• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಡ್ರಗ್ಸ್ ವಿಚಾರದಲ್ಲಿ ಚಿರಂಜೀವಿ ಹೆಸರು ಕೇಳಿ ಬಂದಿದ್ದು ಬೇಸರ ತಂದಿದೆ: ನಟ ದರ್ಶನ್

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಆಗಸ್ಟ್ 31: ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರದಲ್ಲಿ ಚಿರಂಜೀವಿ ಸರ್ಜಾ ಹೆಸರು ಬರುತ್ತಿದ್ದು, ಇದನ್ನು ಕೇಳಿ ನನಗೆ ತುಂಬಾ ಬೇಸರವಾಯ್ತು ಎಂದು ನಟ ದರ್ಶನ್ ತಮ್ಮ ಬೇಸರವನ್ನು ಮಾಧ್ಯಮಗಳ ಬಳಿ ಹೇಳಿಕೊಂಡರು.

   ಕಾಂಗ್ರೆಸ್ ನ ನಿಷ್ಠಾವಂತ ಕಟ್ಟಾಳು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ | Oneindia Kannada

   ದಾವಣಗೆರೆಗೆ ಭೇಟಿ ‌ನೀಡಿ ಬಾಪೂಜಿ ‌ಗೆಸ್ಟ್ ಹೌಸ್ ನಲ್ಲಿ ಮಾತನಾಡಿದ ಅವರು, ಒಂದು ಕ್ಲಾಸ್ ಎಂದ ಮೇಲೆ ಪ್ರಥಮ ಶ್ರೇಣಿ ವಿದ್ಯಾರ್ಥಿ ಇರ್ತಾರೆ, ಝೀರೋ ಅಂಕ ಪಡೆದ ಸ್ಟೂಡೆಂಟ್ ಇರ್ತಾರೆ ಹಾಗಂತ ಇಡೀ ಕ್ಲಾಸನ್ನು ಝೀರೋ ಎಂದರೆ ಹೇಗೆ? ಹಾಗೇ ಕೂಡ ಸ್ಯಾಂಡಲ್ ವುಡ್ ಎಂದರು.

   ಡ್ರಗ್ ಮಾಫಿಯಾ, ಪೋಸ್ಟ್ ಮಾರ್ಟಮ್ ಕಾನೂನು ಹಾಗೂ ಹೆಡ್ ಲೈನ್ ಮ್ಯಾನೇಜ್ ಮೆಂಟ್

   ಅಲ್ಲದೆ ಒಂದು ವಿಚಾರದಲ್ಲಿ ಸಾಕಷ್ಟು ಬೇಸರವಾಗಿದೆ, ಡ್ರಗ್ ಜಾಲದಲ್ಲಿ ಚಿರು ಹೆಸರು ಬರ್ತಾ ಇದೆ. ಅವನು ಸತ್ತು ಎಲ್ಲಿ ಇದಾನೋ, ಏನ್ ಮಾಡ್ತಾ ಇದಾನೋ ಗೊತ್ತಿಲ್ಲ. ಈಗ ಕೇಸ್ ಆಗಿ ಫ್ರೂ ಆಯ್ತು ಅಂದ್ರೆ ಅವನಿಗೆ ಶಿಕ್ಷೆ ಕೊಡೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.

   ನಮಗೆ ನಮ್ಮ ಹಿರಿಯರು ಹೇಳಿ ಕೊಟ್ಟಿದ್ದಾರೆ, ಸತ್ತವನು ನಮ್ಮ ಶತ್ರು ಆಗಿರಲಿ, ಒಳ್ಳೆಯದು ಮಾತಾಡಬೇಕಂತೆ. ಅದಕ್ಕೆಂದೆ ವರ್ಷದ ತಿಥಿ ಎಲ್ಲಾ ಮಾಡ್ತೀವಿ. ಆದರೆ ಸತ್ತವರ ಮೇಲೆ‌ ಹೀಗೆ ಮಾತನಾಡಬಾರದು. ಪೊಲೀಸ್ ನವರು ತನಿಖೆ ನಡೆಸುತ್ತಿದ್ದಾರೆ, ಏನು ಆಗುತ್ತೋ ಕಾದು ನೋಡೋಣವೆಂದರು.

   ಈ ಡ್ರಗ್ ಅನ್ನೋದು ಕೇವಲ ಸ್ಯಾಂಡಲ್ ವುಡ್ ನಲ್ಲಿ‌ ಮಾತ್ರ ಅಲ್ಲ, ಎಲ್ಲಾ ಕಡೆ ಇರಬಹುದು. ತನಿಖೆ ನಡೆಯಲಿ ಆಮೇಲೆ ನೋಡೋಣ. ಇನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪದ ಬಗ್ಗೆ ಉತ್ತರಿಸಿದ ದರ್ಶನ್, ಇನ್ನೊಬ್ಬರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ‌ ಎಂದು ಹೇಳಿದರು.

   ಡ್ರಗ್ಸ್ ಕುರಿತು ಹೇಳಿಕೆ; ಇಂದ್ರಜಿತ್ ಲಂಕೇಶ್ ವಿಚಾರಣೆ ಮಾಡ್ತೇವೆ

   ಅಲ್ಲದೆ ಈ ಡ್ರಗ್ ಕೇಸ್ ಇಡೀ ಸ್ಯಾಂಡಲ್ ವುಡ್ ಗೆ ಮಾತ್ರ ಅಲ್ಲ, ಇಡೀ ಕರ್ನಾಟಕಕ್ಕೆ ಕೆಟ್ಟ ಹೆಸರು. ‌ನಾನೂ ಕೂಡ 26-27 ವರ್ಷದಿಂದ ಈ ಫೀಲ್ಡ್ ನಲ್ಲಿ ಇದೀನಿ, ಲೈಟ್ ಬಾಯ್ ಯಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ, ಇದುವರೆಗೂ ನನಗೆ ಯಾವುದೇ ರೀತಿಯ ಡ್ರಗ್ಸ್ ಅನುಭವವಾಗಿಲ್ಲ ಎಂದರು.

   ಇಂದು ದಾವಣಗೆರೆಗೆ ಬಂದಿದ್ದು‌ ಖುಷಿಯಾಗಿದೆ, ಇಲ್ಲಿ ಮಲ್ಲಣ್ಣ (ಎಸ್.ಎಸ್ ಮಲ್ಲಿಕಾರ್ಜುನ)ನವರು ಒಳ್ಳೆಯ ಕುದುರೆಗಳನ್ನು ಸಾಕಿದ್ದಾರೆ. ಅವುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ. ಮೊನ್ನೆ ಮರಿ ಹಾಕಿದಾವೆ. ಕೋಡಿ ಅಂತ ಕೇಳಿದೆ, ತಗೊಂಡು ಹೋಗಿ ಅಂದ್ರು ಅದಕ್ಕೆ ಬಂದೆ ಎಂದು ತಾವು ಬಂದ ಕಾರಣ ತಿಳಿಸಿದರು.

   ಲಾಕ್ ಡೌನ್ ಟೈಂ ನಲ್ಲಿ ಕೆಲಸ ಇಲ್ಲ, ಹೀಗಾಗಿ ಕುರಿ ಕೋಳಿ ಸಾಕಾಣಿಕೆ ಮಾಡ್ತಾ ಇದೀನಿ, ನಿಮ್ಮ ಮನೆಯಲ್ಲಿ ಓಳ್ಳೆಯ ಕುದುರೆ ಸಾಕಿ ನಾನು ನಿಮ್ಮ ಮನೆಗೂ ಬರುತ್ತೇನೆ. ಅಲ್ಲದೆ ಪ್ರೀತಿಯಿಂದ ಮಲ್ಲಣ್ಣನವರು ನಮಗೆ ಎರಡು ಕುದುರೆ ನೀಡಿದ್ದಾರೆ ಅಷ್ಟೇ ಖರೀದಿ ಮಾಡಿಲ್ಲ. ಅಪ್ಪಾಜಿ ಹಾಗೂ ಮಲ್ಲಣ್ಣನವರು ತುಂಬಾ ಒಳ್ಳೆಯ ಗೆಳೆಯರು, ಅಪ್ಪಾಜಿ ಗೆಳೆಯರು ನನಗೆ ಹಿರಿಯರ ಸಮಾನ‌ ಎಂದರು.

   English summary
   "I am very sad to hear Chiranjeevi Sarja's name in Drugs." Actor Darshan said In Davanagere.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X