ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಸೌದಿಗೆ ತೆರಳಿದ ತಾಯಿ, ಪರಿತಪಿಸುತ್ತಿರುವ ಮಕ್ಕಳು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 21: ಹೊಟ್ಟೆಪಾಡಿಗಾಗಿ ಸೌದಿ ಅರೇಬಿಯಾಕ್ಕೆ ತೆರಳಿರುವ ಮಹಿಳೆಯನ್ನು ತಾಯಿ ಮೃತಪಟ್ಟರೂ ಊರಿಗೆ ಮರಳಲು ಏಜೆಂಟ್‌ಗಳು ಬಿಡುತ್ತಿಲ್ಲ. ಹೇಗಾದರೂ ಆಕೆಯನ್ನು ಬಿಡಿಸಿ ದೇಶಕ್ಕೆ ಕರೆ ತನ್ನಿ ಎಂದು ಮಕ್ಕಳು ಪರಿತಪಿಸುವಂತಹ ಸ್ಥಿತಿ ಎದುರಾಗಿದೆ.

ದಾವಣಗೆರೆಯ ಶಿವ ನಗರದ 6ನೇ ಕ್ರಾಸ್‌ನಲ್ಲಿ ಹೀಗೆ ತಾಯಿಯ ಪೋಟೋ ಹಿಡಿದು ನಿಂತಿರುವ ಮಕ್ಕಳು ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ. ಸೌದಿ ಅರೇಬಿಯಾದಲ್ಲಿ‌ ಕೆಲಸ ಮಾಡಿ ಕೈತುಂಬ ಸಂಬಳ ಸಿಗುತ್ತದೆ ಎನ್ನುವ ಕನಸನ್ನು ಹೊತ್ತು ಹೋಗಿ ಸಿಲುಕಿದ ಕುಟುಂಬಗಳ ಕಥೆ ಇದಾಗಿದೆ.

ಅಮೆರಿಕದ ಕಠಿಣ ಪ್ರತೀಕಾರದ ಕ್ರಮ: ಸೌದಿ ಜನರ ಮೇಲೆ ನಿರ್ಬಂಧ, ವೀಸಾ ನಿಷೇಧ ಅಮೆರಿಕದ ಕಠಿಣ ಪ್ರತೀಕಾರದ ಕ್ರಮ: ಸೌದಿ ಜನರ ಮೇಲೆ ನಿರ್ಬಂಧ, ವೀಸಾ ನಿಷೇಧ

ಶಿವನಗರದ ನಿವಾಸಿ ಫೈರೋಜಾ ಬಾನು ತನ್ನ ಮೂರು ಜನ ಮಕ್ಕಳ ಜೊತೆ ಬಡತನದಿಂದ ಜೀವನ ನಡೆಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಗಂಡ ಅವರನ್ನು ಬಿಟ್ಟು ಹೋಗಿದ್ದು, ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಆಕೆಯ ಮೇಲಿತ್ತು.

20 ದೇಶಗಳ ಜನರಿಗೆ ನಿರ್ಬಂಧ ಹೇರಿದ ಸೌದಿ ಅರೇಬಿಯಾ20 ದೇಶಗಳ ಜನರಿಗೆ ನಿರ್ಬಂಧ ಹೇರಿದ ಸೌದಿ ಅರೇಬಿಯಾ

 3 Children Waiting For Mother To Return Form Saudi Arabia

ಕೂಲಿ ನಾಲಿ ಮಾಡಿ‌ಜೀವನ ಮಾಡುತ್ತಿದ್ದರು. ಆಕೆಯ ಸಂಬಂಧಿ ಸಿಕಿಂದರ್ ಎಂಬಾತ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮನೆ ಕೆಲಸ ಮಾಡಲು ಪುಸಲಾಯಿಸಿದನು. ಮಕ್ಕಳಿಗಾಗಿ ಸೌದಿ ಅರೇಬಿಯಾಗೆ ಹೋಗಲು ಫೈರೋಜಾ ಬಾನು ಒಪ್ಪಿಕೊಂಡಳು.

ಕೊರೊನಾ ಭೀತಿ ಮತ್ತೆ ಗಡಿ ಬಂದ್ ಮಾಡಿದ ಸೌದಿ ಅರೇಬಿಯಾ ಕೊರೊನಾ ಭೀತಿ ಮತ್ತೆ ಗಡಿ ಬಂದ್ ಮಾಡಿದ ಸೌದಿ ಅರೇಬಿಯಾ

ಮುಂಬೈ ಏಜೆಂಟ್‌ ಅಮ್ಜದ್‌ ಖಾನ್‌ ಮೂಲಕ ರಿಯಾದ್‌ನ ಏಜೆಂಟ್‌ ಅಬುಸೂಫಿಯಾನ್‌ ಎಂಬಾತನನ್ನು ಸಂಪರ್ಕಿಸಿ ಊಟ, ವಸತಿ ಸಹಿತ ತಿಂಗಳಿಗೆ 19,000 ಸಾವಿರಕ್ಕೆ ಮಾತುಕತೆ ನಡೆಸಿ ಫೈರೋಜಾ ಬಾನುರನ್ನು ಸೌದಿಗೆ ಎರಡು ವರ್ಷಗಳ ಹಿಂದೆ ಕಳುಹಿಸಿಕೊಡಲಾಗಿತ್ತು. ಆದರೆ ಈಗ ಆಕೆಗೆ‌ ಚಿತ್ರಹಿಂಸೆ ಕೊಡುತ್ತಿದ್ದು, ವಾಪಸ್ಸು ಬರಲು ಆಕೆಯ ವೀಸಾ ಅವಧಿ ಮುಗಿದರು, ಪಾಸ್ ಪೋರ್ಟ್ ನೀಡದೆ ಹಿಂಸೆ ಕೊಡುತ್ತಿದ್ದಾರೆ.

 3 Children Waiting For Mother To Return Form Saudi Arabia

ಇತ್ತ ಮಕ್ಕಳು ತಾಯಿ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಾರೆ. ಇನ್ನು ಫೈರೋಜಾ ಬಾನುವನ್ನು ಯಾವುದೋ ತೋಟದ ಮನೆಯಲ್ಲಿ ಇರಿಸಿಕೊಂಡು ವೇತನವನ್ನೂ ನೀಡದೇ ಬಳಿಕ ಇನ್ಯಾವುದೋ ಮನೆಗೆ ಕೆಲಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಫೈರೋಜಾ ಬಾನು ತನ್ನ ಸಂಬಂಧಿಗಳಿಗೆ ತಿಳಿಸಿದ್ದಾರೆ.

ಅಲ್ಲದೆ ಸೌದಿಗೆ ಕಳುಹಿಸಿದ ಎಜೆಂಟ್ ಗಳಿಗೆ ಕೇಳಿದರೆ ಎರಡು ಲಕ್ಷ ಕೊಡಿ ವಾಪಸ್ಸು ಕರೆಸಿಕೊಳ್ಳುತ್ತೇವೆ. ಇಲ್ಲವಾದರೆ ಕರೆಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಆಕೆಯ ಸಂಬಂಧಿಕರು ಸಂಸದರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರವೇ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಫೈರೋಜ ಬಾನು ವಾಪಸ್ ಭಾರತಕ್ಕೆ ಕರೆತರಬೇಕು ಎಂದು ಸ್ಥಳೀಯರು ಮನವಿ ಮಾಡಿ ಮಾಡಿದ್ದಾರೆ.

ಫೈರೋಜಾ ಮಕ್ಕಳಾದ ಮುಸ್ತಾಜ್ ಹೀಮ್, ಮಲ್ಲಿಕ್ ರಿಯಾನ್ ಹಾಗೂ ಮಹೀನ್ ತಾಜ್ ಸೌದಿಯಲ್ಲಿರುವ ತಾಯಿಗಾಗಿ ಕಾಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಆಕೆಯನ್ನು ಭಾರತಕ್ಕೆ ಕರೆತಂದು ತಾಯಿ‌ಮಕ್ಕಳನ್ನು ಒಂದು ಮಾಡಬೇಕಿದೆ.

English summary
Davanagere Shiva Nagar based women went for Saudi Arabia for work. Her 3 children now waiting for mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X