ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಣ್ಣೆ ನಗರಿ ಮಹಿಳೆಯರ ರಕ್ಷಣೆಗೆ 24x7 ಪೊಲೀಸ್ ಬೀಟ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್ 11: ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ನಡೆದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಪೊಲೀಸ್ ಇಲಾಖೆಯು ಹಲವು ಯೋಜನೆಗಳಡಿ 24x7 ಕಾರ್ಯನಿರ್ವಹಿಸಲಿದೆ ಎಂದು ದಾವಣಗೆರೆಯ ಎಸ್ ಪಿ ಹನುಮಂತರಾಯ ತಿಳಿಸಿದ್ದಾರೆ. ನಗರ ಹಾಗೂ ತಾಲ್ಲೂಕುಗಳಲ್ಲಿ ಪೊಲೀಸ್ ಗಸ್ತು ವಾಹನ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.

 ಮಹಿಳೆಯರ ಸುರಕ್ಷತೆಗೆ ಒತ್ತು

ಮಹಿಳೆಯರ ಸುರಕ್ಷತೆಗೆ ಒತ್ತು

ನಗರದಲ್ಲಿ 7 ಪಿಸಿಆರ್ ವಾಹನಗಳು, 14 ಚೀತಾ ವಾಹನಗಳು (ಮೋಟಾರ್ ಸೈಕಲ್) ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ 7 ಗಸ್ತುವಾಹನಗಳು ಕಾರ್ಯನಿರ್ವಹಿಸಲಿವೆ. ಈ ವಾಹನಗಳು ಜಿಪಿಎಸ್ ವ್ಯವಸ್ಥೆ ಹೊಂದಿದ್ದು, ತೊಂದರೆಯಲ್ಲಿರುವ ಮಹಿಳೆಯರನ್ನು ರಕ್ಷಿಸಲು ಅನುಕೂಲವಾಗಲಿದೆ ಎಂದರು. ರಾತ್ರಿ ಸಮಯದಲ್ಲಿ ಮಹಿಳೆಯರು ತೊಂದರೆಯಲ್ಲಿದ್ದಾಗ, ಮನೆಗೆ ತಲುಪಲು ಸಮಸ್ಯೆಯಾದಾಗ ತಕ್ಷಣ ಜಿಲ್ಲಾ ಪೊಲೀಸ್ ಸಹಾಯವಾಣಿ ಮೊ.ನಂ: 9480803200, ಸ್ಥಿರ ದೂರವಾಣಿ 08192-253100, 08192-262699 ಹಾಗೂ ಎಮರ್ಜೆನ್ಸಿ ರಿಜಿಸ್ಟ್ರೇಷನ್ ಸಿಸ್ಟಮ್ ನಂ. 112/100ಗೆ ಕರೆ ಮಾಡಿ ಜಿಲ್ಲಾ ಪೊಲೀಸರ ಸಹಾಯ ಪಡೆಯಬಹುದು. ಈಗಾಗಲೇ ಜಿಲ್ಲಾ ನಿಸ್ತಂತು ಘಟಕದಲ್ಲಿ ಮೊಬೈಲ್ ನಂಬರ್‌ಗಳು, ಸ್ಥಿರ ದೂರವಾಣಿ ಸಂಖ್ಯೆಗಳೂ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಚುರುಕಾಗಿ ಕಾರ್ಯನಿರ್ವಹಿಸಲು ಒತ್ತು ನೀಡಲಾಗುವುದು ಎಂದರು.

ಹೈದರಾಬಾದ್ ಘಟನೆ ನಂತರ ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋ ಕ್ರಮಹೈದರಾಬಾದ್ ಘಟನೆ ನಂತರ ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋ ಕ್ರಮ

 ಕೆಲವೇ ನಿಮಿಷಗಳಲ್ಲಿ ಹಾಜರಾಗುವ ಪೊಲೀಸರು

ಕೆಲವೇ ನಿಮಿಷಗಳಲ್ಲಿ ಹಾಜರಾಗುವ ಪೊಲೀಸರು

ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸುವ ಕಂಟ್ರೋಲ್ ರೂಮ್ ಸಿಬ್ಬಂದಿ ತಕ್ಷಣವೇ ಆ ಮಾಹಿತಿಯನ್ನು ರಾತ್ರಿ ಕರ್ತವ್ಯದಲ್ಲಿರುವ ಪೊಲೀಸರಿಗೆ ರವಾನಿಸುತ್ತಾರೆ. ತಕ್ಷಣ ಪೊಲೀಸರು ವಾಹನದೊಂದಿಗೆ ನಿರ್ದಿಷ್ಟ ಸ್ಥಳ ತಲುಪಿ ಕಾರ್ಯ ಪ್ರವೃತ್ತರಾಗುತ್ತಾರೆ. ನಗರದಲ್ಲಿ ಗಸ್ತು ತಿರುಗುವ ಪೊಲೀಸರು ನಗರದ ಯಾವುದೇ ಪ್ರದೇಶದಿಂದ ನೆರವು ಕೋರಿ ಬಂದರೂ ಕೆಲವೇ ನಿಮಿಷಗಳಲ್ಲಿ ಆ ಸ್ಥಳ ತಲುಪಿ ಸಹಾಯ ಮಾಡುವರು.

 ಪೊಲೀಸ್ ಇಲಾಖೆಯಿಂದ ಆಪ್ ಸೌಲಭ್ಯ

ಪೊಲೀಸ್ ಇಲಾಖೆಯಿಂದ ಆಪ್ ಸೌಲಭ್ಯ

ಪೊಲೀಸ್ ಇಲಾಖೆಯು ಮಹಿಳೆಯರ ರಕ್ಷಣೆಗಾಗಿ ಕೆಎಸ್ ‌ಪಿ ಎಂಬ ಆಪ್ ಪರಿಚಯಿಸಿದ್ದು, ಈ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿಕೊಂಡು ತ್ವರಿತ ನೆರವು ಪಡೆಯಬಹುದು. ಈ ಆಪ್‌ನಲ್ಲಿ ನಿಮಗೆ ಹತ್ತಿರವಿರುವ ಪೊಲೀಸ್ ಠಾಣೆ ಹಾಗೂ ಅಗತ್ಯ ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತವೆ. ಇದರಲ್ಲಿ ಜಿಪಿಎಸ್ ಸೌಲಭ್ಯವಿದ್ದು, ನಿಮಗೆ ಸೂಕ್ತವೆನಿಸಿದ 5 ಜನರ ನಂಬರ್‌ ಅನ್ನು ಇದರಲ್ಲಿ ಸೇವ್ ಮಾಡಿಕೊಂಡು, ನೀವು ಒಮ್ಮೆ ಕರೆ ಅಥವಾ ಮೆಸೇಜ್ ಮಾಡಿದರೆ ಆ ಐದು ಜನರಿಗೂ ಮಾಹಿತಿ ತಿಳಿಯುತ್ತದೆ. ಇದು ಮಹಿಳೆಯರ ರಕ್ಷಣೆಗೆ ಉತ್ತಮವಾದ ಆಪ್ ಆಗಿದ್ದು, ಮಹಿಳೆಯರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು.

ಮಹಿಳೆಯರ ವಿರುದ್ಧ ದೌರ್ಜನ್ಯ ತಡೆ ಮೊದಲ ಆದ್ಯತೆ: ಗೃಹ ಸಚಿವ ಬೊಮ್ಮಾಯಿಮಹಿಳೆಯರ ವಿರುದ್ಧ ದೌರ್ಜನ್ಯ ತಡೆ ಮೊದಲ ಆದ್ಯತೆ: ಗೃಹ ಸಚಿವ ಬೊಮ್ಮಾಯಿ

 ಸರಗಳ್ಳತನ ತಡೆಗೆ ಗುಡ್ ಮಾರ್ನಿಂಗ್ ಬೀಟ್

ಸರಗಳ್ಳತನ ತಡೆಗೆ ಗುಡ್ ಮಾರ್ನಿಂಗ್ ಬೀಟ್

ಬೆಳಗಿನ ಜಾವದಲ್ಲಿ 'ಗುಡ್ ಮಾರ್ನಿಂಗ್ ಬೀಟ್ ಎಂಬ ಅಪರಾಧ ತಡೆ ತಂಡ ಮಹಿಳೆಯರ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸಲಿದೆ. ಚೈನ್ ಸ್ನಾಚಿಂಗ್ ತಡೆಯುವುದು ಇದರ ಪ್ರಮುಖ ಉದ್ದೇಶ. ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ದುರ್ಗಾಪಡೆ ರಚಿಸಿದ್ದು, ಈ ಪಡೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಕಾಲೇಜ್, ಬಸ್‌ ಸ್ಟ್ಯಾಂಡ್, ಶಾಪಿಂಗ್ ಮಾಲ್, ಚಿತ್ರಮಂದಿರಗಳು ಹಾಗೂ ಲೇಡಿಸ್ ಹಾಸ್ಟೆಲ್ ‌ನಂತಹ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಆತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯು ಈ ಎಲ್ಲಾ ಯೋಜನೆಗಳ ಮೂಲಕ ಮಹಿಳೆಯರಿಗೆ ರಕ್ಷಣೆ ಒದಗಿಸುವ ಕೆಲಸ ಮಾಡಲಿದೆ. ಈ ಎಲ್ಲಾ ಸಹಾಯವಾಣಿಗಳು 24x7 ಕಾರ್ಯನಿರ್ವಹಿಸಲಿದ್ದು, ಮಹಿಳೆಯರು ಈ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಸ್ ಪಿ ಹನುಮಂತರಾಯ ತಿಳಿಸಿದ್ದಾರೆ.

English summary
The police department has come forward to provide protection to women and children across Davanagere district following the rape and murder in Hyderabad and Unnao
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X