• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ಹಿರಿಯ ಶಾಸಕ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 18: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂಬ ವದಂತಿಯ ನಡುವೆ ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪರ ಪರ ಬ್ಯಾಟ್ ಬೀಸಿದ್ದಾರೆ.

ಒಂದಿಬ್ಬರಿಂದ ರಾಜ್ಯ ಬಿಜೆಪಿಯಲ್ಲಿ ಗೊಂದಲ ಸೃಷ್ಟಿ; ರೇಣುಕಾಚಾರ್ಯಒಂದಿಬ್ಬರಿಂದ ರಾಜ್ಯ ಬಿಜೆಪಿಯಲ್ಲಿ ಗೊಂದಲ ಸೃಷ್ಟಿ; ರೇಣುಕಾಚಾರ್ಯ

"ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಖಿಲ ಭಾರತ ವೀರಶೈವ ಮಹಾಸಭಾ ಸಂಪೂರ್ಣ ಬೆಂಬಲ ನೀಡಲಿದೆ,'' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದಾವಣಗೆರೆ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ವೀರಶೈವ ಮಹಾಸಭಾದಿಂದ ನಾವು ಯಡಿಯೂರಪ್ಪರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ, ಮತ್ತೇನು?,'' ಎಂದು ತಿಳಿಸಿದರು.

   Karnatakaದ ಹೆಮ್ಮೆ,ಟೀಮ್ ಇಂಡಿಯಾದ ಲೆಜೆಂಡ್ Anil Kumble ಕ್ರಿಕೆಟ್ ಜರ್ನಿ | Oneindia Kannada
   ಬಿ.ಎಸ್. ಯಡಿಯೂರಪ್ಪ
   Know all about
   ಬಿ.ಎಸ್. ಯಡಿಯೂರಪ್ಪ

   ರಾಜ್ಯದ ಮಠಾಧೀಶರು ಯಡಿಯೂರಪ್ಪ ಪರ ಬ್ಯಾಟ್ ಬೀಸುತ್ತಿರುವ ಕುರಿತಂತೆ ಮಾತನಾಡಿ, "ಅವರು ದೊಡ್ಡವರು. ಅವರ ಬಗ್ಗೆ ಮಾತನಾಡಲ್ಲ. ವೀರಶೈವ ಮಹಾಸಭಾದಿಂದ ನಾನು ಮಾತನಾಡುತ್ತೇನೆ," ಎಂದ ಶಿವಶಂಕರಪ್ಪ, "ದಾವಣಗೆರೆಯಲ್ಲಿ ಕೊರೊನಾ ನಿಯಂತ್ರಣ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ನಾವು ಲಸಿಕೆಯನ್ನು ನಮ್ಮ ಹಣದಿಂದ ನೀಡುತ್ತಿದ್ದೇನೆ. ಸರ್ಕಾರದಿಂದ ಹಣ ಏನೂ ಕೊಟ್ಟಿಲ್ಲ. ಜನರು ಸಾಯಬಾರದು ಎಂಬ ಕಾರಣಕ್ಕೆ ಈ ಕಾರ್ಯ ಮಾಡುತ್ತಿದ್ದೇವೆ. ಲಸಿಕೆ ನೀಡಿಕೆಯೂ ಚೆನ್ನಾಗಿ ನಡೆಯುತ್ತಿದೆ,'' ಎಂದು ತಿಳಿಸಿದರು.

   English summary
   All India Veerashaiva Mahasabha will support BS Yediyurappa continue as Chief Minister, Shamanur Shivasankarappa said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X