ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈನಿಕರನ್ನು ಭೇಟಿಯಾಗಲು ಸಿಯಾಚಿನ್ ಗೆ ಹೊರಟ ಹರಪನಹಳ್ಳಿ ಯುವಕ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

Recommended Video

ಹರಪನಹಳ್ಳಿಯ ಯುವಕನ ಪಯಣ ಸೈನಿಕರಿರುವ ಸಿಯಾಚಿನ್ ಕಡೆಗೆ

ದಾವಣಗೆರೆ, ಜುಲೈ.19: ಇಲ್ಲೊಬ್ಬ ಯುವಕ ದೇಶ ಕಾಯೋ ಸೈನಿಕರನ್ನು ಭೇಟಿಯಾಗಬೇಕು ಅಂತ ಏಕಾಂಗಿ ಪ್ರವಾಸ ಕೈಗೊಂಡಿದ್ದಾನೆ. ಎಂ.ಟೆಕ್. ಪದವೀಧರನಾಗಿರುವ ಆ ಯುವಕ
8,200 ಕಿಲೋಮಿಟರ್ ಸೈನಿಕ ಜಾಗೃತಿ ಬೈಕ್ ರಾಲಿ ಹಮ್ಮಿಕೊಂಡಿದ್ದಾನೆ.

ಬೈಕ್ ಗೆ ಭಾರತದ ಬಾವುಟ ಕಟ್ಟಿಕೊಂಡು ಪ್ರವಾಸ ಹೊರಟಿರುವ ಯುವಕನ ಹೆಸರು ರಾಹುಲ್. ಹರಪನಹಳ್ಳಿ ತಾಲೂಕಿನ ಎಂ.ಟೆಕ್ ಪದವೀಧರ. ದೇಶ ಸುತ್ತಬೇಕು ಕೋಶ ಓದಬೇಕು ಎಂಬಂತೆ ಈ ಯುವಕ ಓದಿನ ಬಳಿಕ ದೇಶ ಸುತ್ತೋಕೆ ಶುರು ಮಾಡಿಕೊಂಡಿದ್ದಾನೆ.

ಭಾರತೀಯ ಸೇನೆಯಲ್ಲಿ 52,000 ಸೈನಿಕರ ಕೊರತೆಭಾರತೀಯ ಸೇನೆಯಲ್ಲಿ 52,000 ಸೈನಿಕರ ಕೊರತೆ

ಈ ಯುವಕ ದೇಶ ಸುತ್ತುತ್ತಿರೋದು ಮಜಾ ಮಾಡೋದಕ್ಕಲ್ಲ. ದೇಶ ಕಾಯೋ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬೋದಕ್ಕೆ. ಹರಪನಹಳ್ಳಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರವಾಸ ಕೈಗೊಂಡ ಯುವಕ ಹುಬ್ಬಳ್ಳಿ, ಮುಂಬೈ, ಅಹಮದಾಬಾದ್, ರಾಜಸ್ಥಾನ, ಗುಜರಾತ್, ಅಮೃತಸರ, ದೆಹಲಿ ಮೂಲಕ ಸಿಯಾಚಿನ್ ತಲುಪಲಿದ್ದಾನೆ.

A young man from Harapanahalli has been traveling to meet the soldiers

8200 ಕಿಲೋಮಿಟರ್ ಪ್ರವಾಸವನ್ನು 35, 40 ದಿನಗಳಲ್ಲಿ ಪೂರೈಸಲಿರುವ ರಾಹುಲ್ ಸೈನಿಕ ಜಾಗೃತಿ ಮೂಡಿಸಲಿದ್ದಾನೆ.

ರಾಹುಲ್ 2017 ರಲ್ಲೂ ಆಲ್ ಇಂಡಿಯಾ ಪ್ರವಾಸ ಕೈಗೊಂಡು 1962 ರ ಯುದ್ಧಭೂಮಿಗೆ ತೆರಳಿದ್ದರು. ಚೈನಾ-ಭಾರತದ ಗಡಿ ಪ್ರಥಮ ಬಾರಿಗೆ ತೆರಳಿ ಅಲ್ಲಿನ ಭಾರತೀಯ ಯೋಧರಿಗೆ ಧನ್ಯವಾದಗಳನ್ನ ಅರ್ಪಿಸಿದ್ದರು. ಅಲ್ಲಿಂದ ಮೇಘಾಲಯಕ್ಕೆ ತೆರಳಿ ಬಾಂಗ್ಲಾ ಗಡಿಗೆ ಭೇಟಿ ನೀಡಿ ಸೈನಿಕರ ಜೊತೆ ಒಂದು ದಿನ ಕಾಲ ಕಳೆದಿದ್ದರು.

ರಾಹುಲ್ ಈ ರೀತಿ ದೇಶ ಸುತ್ತಿ ದೇಶದ ಗಡಿ ನೋಡೋದ್ರ ಜೊತೆ ಸೈನಿಕರಿಗೆ ಧನ್ಯವಾದ ಅರ್ಪಿಸೋದಕ್ಕೆ ರವಿಬೆಳಗೆರೆ ಅವರ 'ಹಿಮಾಲಯನ್ ಬ್ಲಾಂಡರ್' ಪುಸ್ತಕವೇ ಪ್ರೇರಣೆಯಂತೆ.

A young man from Harapanahalli has been traveling to meet the soldiers

ದೇಶ ಕಾಯೋ ಯೋಧರಿಗೆ ಧನ್ಯವಾದ ಹೇಳೋದ್ರ ಜೊತೆಗೆ ನಾವು ನಿಮ್ಮೊಂದಿಗೆ ಇದ್ದೇವೆ ಅಂತ ನೈತಿಕ ಸ್ಥೈರ್ಯ ತುಂಬಲು ಹೊರಟ ಯುವಕನ ಕಾರ್ಯ ಶ್ಲಾಘನೀಯ. ಯುವಕನ ಯಾತ್ರೆ ಯಶಸ್ವಿಯಾಗಲಿ ಎಂಬುದು ನಮ್ಮೆಲ್ಲರ ಆಶಯ.

English summary
A young man from Harapanahalli has been traveling to meet the soldiers. Program has been set up to help the soldiers to be confident
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X