ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಣ್ಣೆ ನಗರಿ ದಾವಣಗೆರೆಯಲ್ಲಿ 7 ಎಚ್ 1ಎನ್1 ಪ್ರಕರಣ ದಾಖಲು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 2: ಕೆಲವೇ ವರ್ಷಗಳ ಹಿಂದೆ ಎಚ್1ಎನ್1 ಎನ್ನುವ ಮಾರಣಾಂತಿಕ ರೋಗ ಜನರ ನಿದ್ದೆಗೆಡಿಸಿತ್ತು. ಈಗಲೂ ಕರ್ನಾಟಕದ ಕೆಲ‌ ಜಿಲ್ಲೆಗಳಲ್ಲಿ H1N1 ಪ್ರಕರಣಗಳು ವರದಿಯಾಗುತ್ತಿದ್ದು, ಮಧ್ಯ ಕರ್ನಾಟಕದಲ್ಲಿ ಏಳು H1N1 ಪ್ರಕರಣಗಳು ವರದಿಯಾಗಿವೆ.

ದಾವಣಗೆರೆ ಜಿಲ್ಲೆಯಲ್ಲಿ H1N1 ಜ್ವರ ಇರುವ ಪ್ರಕರಣಗಳು ಕಂಡು ಬಂದಿವೆ. ಆದರೆ ಇದರಿಂದ ಭಯಭೀತರಾಗಬೇಕಿಲ್ಲ, ನಾವು ಸಂಬಂಧಿಸಿದ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದೇವೆ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು H1N1 ಹರಡುವುದನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಘವೇಂದ್ರ ತಿಳಿಸಿದ್ದಾರೆ. ಈ ಶಂಕೆ ಇರುವ ಏಳು ವ್ಯಕ್ತಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೇರಳದಲ್ಲಿ ಮತ್ತೊಮ್ಮೆ ಸಾವಿನ ನಗಾರಿ ಬಾರಿಸಿದ ಹಂದಿಜ್ವರ ಭೀತಿಕೇರಳದಲ್ಲಿ ಮತ್ತೊಮ್ಮೆ ಸಾವಿನ ನಗಾರಿ ಬಾರಿಸಿದ ಹಂದಿಜ್ವರ ಭೀತಿ

7 1H1N1 Case Reported In District

ಮನುಷ್ಯರಲ್ಲಿ H1N1ನ ಮೊದಲ ಪ್ರಕರಣ ಅಮೆರಿಕದಲ್ಲಿ ಏಪ್ರಿಲ್ 2009ರಲ್ಲಿ ಪತ್ತೆಯಾಯಿತು. ಪ್ರಪಂಚದ ವಿವಿಧ ಭಾಗಗಳಲ್ಲಿ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗುವ ಕಾಲೋಚಿತ ಅವಧಿಗಳಿವೆ. ಲಸಿಕೆ ಪಡೆಯುವುದು, ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ತಪ್ಪಿಸುವುದು ಈ ರೋಗದಿಂದ ರಕ್ಷಿಸಿಕೊಳ್ಳುವ ಪ್ರಮುಖ ಟಿಪ್ಸ್ ಆಗಿದೆ ಎಂದು ದಾವಣಗೆರೆ ಡಿಎಚ್ ಒ ಡಾ. ರಾಘವೇಂದ್ರ ತಿಳಿಸಿದರು.

English summary
H1N1 cases are still reported in some districts of Karnataka and seven H1N1 cases are reported in davanagere,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X