ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಾಯಕಾರಿ ಕ್ಯಾಟ್ ಫಿಶ್ ಸಾಕಾಣಿಕೆ ಮೇಲೆ ಎಸಿ ದಾಳಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 12: ಜೀವಕ್ಕೆ ಅಪಾಯಕಾರಿಯಾಗಿರುವ ಕ್ಯಾಟ್ ಫಿಶ್ ಸಾಕಾಣಿಕೆ ಮೇಲೆ ಎಸಿ ನೇತೃತ್ವದಲ್ಲಿ ದಾಳಿ ಮಾಡಿ ನಾಶಗೊಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ದೇಶಾದ್ಯಂತ ಆಫ್ರಿಕನ್ ಕ್ಯಾಟ್ ಫಿಶ್ ಗಳ ಸಾಕಾಣೆ ನಿಷೇಧಿಸಲಾಗಿತ್ತು. ಆದರೂ ಹರಿಹರ ತಾಲ್ಲೂಕಿನ ಎಳೆಹೊಳೆ ಗ್ರಾಮ ಪಂಚಾಯಿತಿಯ ಮಳಲಿಹಳ್ಳಿ ಗ್ರಾಮದ ಹೊರವಲಯದಲ್ಲಿ ಗೌರಮ್ಮ ಮತ್ತು ರಾಮನಗೌಡ ಅವರಿಗೆ ಸೇರಿದ ಸುಮಾರು ಹತ್ತು ಎಕರೆ ಜಮೀನಿನ 8 ಕೊಳಗಳಲ್ಲಿ ಯಾರಿಗೂ ತಿಳಿಯದಂತೆ ಕ್ಯಾಟ್ ಫಿಶ್ ಸಾಕಲಾಗಿತ್ತು.

ಸ್ಥಳಗಳಿಗೆ ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದ ತಂಡ ದಾಳಿ ನಡೆಸಿ, ಕ್ಯಾಟ್ ಫಿಶ್ ಹೊಂಡಗಳ ತೆರವು ಕಾರ್ಯಾಚರಣೆ ಮಾಡಿದ್ದು, ಅಧಿಕಾರಿಗಳ ತಂಡ ಅವುಗಳನ್ನು ನಾಶ ಮಾಡಿದೆ.

AC Attack On Dangerous Catfish Farming In Harihar

ಊರ ಹೊರವಲಯದಲ್ಲಿ ಈ ಕೊಳ ಇದ್ದ ಕಾರಣ ಕ್ಯಾಟ್ ಫಿಶ್ ಸಾಕಾಣೆ ಯಾರ ಗಮನಕ್ಕೆ ಬಂದಿರಲಿಲ್ಲ. ಆದರೂ ಮಾಹಿತಿ ಪಡೆದುಕೊಂಡ ಮೀನುಗಾರಿಕೆ ಇಲಾಖೆ ಎಸಿ ಮಮತಾ ಹೊಸಗೌಡರ ಗಮನಕ್ಕೆ ತಂದಿತ್ತು.

ಈ ಕೊಳದಲ್ಲಿ 10 ರಿಂದ 15 ಟನ್ ಫಿಶ್ ಸಾಕಾಣೆ ಮಾಡಲಾಗುತ್ತಿದ್ದು, ಇಲ್ಲಿನ ಕ್ಯಾಟ್ ಫಿಶ್ ಮೀನುಗಳು ಉತ್ತರ ಪ್ರದೇಶ, ಬಿಹಾರ ರಾಜ್ಯಕ್ಕೆ ಸರಬರಾಜು ಮಾಡಲಾಗುತಿತ್ತು. ಒಂದು ಮೀನು 100 ರೂ. ನಿಂದ 200 ರೂ.ಗೆ ಮಾರಾಟ ಮಾಡಲಾಗುತಿತ್ತು.

ಕ್ಯಾಟ್ ಫಿಶ್ ಗಳನ್ನು ಹಕ್ಕಿಗಳು ತಿನ್ನಬಾರದೆಂದು ಬಲೆ ಹಾಕಲಾಗಿತ್ತು. ಮೀನುಗಳನ್ನು ತಿನ್ನಲು ಬರುತ್ತಿದ್ದ ಹಕ್ಕಿಗಳು ಬಲೆಗೆ ಸಿಲುಕಿ ನರಳಿ ಸಾಯುತ್ತಿದ್ದವು. ಇನ್ನು ಮೀನುಗಳಿಗೆ ಕೋಳಿ ಮಾಂಸ ಹಾಕುತ್ತಿದ್ದ ಕಾರಣ, ನಾಯಿಗಳು ಕೂಡ ಇಲ್ಲಿಗೆ ಬರುತ್ತಿದ್ದವು. ಈ ನಾಯಿಗಳು ಅಕ್ಕಪಕ್ಕದಲ್ಲಿನ ಕೊಳಿ ಫಾರಂನ ಕೋಳಿಗಳನ್ನು ತಿನ್ನುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

AC Attack On Dangerous Catfish Farming In Harihar

ಎಂಟು ಕೊಳಗಳಲ್ಲಿ ಸಾಕಲಾಗುತ್ತಿದ್ದ ಮೀನುಗಳನ್ನು ಗುಂಡಿಯಲ್ಲಿ ಹಾಕಿ ನಾಶ ಮಾಡಲಾಗುತ್ತಿದೆ. ಕೊಳದ ನೀರನ್ನು ಇನ್ನೊಂದು ಕೊಳದಲ್ಲಿ ಹರಿಬಿಡಲಾಗುತ್ತಿದೆ. ಬೇರೆಯವರ ಜಮೀನಿನನಲ್ಲಿ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಲಾಗಿತ್ತು. ಇದು ನಿಷೇಧಿತವಾಗಿದ್ದರಿಂದ ಅದನ್ನು ನಾಶ ಮಾಡುತ್ತಿದ್ದೇವೆ. ಇನ್ನೊಮ್ಮೆ ಹೀಗೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಸಿ ಮಮತಾ ಹೊಸಗೌಡರ್ ಹೇಳಿದರು.

ಕ್ಯಾಟ್ ಫಿಶ್ ಗಳಲ್ಲಿ ಪಾದರಸ ಅಂಶವಿದ್ದು, ಮನುಷ್ಯ ನರವ್ಯೂಹಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಕ್ಯಾನ್ಸರ್ ಕಾರಕ ಅಂಶವಿದ್ದು, ಗರ್ಭಿಣಿಯರು ತಿಂದರೆ ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗುತ್ತಿದೆ.

ಈ ಮೀನುಗಳನ್ನು ಕೊಳೆತ ಕೊಳದೊಳಗೆ ಸಾಕಲಾಗುತ್ತದೆ. ಈ ಮೀನಿಗೆ ಆಹಾರವಾಗಿ ಸತ್ತ ಪ್ರಾಣಿಗಳು, ಸತ್ತ ದನ ಮತ್ತು ನಾಯಿಯ ಶವ ಹಾಕಲಾಗುತ್ತದೆ. ಅದನ್ನೇ ತಿಂದ ಕ್ಯಾಟ್ ಫಿಶ್ ಗಳು ದಷ್ಟ ಪುಷ್ಟವಾಗಿ ಬೆಳೆಯುತ್ತದೆ. ಕಡಿಮೆ ಬೆಲೆಗೆ ನಿಗದಿ ಆಗಿರುವ ಕಾರಣ ಗ್ರಾಹಕರು ತಿಳಿಯದೇ ಈ ಮೀನನ್ನು ಖರೀದಿಸುತ್ತಾರೆ.

English summary
Leadership in Assistant Commisioner attack on a catfish farm in Harihar Taluk, Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X