ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಮಾಸ್ಟರ್ ಆನಂದ್ ಮಾದರಿ ಕಾರ್ಯ, ತುಂಗಾಭದ್ರಾ ನದಿ ತಟ ಸ್ವಚ್ಛ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 13: ಹರಿಹರ ಪಟ್ಟಣದಲ್ಲಿನ ತುಂಗಭದ್ರಾ ನದಿ ತಟದ ಸ್ವಚ್ಛತಾ ಕಾರ್ಯದಲ್ಲಿ ನಟ, ನಿರೂಪಕ ಮಾಸ್ಟರ್ ಆನಂದ್ ಪಾಲ್ಗೊಂಡಿದ್ದರು. ಅವಧೂತ ವಿನಯ್ ಗುರೂಜಿ ಗ್ರೀನ್ ಗೆಳೆಯರ ಬಳಗ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಕಾರ್ಯದಲ್ಲಿ ಸಂಘದ ಪದಾಧಿಕಾರಿಗಳ ಜೊತೆ ನದಿ ತಟ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮಾಸ್ಟರ್ ಆನಂದ್ ಪಾಲ್ಗೊಂಡರು.

ಹರಿಹರದ ರಾಘವೇಂದ್ರ ಮಠದ ಹಿಂಭಾಗದಲ್ಲಿ ಹರಿಯುವ ತುಂಗಾಭದ್ರಾ ತಟದಲ್ಲಿ ಕಸ, ತ್ಯಾಜ್ಯ ಎಸೆಯಲಾಗಿತ್ತು. ಬೆಂಗಳೂರಿನಿಂದ ಬಂದ 20 ಜನರ ತಂಡದ ಸದಸ್ಯರಿಗೆ ಹರಿಹರದ ಸ್ಥಳೀಯರು ಸಾಥ್ ನೀಡಿದರು‌. ಬಳಿಕ ಹರಿಹರೇಶ್ವರ ದೇವಸ್ಥಾನದ ಹಿಂಭಾಗದಲ್ಲಿಯೂ ಸ್ವಚ್ಚತಾ ಕಾರ್ಯ ನಡೆಸಲಾಯಿತು‌.

ನಾರಾಯಣ ಸ್ವಾಮಿ ಚಡ್ಡಿ ಹೊತ್ತದ್ದು ಮಲ ಹೊರುವ ಪದ್ಧತಿಗಿಂತ ಹೀನ: ಡಿ. ಬಸವರಾಜ್ ಆಕ್ರೋಶ ನಾರಾಯಣ ಸ್ವಾಮಿ ಚಡ್ಡಿ ಹೊತ್ತದ್ದು ಮಲ ಹೊರುವ ಪದ್ಧತಿಗಿಂತ ಹೀನ: ಡಿ. ಬಸವರಾಜ್ ಆಕ್ರೋಶ

ಈ ವೇಳೆ ಮಾತನಾಡಿದ ಮಾಸ್ಟರ್ ಆನಂದ್, "ಸ್ವಚ್ಛತೆ ವಿನಯ್ ಗುರೂಜಿ ಅವರ ಕನಸಾಗಿದೆ. ಅವರು ಯಾರಿಗೂ ನೀವು ಮಾಡಿ ಎಂದು ನೇರವಾಗಿ ಹೇಳದೆ ಕಾರ್ಯಸಾಧನೆ ಮಾಡುತ್ತಾರೆ. ಅದರಿಂದ ದತ್ತಪೀಠ ಸೇರಿ ಹಲವು ಸ್ಥಳಗಳು ಈಗ ಸ್ವಚ್ಛವಾಗಿವೆ. ಅವರ ಈ ಕಾರ್ಯ ನಮ್ಮನ್ನು ಪ್ರೇರೇಪಿಸಿತು" ಎಂದರು.

Actor Master Anand team clean bank of Thuga Bhadra River At Harihar

"ನಾವೇನು ಹರಿಹರಕ್ಕೆ ಬರಬೇಕೆಂಬುದು ಪೂರ್ವಯೋಜಿತ ಕಾರ್ಯಕ್ರಮವಾಗಿರಲಿಲ್ಲ. ಒಂದು ವಾರದ ಕೆಳಗೆ ಎಲ್ಲಾ ನಡೆದಿದ್ದು. ಇಂತಹ ಅಭಿಯಾನ ಮಾಡಬೇಕು ಎನ್ನುವುದು ನಮ್ಮ ತಂಡದ ಉದ್ದೇಶವಾಗಿತ್ತು. ನಮ್ಮ ಸ್ನೇಹಿತರನ್ನು ಕೇಳಿದೆ, ಎಲ್ಲರೂ ಸಂಪರ್ಕಿಸಿ ಒಂದು ದಿನದ ಅಂತರದಲ್ಲಿ ಯೋಜನೆ ರೂಪಿಸಿಕೊಂಡೆವು" ಎಂದು ಮಾಸ್ಟರ್ ಆನಂದ್ ಹೇಳಿದರು.

"ನಾವು ಸಮಾಜದಲ್ಲಿ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಈ ಸ್ವಚ್ಛತಾ ಕಾರ್ಯಕ್ರಮ ಮಾಡಿದ್ದೇವೆ. ಗ್ರೀನ್ ಗೆಳೆಯರು ಬಂದು ಇಲ್ಲಿ ಏಕೆ ಇದೆಲ್ಲಾ ಮಾಡಿದರು ಎಂಬ ಆಲೋಚನೆ ಜನರಲ್ಲಿ ಬರಬೇಕು. ಸ್ವಚ್ಛತೆ ಎನ್ನುವುದು ಸಮಾಜಕ್ಕೆ ಮಾತ್ರವಲ್ಲ, ಪ್ರತಿ ಮನೆಗೆ, ಮನೆಯಿಂದ ಮನಸ್ಸಿಗೆ ಹೋಗಬೇಕು. ನಮ್ಮ ಈ ಕೆಲಸದಿಂದ ಬೇರೆ ಜನ ಯಾರು ಇಲ್ಲಿ ಕಸ ಹಾಕಲು ಯೋಚನೆ ಮಾಡಬೇಕು. ಇದು ಅವರ ಮನಸ್ಸಿಗೆ ಮುಟ್ಟಬೇಕು ಹಾಗಾದರೆ ನಮ್ಮ ಕೆಲಸಕ್ಕೆ ಸಾರ್ಥಕತೆ ಸಿಕ್ಕಂತಾಗುತ್ತದೆ" ಎಂದು ವಿವರಿಸಿದರು.

'ಚಾರ್ಲಿ 777' ವೀಕ್ಷಣೆಗೆ 'ಡಯನಾ''ಗೆ ಸಿಗ್ಲಿಲ್ಲ ಅನುಮತಿ, ಪ್ರತಿಭಟಸಿದ ಮಾಲೀಕ'ಚಾರ್ಲಿ 777' ವೀಕ್ಷಣೆಗೆ 'ಡಯನಾ''ಗೆ ಸಿಗ್ಲಿಲ್ಲ ಅನುಮತಿ, ಪ್ರತಿಭಟಸಿದ ಮಾಲೀಕ

Actor Master Anand team clean bank of Thuga Bhadra River At Harihar

ಸ್ವಚ್ಛತಾ ಕಾರ್ಯಕ್ರಮ ಮಾತ್ರ ನಿಮ್ಮ ತಂಡದ ಉದ್ದೇಶವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಯಾವುದೇ ಒಳ್ಳೆ ಕೆಲಸ ಮಾಡಿದರೂ ನಮ್ಮ ಗ್ರೀನ್ ಗೆಳೆಯರ ಬಳಗ ಕೈಜೋಡಿಸಲಿದೆ. ಗಿಡ ನೆಡುವುದು, ಆನಾಥಾಶ್ರಮ, ವೃದ್ಧಾಶ್ರಮ, ಅಂಧರ ಶಾಲೆ, ಅಂತಹ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಲು ನಾವು ಈ ಗ್ರೀನ್ ಗೆಳೆಯರು ಬಳಗ ಕಟ್ಟಿಕೊಂಡಿದ್ದೇವೆ" ಎಂದು ವಿನಯ್ ಗುರೂಜಿ ಹೇಳಿದರು.

ಯೋಗ ದಿನಾಚರಣೆ ಬಗ್ಗೆ ಮಾತನಾಡಿ, "ನಮ್ಮ ಉತ್ತರಹಳ್ಳಿಯ ಆಶ್ರಮದಲ್ಲಿ ಈಗಾಗಲೇ ಯೋಗ ನಡೆಯುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಯೋಗಭ್ಯಾಸ ಕಾರ್ಯಕ್ರಮವಿರುತ್ತದೆ. ವಾರದಂತ್ಯದ ದಿನ ವೇದಪಾಠವನ್ನು ಮಾಡಲಾಗುತ್ತದೆ. ಆಹಾರ ಅರಸಿ ಬರುವವರಿಗೆ ಊಟದ ಜೊತೆಗೆ ವಿದ್ಯೆಯನ್ನು ಕಲಿಯುವ ಅವಕಾಶ ನೀಡುವುದು ನಮ್ಮ ಉದ್ದೇಶವಾಗಿದೆ" ಎಂದು ವಿನಯ್ ಗುರೂಜಿ ತಿಳಿಸಿದರು.

English summary
Ancor and Kannada actor master Anand and green geleyaru team clean the bank of Thungabadra river at Harihar, Davanaere district. 20 mebers bengaluru team and local people help for cleaning work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X