ದಾವಣಗೆರೆ; ಜೈನ ಸನ್ಯಾಸ ದೀಕ್ಷೆ ಪಡೆದ 24ರ ಯುವತಿ
ದಾವಣಗೆರೆ, ಮಾರ್ಚ್ 03: ಲೌಕಿಕ ಜೀವನ ತೊರೆದು ದಾವಣಗೆರೆಯ 24ರ ಯುವತಿ ಜೈನ ಸನ್ಯಾಸ ದೀಕ್ಷೆ ಪಡೆದರು. ಜೈನ ಗುರುಗಳಾದ ಮೇಘ ದರ್ಶನ್ ಸುದೇಶ್ವರ ಮಹಾರಾಜ್ ಯುವತಿಗೆ ದೀಕ್ಷೆಯನ್ನು ನೀಡಿದರು.
ದಾವಣಗೆರೆ ನಗರದ ಚೌಕಿ ಪೇಟೆ ನಿವಾಸಿ ದೀಪಿಕಾ ಚಂಪಕಲಾಲ್ ನಗರದ ಹೊರವಲಯದ ಆವರಗೆರೆಯಲ್ಲಿರುವ ನಾಗೇಶ್ವರ ಪಾರ್ಶ ಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಸನ್ಯಾಸ ದೀಕ್ಷೆ ಸ್ವೀಕರಿಸಿದರು.
ದಾವಣಗೆರೆ; ಜೈನ ಸನ್ಯಾಸ ದೀಕ್ಷೆ ಪಡೆದ ಒಂದೇ ಕುಟುಂಬದ ಐವರು
ಜೈನ ಗುರುಗಳಾದ ಮೇಘ ದರ್ಶನ್ ಸುದೇಶ್ವರ ಮಹಾರಾಜ್ ಯುವತಿಗೆ ದೀಕ್ಷೆ ನೀಡಿದರು. ಯುವತಿಯ ಕುಟುಂಬ ಸದಸ್ಯರು ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕುತುಬ್ ಮಿನಾರ್ ಕೆಳಗಿರುವ 27 ಹಿಂದೂ, ಜೈನ ದೇವಾಲಯ ಮರುಸ್ಥಾಪನೆಗೆ ಅರ್ಜಿ
ಫೆಬ್ರವರಿ 22ರಂದು ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದೇ ಕುಟುಂಬದ ಮೂರು ತಲೆಮಾರಿನ ಐವರು ಸದಸ್ಯರು ಜೈನ ದೀಕ್ಷೆ ಸ್ವೀಕರಿಸಿದ್ದರು. ಇಬ್ಬರು ಯುವಕರು ಇದರಲ್ಲಿ ಸೇರಿದ್ದರು.
ಮಾಸ್ಕ್ ಇಲ್ಲ, ಅಂತರವೂ ಇಲ್ಲ: ಜೈನ ಮುಖಂಡನ ಸ್ವಾಗತಕ್ಕೆ ಜನವೋ ಜನ
ದಾವಣಗೆರೆ ಪಿಜೆ ಬಡಾವಣೆಯ ಬಟ್ಟೆ ಅಂಗಡಿ ಮಾಲೀಕ ವರದೀಚಂದ್ ಜೀ (75), ಅವರ ಪುತ್ರ ಅಶೋಕ್ ಕುಮಾರ್ ಜೈನ್ (47), ಸೊಸೆ ಭಾವನಾ ಅಶೋಕ್ ಜೈನ್ (45), ಮೊಮ್ಮಕ್ಕಳಾದ ಪಕ್ಷಾಲ್ ಜೈನ್ (17), ಜಿನಾಂಕ್ ಕುಮಾರ್ ಜೈನ್ (15) ಸನ್ಯಾಸ ದೀಕ್ಷೆ ಪಡೆದಿದ್ದರು. ಅಂದು ಚನ್ನೈನ ಲಕ್ಷ ಕುಮಾರ್ ಜೈನ್ (23) ಅವರು ಸಹ ದೀಕ್ಷೆ ಸ್ವೀಕಾರ ಮಾಡಿದ್ದರು.