ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಆರ್ ಟಿಒ ಕಚೇರಿ ಮೇಲೆ ಎಸಿಬಿ ದಾಳಿ; 15 ದಲ್ಲಾಳಿಗಳು ವಶಕ್ಕೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

Recommended Video

ACB officials raid on Davangere RTO office and arrested more than 15 brokers

ದಾವಣಗೆರೆ, ಸೆಪ್ಟೆಂಬರ್ 17: ದಾವಣಗೆರೆ ಆರ್ ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 15ಕ್ಕೂ ಹೆಚ್ಚು ದಲ್ಲಾಳಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈಗೆ ತೆರಳುತ್ತಿದ್ದ ಪ್ರಯಾಣಿಕನಿಂದ ಲಕ್ಷಾಂತರ ಮೌಲ್ಯದ ವಿದೇಶಿ ಕರೆನ್ಸಿ ವಶದುಬೈಗೆ ತೆರಳುತ್ತಿದ್ದ ಪ್ರಯಾಣಿಕನಿಂದ ಲಕ್ಷಾಂತರ ಮೌಲ್ಯದ ವಿದೇಶಿ ಕರೆನ್ಸಿ ವಶ

ಸಾರ್ವಜನಿಕರಿಂದ ಡಿಎಲ್, ಎಲ್ ಎಲ್ ಆರ್ ಮಾಡಿಸಲು ದುಪ್ಪಟ್ಟು ದರ ತೆಗೆದುಕೊಳ್ಳುತ್ತಿದ್ದ, ಸಾವಿರಾರು ರೂಪಾಯಿ ವಸೂಲು ಮಾಡುತ್ತಿದ್ದ ದಲ್ಲಾಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರಿಂದ ಅಪಾರ ಪ್ರಮಾಣದ ದಾಖಲೆಗಳನ್ನು ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಏಜೆಂಟ್ ಗಳಿಂದ ಸಾರ್ವಜನಿಕರ ಸುಲಿಗೆಗೆ ಬ್ರೇಕ್ ಹಾಕಿದ್ದಾರೆ.

ACB Raid On RTO Office Arrested 15 Brokers In Davangere

ಅಪರೂಪದ ಪ್ರಾಣಿಯನ್ನು ವಶ ಪಡಿಸಿಕೊಂಡ ಬೆಂ.ಉತ್ತರ ಪೊಲೀಸರುಅಪರೂಪದ ಪ್ರಾಣಿಯನ್ನು ವಶ ಪಡಿಸಿಕೊಂಡ ಬೆಂ.ಉತ್ತರ ಪೊಲೀಸರು

ವಶಕ್ಕೆ ಪಡೆದುಕೊಂಡ ಮಧ್ಯವರ್ತಿಗಳ ಮೇಲೆ 7(a), 7A-8 ಪಿಸಿ ಕಾಯ್ದೆ 1988 ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದು, 15 ಜನ ದಲ್ಲಾಳಿಗಳಿಂದ 1,76,855 ರೂಪಾಯಿ ನಗದನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದ ತಂಡ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

English summary
ACB officials raid on Davangere RTO office and arrested more than 15 brokers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X