಅಧಿಕಾರಿಗಳು, ನೌಕಕರು ರಜೆಯ ಮೇಲೆ ತೆರಳಬಾರದು ಹಾಗೂ ಅಧಿಕಾರಿ ಮತ್ತು ನೌಕಕರು ಕಚೇರಿಯ ಕೆಲಸದ ಸಮಯಕ್ಕೆ ಸರಿಯಾಗಿ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಮೇಲಾಧಿಕಾರಿಗಳು ತಿಳಿಸುವ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ.

ರಸ್ತೆಗಳಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳು

ರಸ್ತೆಗಳಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳು

ಅಮಿತ್ ಶಾ ಗಾಂಧಿ ಭವನ ಉದ್ಘಾಟನೆ ನೆರವೇರಿಸಿ ಅಲ್ಲಿಂದ ಶಾಮನೂರು, ಡಿಸಿ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಕೊಂಡಜ್ಜಿಗೆ ಹೋಗುವ ಕಾರಣ ಸೆಪ್ಟೆಂಬರ್ 1ರ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಎ. ಬಸವರಾಜ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಆಯಾ ರಸ್ತೆಗಳಲ್ಲಿ ಹಮ್ಮಿಕೊಂಡಿರುವ ಅನೇಕ ಕಾಮಗಾರಿಯನ್ನು ಆದಷ್ಟು ಬೇಗ ಪೂರೈಸಿ ರಸ್ತೆಯನ್ನು ತೆರವುಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್‍ಸಿಟಿ, ದೂಡಾ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಗತ್ಯ ಮಾಹಿತಿಗಳನ್ನು ಜಿಲ್ಲಾಡಳಿತಕ್ಕೆ ನೀಡಿ

ಅಗತ್ಯ ಮಾಹಿತಿಗಳನ್ನು ಜಿಲ್ಲಾಡಳಿತಕ್ಕೆ ನೀಡಿ

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, "ಕಳೆದ 2 ವರ್ಷದಿಂದ ಸರ್ಕಾರಿ ಯೋಜನೆಗಳು, ಆಯಾ ಯೋಜನೆಗಳ ಪ್ರಸ್ತುತ ಹಂತ ಹಾಗೂ ಇನ್ನಿತರೆ ಯೋಜನೆಗಳು ಇತ್ಯರ್ಥವಾಗದೇ ಉಳಿದಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳು ಮಾಹಿತಿ ಹೊಂದಿರಬೇಕು. ಹೊಸ ಸರ್ಕಾರ ಆಡಳಿತಕ್ಕೆ ಬಂದ ನಂತರ ಜಾರಿಗೊಳಿಸಿದ ಹೊಸ ಯೋಜನೆಗಳ ಮಾಹಿತಿಗಳನ್ನು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಜಿಲ್ಲಾಡಳಿತಕ್ಕೆ ನೀಡಬೇಕು. ಎಲ್ಲಾ ಸರ್ಕಾರಿ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಮಾಹಿತಿಯನ್ನು ಹಾಗೂ ಅಂಕಿ ಅಂಶಗಳು ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು" ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ವಿದ್ಯುತ್ ಪೂರೈಕೆ, ಕೋವಿಡ್ ಮಾರ್ಗಸೂಚಿ

ವಿದ್ಯುತ್ ಪೂರೈಕೆ, ಕೋವಿಡ್ ಮಾರ್ಗಸೂಚಿ

ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಜಿಎಂಐಟಿ ಆವರಣದ ಸುತ್ತ ಸ್ವಚ್ಛತೆ ಹಾಗೂ ಬ್ಯಾರಿಕೇಡ್ ಹಾಕಬೇಕು. ಹೆಲಿಪ್ಯಾಡ್ ನಿರ್ಬಂಧಿತ ಪ್ರದೇಶವಾಗಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ಮಾತ್ರ ಅವಕಾಶವಿರುತ್ತದೆ. ಅಲ್ಲಿನ ಸ್ಥಳ ಪರಿಶೀಲನೆಯ ಸಂಪೂರ್ಣ ಜವಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ.

ಕೊಂಡಜ್ಜಿಯಲ್ಲಿ ಸ್ಮಾರಕ ಹಾಗೂ ಸಮಾಧಿಯ ಸುತ್ತ ಸ್ವಚ್ಛತೆ ಜೊತೆ ಹೂವಿನ ಅಲಂಕಾರ ಮಾಡಿಸಬೇಕು. ಪುಷ್ಪನಮನ ವೇಳೆ ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಬೇಕು. ಉದ್ಘಾಟನೆ ನಡೆಯುವ ಎಲ್ಲಾ ಸ್ಥಳಗಳಲ್ಲೂ 24*7 ರಂತೆ ವಿದ್ಯುತ್ ಪೂರೈಸಬೇಕು. ಕೋವಿಡ್-19 ಮಾರ್ಗಸೂಚಿಯನ್ವಯ ಎಲ್ಲಾ ಕಾರ್ಯಕ್ರಮಗಳು ನಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದಾವಣಗೆರೆ ಎಸ್ಪಿ ಸೂಚನೆ

ದಾವಣಗೆರೆ ಎಸ್ಪಿ ಸೂಚನೆ

ದಾವಣಗೆರೆ ಎಸ್ಪಿ ಸಿ. ಬಿ. ರಿಷ್ಯಂತ್ ಮಾತನಾಡಿ, "ನಗರದ ಸ್ವಚ್ಛತೆ ಕಡೆ ಹೆಚ್ಚು ಕಾಳಜಿ ವಹಿಸಿ, ರಸ್ತೆಯಲ್ಲಿ ಕಸವಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಕೊಂಡಜ್ಜಿ ರಸ್ತೆಬದಿ ಇರುವ ಗಿಡ ಗಂಟಿಗಳನ್ನು ತೆಗೆದು ವಾಹನ ಓಡಾಟಕ್ಕೆ ಯಾವುದೇ ಸಮಸ್ಯೆಯಾಗದಂತೆ ಕೆಲಸ ನಿರ್ವಹಿಸುವ ಜವಬ್ದಾರಿಯನ್ನು ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಅಧಿಕಾರಿಗಳು ನೋಡಿಕೊಳ್ಳಬೇಕು. ಅರಣ್ಯ ಅಧಿಕಾರಿಗಳ ಜೊತೆ ಪೊಲೀಸ್ ಸಿಬ್ಬಂದಿಗಳು ಜೊತೆಗೂಡಿ ಕಾರ್ಯನಿರ್ವಹಿಸಬೇಕು" ಎಂದರು.

Recommended Video

RCB ತಂಡ ಈಗ UAE ತಲುಪಾಯ್ತು , IPLಗೆ ಫುಲ್ ರೆಡಿ | Oneindia Kannada

English summary
Union home minister Amit Shah will visit Davanagere on September 2, 2021. He will participate in various functions with chief minister of Karnataka Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X