ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಮಳೆಗೆ 3 ಸಾವು, 10 ಕೋಟಿಗೂ ಅಧಿಕ ನಷ್ಟ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 21; ದಾವಣಗೆರೆ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸಿದ್ದು, ಮೂವರನ್ನು ಬಲಿ ಪಡೆದಿದೆ. ಮಾತ್ರವಲ್ಲ 10 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಎಂಟು ಕುರಿಗಳೂ ಸಾವನ್ನಪ್ಪಿದ್ದು, ಹಲವಾರು ಎಕರೆ ಪ್ರದೇಶದಲ್ಲಿ ಬೆಲೆ ಜಲಾವೃತವಾಗಿದೆ.

ಮಾಯಕೊಡ ಸಮೀಪದ ರಾಮಪುರ ಕೆರೆಯಲ್ಲಿ ಎಮ್ಮೆ ಮೈ ತೊಳೆಯಲು ಹೋದ ವ್ಯಕ್ತಿ ನೀರು ಪಾಲಾಗಿದ್ದಾನೆ. ಎಮ್ಮೆ ಮೈ ತೊಳೆಯಲು ಹೋಗಿದ್ದ ಹೆದ್ನೆ ಗ್ರಾಮದ 40 ವರ್ಷದ ವ್ಯಕ್ತಿ ತಿಪ್ಪೇಶ್ ಎಂಬಾತ ಕಾಲು ಜಾರಿ ಬಿದ್ದಿದ್ದಾನೆ. ಬಳಿಕ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಬೋಟ್ ಸಮೇತ ತಿಪ್ಪೇಶ್ ಮೃತದೇಹಕ್ಕೆ ಹುಡುಕಾಟವನ್ನು ನಡೆಸಿದ್ದಾರೆ. ರಾತ್ರಿಯಾದ ಕಾರಣ ಶನಿವಾರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಮತ್ತೆ ಹುಡುಕಾಟ ಆರಂಭಿಸಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮಳೆ ನಿಂತರೂ, ನಿಲ್ಲದ ರೈತರ ಕಣ್ಣೀರು!ದಾವಣಗೆರೆ ಜಿಲ್ಲೆಯಲ್ಲಿ ಮಳೆ ನಿಂತರೂ, ನಿಲ್ಲದ ರೈತರ ಕಣ್ಣೀರು!

ಆನಗೋಡು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವಂತಪ್ಪ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಶೋಧಕಾರ್ಯ ಮುಂದುವರಿದಿದ್ದು, ತಿಪ್ಪೇಶ್ ಸುಳಿವು ಪತ್ತೆಯಾಗಿಲ್ಲ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇತ್ತ ಹರಿಹರ ತಾಲೂಕಿನ ಗೋವಿಹಾಳ್ ಗ್ರಾಮದಲ್ಲಿ ಕುರಿ ಕೊಟ್ಟಿಗೆ ಕುಸಿದು ವ್ಯಕ್ತಿ ಸಾವು ಕಂಡಿದ್ದಾರೆ. ಬಸವರಾಜ್ (60) ಮೃತ ದುರ್ದೈವಿ. ಕೊಟ್ಟಿಗೆಯಲ್ಲಿದ್ದ 8 ಕುರಿಗಳು ಸಾವನ್ನಪ್ಪಿದ್ದು, ಸ್ಥಳಕ್ಕೆ ಹರಿಹರ ಶಾಸಕ ಎಸ್. ರಾಮಪ್ಪ ಹಾಗೂ ತಹಶೀಲ್ದಾರ್ ರಾಮಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆ; ಮಳೆಯ ಹೊಡೆತಕ್ಕೆ ಅನ್ನದಾತರು ಕಂಗಾಲು ದಾವಣಗೆರೆ; ಮಳೆಯ ಹೊಡೆತಕ್ಕೆ ಅನ್ನದಾತರು ಕಂಗಾಲು

ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುವಾಗ ಯುವಕರ ಮೇಲೆ ಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ. ದರ್ಶನ್, ನವೀನ್ ಎಂಬ ಯುವಕರಿಬ್ಬರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾವಣಗೆರೆ ಸಮೀಪದ ಐಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಕೆರೆಗೆ ಕೋಡಿ ಬಿದ್ದಿದ್ದನ್ನು ನೋಡಲು ಯುವಕರು ಬೈಕ್ ನಲ್ಲಿ ತೆರಳಿದ್ದರು. ವಾಪಸ್ ಮನೆಗೆ ಬರುವಾಗ ಮಳೆಗೆ ನೆಂದಿದ್ದ ಮನೆ ಗೋಡೆ ಕುಸಿದು ಯುವಕರ ಮೇಲೆ ಬಿದ್ದಿದೆ. ಗಾಯಗೊಂಡ ಯುವಕರಿಗೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಾವಣಗೆರೆ; ರೈತರು, ವರ್ತಕರಿಗೆ ವಂಚನೆ, 2 ಕೋಟಿ ಪೊಲೀಸರ ವಶಕ್ಕೆ! ದಾವಣಗೆರೆ; ರೈತರು, ವರ್ತಕರಿಗೆ ವಂಚನೆ, 2 ಕೋಟಿ ಪೊಲೀಸರ ವಶಕ್ಕೆ!

ಇನ್ನು ಹರಿಹರ ತಾಲೂಕಿನಲ್ಲಿ ಅತಿ ಹೆಚ್ಚು ನಷ್ಟ ಆಗಿದ್ದು, 6.62 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಐದು ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ರೈತರು ಕಣ್ಣೀರು ಸುರಿಸುತ್ತಿದ್ದಾರೆ, ಮುಂದೆ ಹೆಂಗೆ ಜೀವನ ಮಾಡೋದು, ಮಾಡಿದ ಸಾಲ ತೀರಿಸುವುದು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.

ಜಿಲ್ಲಾಡಳಿತ ನೀಡಿರುವ ನಷ್ಟದ ಮಾಹಿತಿ

ಜಿಲ್ಲಾಡಳಿತ ನೀಡಿರುವ ನಷ್ಟದ ಮಾಹಿತಿ

ಜಿಲ್ಲೆಯಲ್ಲಿ ಶುಕ್ರವಾರ 49.0 ಮಿ.ಮೀ ಸರಾಸರಿ ಉತ್ತಮ ಮಳೆಯಾಗಿದ್ದು, ಒಟ್ಟು ರೂ.3. 19 ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು 69 ಮಿ.ಮೀ. ಮಳೆಯಾಗಿದೆ. ಅತಿವೃಷ್ಟಿಯಿಂದಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ. ಉಳಿದಂತೆ ಚನ್ನಗಿರಿ ತಾಲ್ಲೂಕಿನಲ್ಲಿ 52 ಮಿ.ಮೀ, ದಾವಣಗೆರೆ 53 ಮಿ.ಮೀ, ಹರಿಹರ 69 ಮಿ.ಮೀ, ಹೊನ್ನಾಳಿ 56 ಮಿ.ಮೀ, ಜಗಳೂರು ತಾಲ್ಲೂಕಿನಲ್ಲಿ 30 ಮಿ.ಮೀ,ನ್ಯಾಮತಿ 44 ಮೀ.ಮಿ ವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 2 ಕಚ್ಚಾಮನೆ ತೀವ್ರ ಹಾನಿಯಾಗಿದ್ದು, ರೂ.2 ಲಕ್ಷ, 22 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ.1.20 ಲಕ್ಷ. 910 ಎಕರೆ ಭತ್ತ, 10 ಎಕರೆ ಮೆಕ್ಕೆಜೋಳದ ಬೆಳೆ ಹಾನಿಯಾಗಿದ್ದು ರೂ.27.60 ಲಕ್ಷ ಸೇರಿದಂತೆ 30.80 ಲಕ್ಷ ರೂ. ನಷ್ಟವಾಗಿದೆ‌ ಎಂದು ಅಂದಾಜಿಸಲಾಗಿದೆ.

ಮನೆ ಕುಸಿತ, ಬೆಳೆಗಳಿಗೆ ಹಾನಿ

ಮನೆ ಕುಸಿತ, ಬೆಳೆಗಳಿಗೆ ಹಾನಿ

ಮಲೇಬೆನ್ನೂರು ಹೋಬಳಿಯ ಗೋವಿನಹಾಳು ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದು 62 ವರ್ಷದ ಬಸವರಾಜಪ್ಪ ತಂದೆ ಹಾಲಪ್ಪ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ ಅಲ್ಲದೆ, 2 ಕುರಿಗಳು ಮೃತಪಟ್ಟಿರುತ್ತವೆ. ತಾಲ್ಲೂಕಿನಲ್ಲಿ ಒಟ್ಟು ರೂ.161.46 ಲಕ್ಷ ನಷ್ಟದ ಅಂದಾಜು ಮಾಡಲಾಗಿದೆ.ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ.7 ಲಕ್ಷ, 23 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು ರೂ.1 ಲಕ್ಷ ಮತ್ತು 94 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ.5 ಲಕ್ಷ ಸೇರಿ ಒಟ್ಟು 23 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ. 3 ಲಕ್ಷ, 39 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ.11.70ಲಕ್ಷ. 4 ದನದ ಕೊಟ್ಟಿಗೆ ಹಾನಿಯಾಗಿದ್ದು, ರೂ.0.60 ಲಕ್ಷ ಮತ್ತು 1.20 ಎಕರೆ ಸೂರ್ಯಕಾಂತಿ ಬೆಳೆ ಹಾನಿಯಾಗಿದ್ದು, ರೂ.0.80 ಲಕ್ಷ, ಸೇರಿ ಒಟ್ಟು ರೂ.16.10 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

ಮಾರ್ಗಸೂಚಿ ಅನ್ವಯ ಪರಿಹಾರ

ಮಾರ್ಗಸೂಚಿ ಅನ್ವಯ ಪರಿಹಾರ

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ.5.50 ಲಕ್ಷ, 15 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ.7.95 ಲಕ್ಷ ಮತ್ತು 5 ಕಚ್ಚಾ ಮನೆ ತೀವ್ರಹಾನಿಯಾಗಿದ್ದು ರೂ.7.50 ಲಕ್ಷ, ಹಾಗೂ 19 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ.9.60 ಲಕ್ಷ 252 ಎಕರೆ ಭತ್ತ ಮತ್ತು 6 ಎಕರೆ ಮೆಕ್ಕೆಜೋಳದ ಬೆಳೆಹಾನಿಯಾಗಿದ್ದು, 46.44 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ತಾಲ್ಲೂಕಿನ ನಲ್ಲೂರು ಸೇತುವೆ ಬಳಿ ಎರವಾನಾಗ್ತಿಹಳ್ಳಿ ಗ್ರಾಮದ 70 ವರ್ಷ ವಯಸ್ಸಿನ ಕೆಂಚಪ್ಪ ಎಂಬ ವೃದ್ಧ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ವರದಿಯಾಗಿದೆ‌. ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 77..79 ಲಕ್ಷ ರೂ. ಅಂದಾಜು ನಷ್ಟ ಆಗಿದೆ‌.

ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 6 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು ರೂ.10 ಲಕ್ಷ ಅಂದಾಜು ನಷ್ಟ ಸಂಭವಿಸಿದೆ‌.
ಜಿಲ್ಲೆಯಲ್ಲಿ ಒಟ್ಟಾರೆ ರೂ.319.15 ಲಕ್ಷ ಅಂದಾಜು ನಷ್ಟ ಆಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಮಹಾಂತೇಶ್ ಆರ್. ಬೀಳಗಿ ತಿಳಿಸಿದ್ದಾರೆ.

ಡಿಸಿ ಭೇಟಿ ಪರಿಶೀಲನೆ

ಡಿಸಿ ಭೇಟಿ ಪರಿಶೀಲನೆ

ಚನ್ನಗಿರಿ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಡಿಸಿ ಮಹಾಂತೇಶ್ ಆರ್. ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ ನಲ್ಲೂರು ಗ್ರಾಮದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳ ಜನರ ಅಹವಾಲು ಸ್ವೀಕರಿಸಿದರು‌. ಈ ವೇಳೆ ಮಾತನಾಡಿದ ಅವರು, ಸರ್ಕಾರದಿಂದ ಆದಷ್ಟು ಬೇಗ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಹುಚ್ಚವ್ವನಹಳ್ಳಿ ಕೆರೆಯಲ್ಲಿ ತಿಪ್ಪೇಸ್ವಾಮಿ ಎಂಬ ವ್ಯಕ್ತಿ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದು, ಇವರ ಶೋಧ ಕಾರ್ಯ ನಡೆಯುತ್ತಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ತೀವ್ರಹಾನಿಯಾಗಿದ್ದು, ರೂ.13 ಲಕ್ಷ, 10 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ.4 ಲಕ್ಷ, 3 ಕಚ್ಚಾಮನೆ ತೀವ್ರ ಹಾನಿಯಾಗಿದ್ದು, ರೂ.11 ಲಕ್ಷ, 8 ಕಚ್ಚಾಮನೆ ಭಾಗಶಃ ಹಾನಿಯಾಗಿದ್ದು ರೂ.2.40 ಲಕ್ಷ, 2485 ಎಕರೆ ಭತ್ತದ ಬೆಳೆ ಹಾನಿ ಆಗಿದ್ದು, ರೂ.1 ಕೋಟಿ 44 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.

Recommended Video

ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯ ಈಗ ಕೆತ್ತಲಾಗಿದೆ | Oneindia Kannada

English summary
3 People killed and more than 10 crore loss due to untimely rain in Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X