ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್ ಸಡಲಿಕೆ ಬೆನ್ನಲ್ಲೇ ದಾವಣಗೆರೆಯಲ್ಲಿ ಕೊರೊನಾ ಕೇಕೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 19: ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರಿದಿದ್ದು, ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಕೊರೊನಾ ಪಾಸಿಟಿವ್ ಕೇಸ್ 100 ರ ಗಡಿ ದಾಟಿ ಮುನ್ನುಗ್ಗುತ್ತಿವೆ. ಇದರಿಂದ ಬೆಣ್ಣೆನಗರಿಯಲ್ಲಿ ತಲ್ಲಣ ಸೃಷ್ಠಿಸಿದೆ.

Recommended Video

ಕರ್ನಾಟಕದಲ್ಲಿ ಒಂದೇ ದಿನಕ್ಕೆ 149 ಕೊರೊನಾ‌ ಕೇಸ್!! | Suresh Kumar

ಒಂದೇ ದಿನ 21 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಇಲ್ಲಿವರೆಗೂ 111 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಸೋಂಕಿತ ಸಂಖ್ಯೆ 976 ರ ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ಕು ಜನರಿಗೆ ಸೋಂಕು ಹರಡಿದೆ. ಅಂತೆಯೇ 556 ರ ಮೃತ ವೃದ್ಧನ ದ್ವಿತೀಯ ಸಂಪರ್ಕ ಸೋಂಕಿತನಿಂದ 8 ಜನರಿಗೆ ಸೋಂಕು ಹರಡಿದೆ. 533 ನರ್ಸ್ ನ ಸಂಪರ್ಕದಲ್ಲಿ ಇದ್ದ ಸೋಂಕಿತರಿಂದ 3 ಜನರಿಗೆ ಸೋಂಕು ದೃಢಪಟ್ಟಿದೆ. 694 ಐಎಲ್ಐ ಸೋಂಕಿತರಿಂದ ಒಬ್ಬರಿಗೆ ಸೋಂಕು ಹರಡಿದೆ.

ದಾವಣಗೆರೆಯಲ್ಲಿ ಇಂದು ಬರಲಿದೆ 900 ಪ್ರಕರಣಗಳ ಫಲಿತಾಂಶ ದಾವಣಗೆರೆಯಲ್ಲಿ ಇಂದು ಬರಲಿದೆ 900 ಪ್ರಕರಣಗಳ ಫಲಿತಾಂಶ

ಅಹಮದಾಬಾದ್ ನಿಂದ ಬಂದ ಇಬ್ಬರು ಪುರುಷರಿಗೆ ಸೋಂಕು, ಕೇರಳದಿಂದ ಬಂದ ಮಹಿಳೆಗೆ ಸೋಂಕು ಮತ್ತು ಹೊಸಪೇಟೆಯಿಂದ ಬಂದ ಇಬ್ಬರು ಯುವಕರಿಗೆ ಕೊರೊನಾ ಸೋಂಕು ತಗುಲಿದೆ.

21 New Coronavirus Cases Reported In Davanagere Today

ಜಾಲಿನಗರ, ಭಾಷಾ ನಗರದಲ್ಲೆ ಅತೀ ಹೆಚ್ಚು ಪ್ರಕರಣ ಪತ್ತೆಯಾಗಿವೆ.‌ ಮೃತ ವೃದ್ಧ, ಬೆಳ್ಳುಳ್ಳಿ ವ್ಯಾಪಾರಿ ಹಾಗೂ ತಬ್ಲಿಘಿಗಳೇ ದಾವಣಗೆರೆಗೆ ಕಂಟಕವಾಗಿದ್ದಾರೆ.

ದಾವಣಗೆರೆಯಲ್ಲಿ ಇಂದು 21 ಬದಲಿಗೆ 19 ಪ್ರಕರಣ ಎಂದು ತಪ್ಪಾಗಿ ಮಾಧ್ಯಮಕ್ಕೆ ಮಾಹಿತಿ ನೀಡುವ ಬುಲೆಟಿನ್ ನಲ್ಲಿ ಮುದ್ರಿಕೆಯಾಗಿದೆ. ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಪಷ್ಟಪಡಿಸಿದ್ದಾರೆ.

ತಪ್ಪಾಗಿ ಮುದ್ರಿತವಾಗಿ ಶಿವಮೊಗ್ಗದ ಲಿಸ್ಟ್ ಗೆ ಎರಡು ಪ್ರಕರಣ ಸೇರ್ಪಡೆಯಾಗಿದ್ದವು. 18, 19 ವರ್ಷದ ಯುವಕರಿಗೆ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಹೊಸಪೇಟೆಯಿಂದ ಚನ್ನಗಿರಿಗೆ ಬಂದಿದ್ದ ಇಬ್ಬರು ಯುವಕರಿಗೆ ಸೋಂಕು ಹರಡಿದ್ದು, ದಾವಣಗೆರೆ ಜಿಲ್ಲಾಡಳಿತ ಇವರನ್ನು ದಾವಣಗೆರೆಯ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಿತ್ತು ಎಂದಿದ್ದಾರೆ.

English summary
Coronavirus infection continues in Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X