ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸ್ತ್ರ ಕೇಳಿ ದರೋಡೆ ಮಾಡುತ್ತಿದ್ದ ಓಜಿ ಕುಪ್ಪಂ ಗ್ಯಾಂಗ್ ಸೆರೆ!

By ದಾವಣಗರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 19; ಅದು ಅಂತಿಂಥ ಖತರ್ನಾಕ್ ಗ್ಯಾಂಗ್ ಅಲ್ಲ.‌ ಸ್ವಲ್ಪ ಯಾಮಾರಿದರೂ ಹಣ ದೋಚುವಂಥ ತಂಡ. ಜನರ ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗುತ್ತಿದ್ದ ಇವರು ವಿಚಿತ್ರ ಆಸಾಮಿಗಳು.

ಇಡೀ ಗ್ಯಾಂಗ್ ಕೆಲಸ ಜೊತೆಗೂಡಿ ಹಣ ದೋಚುವುದು. ಅದಕ್ಕೂ ಮೊದಲು ಶಾಸ್ತ್ರ ಕೇಳುತ್ತಿತ್ತು. ಒಂದು ವೇಳೆ ಶಾಸ್ತ್ರ ಹೇಳುವವರು ಬೇಡ ಎಂದರೆ ಹಣ ದೋಚುವ ಕಾರ್ಯಕ್ಕೆ ಹೋಗುತ್ತಿರಲಿಲ್ಲ. ಬ್ಯಾಂಕ್‌ಗೆ ಬರುವ ಜನರೇ ಇವರ ಮುಖ್ಯ ಟಾರ್ಗೆಟ್. ಇದುವರೆಗೆ ದಾವಣಗೆರೆ ಜಿಲ್ಲೆಯೊಂದರಲ್ಲೇ 13 ಪ್ರಕರಣಗಳಲ್ಲಿ ಬೇಕಾಗಿದ್ದ ದರೋಡೆಕೋರರು ಈಗ ಪೊಲೀಸರ ಅತಿಥಿಗಳು. 11 ಆರೋಪಿಗಳನ್ನು ಪೊಲೀಸರು ಬಂಧಿಸಿರುವುದೇ ರೋಚಕ ಕಥೆ.

ಆ ಒಂದು ಪೋಟೋ ನೋಡಿ ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲಿ ಕೊಲೆಆ ಒಂದು ಪೋಟೋ ನೋಡಿ ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲಿ ಕೊಲೆ

ದಾವಣಗೆರೆ ಎಸ್ಪಿ ರಿಷ್ಯಂತ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ದರೋಡೆ ಮಾಡುವ ತಂಡವನ್ನು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಓಜಿ ಕುಪ್ಪಂನವರು. ತಂಡದಲ್ಲಿರುವ ಎಲ್ಲರೂ ಸಂಬಂಧಿಕರೇ‌.

ಸಿದ್ಧಾಪುರ ಡಾನ್ ಪಟ್ಟಕ್ಕಾಗಿ ಲಿಂಗ ಹಾಗೂ ನಾಗನ ಗ್ಯಾಂಗ್ ನಡುವೆ ವಾರ್ ಸಿದ್ಧಾಪುರ ಡಾನ್ ಪಟ್ಟಕ್ಕಾಗಿ ಲಿಂಗ ಹಾಗೂ ನಾಗನ ಗ್ಯಾಂಗ್ ನಡುವೆ ವಾರ್

ಗ್ಯಾಂಗ್ ವಾಸವಾಗಿದ್ದ ಊರಿನಲ್ಲೇ ಇವರನ್ನು ಬಂಧಿಸುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಅಲ್ಲಿ ಈ ಕಳ್ಳರು ಯಾರೂ ಇರುತ್ತಿರಲಿಲ್ಲ. ಮನೆಯಲ್ಲಿ ಮಹಿಳೆಯರು ಮಾತ್ರ ಇರುತ್ತಿದ್ದರು. ತಮಿಳುನಾಡು ಹಾಗೂ ಬೆಂಗಳೂರು ಪೊಲೀಸರು ಮೂವರಿಂದ ನಾಲ್ವರು ಆರೋಪಿಗಳನ್ನು ಮಾತ್ರ ಬಂಧಿಸಿದ್ದರು. ಆದರೆ ಇದೇ ಮೊದಲ ಬಾರಿಗೆ 11 ಮಂದಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ನಕಲಿ ಪೊಲೀಸರ ಗ್ಯಾಂಗ್ ಸೃಷ್ಟಿಸಿ ಸ್ನೇಹಿತನ ಬಳಿ ಸುಲಿಗೆ ಮಾಡಿಸಿದ್ದ ಆಪ್ತಮಿತ್ರ ! ನಕಲಿ ಪೊಲೀಸರ ಗ್ಯಾಂಗ್ ಸೃಷ್ಟಿಸಿ ಸ್ನೇಹಿತನ ಬಳಿ ಸುಲಿಗೆ ಮಾಡಿಸಿದ್ದ ಆಪ್ತಮಿತ್ರ !

ಯಾರಿಗೂ ಹಿಂಸೆ ಮಾಡುತ್ತಿರಲಿಲ್ಲ

ಯಾರಿಗೂ ಹಿಂಸೆ ಮಾಡುತ್ತಿರಲಿಲ್ಲ

ಜನರ ಗಮನ ಬೇರೆಡೆ ಸೆಳೆದು ಸಂಚು ರೂಪಿಸಿ ಹಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಇದು. ಆದರೆ ಇವರು ತಮ್ಮ ಕೃತ್ಯದ ವೇಳೆ ಯಾರಿಗೂ ಹಿಂಸೆ ಮಾಡುತ್ತಿರಲಿಲ್ಲ. ಇಂತಹ 11 ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

22 ಲಕ್ಷ ಹಣ, 4 ಬೈಕ್ ವಶಕ್ಕೆ

22 ಲಕ್ಷ ಹಣ, 4 ಬೈಕ್ ವಶಕ್ಕೆ

ಆಂಧ್ರಪ್ರದೇಶದ ಓಜಿ ಕುಪ್ಪಂನ ನಾಗರಾಜ್, ಚಿನ್ನು, ಗೋಗುಲ, ಕೆ. ವೆಂಕಟೇಶ್, ಜಿ. ಸ್ಯಾಮ್ ಸನ್, ವಿನೋದ್, ಸತೀಶ್, ಪಿ. ಮೋಹನ್ ರಾವ್, ಕೆ. ಸುಬ್ರಮಣಿ, ಪಿ. ಸುಬ್ರಹ್ಮಣ್ಯ, ಪಿ. ವೆಂಕಟೇಶಲು ಬಂಧಿತ ಆರೋಪಿಗಳು. ಆರೋಪಿಗಳಿಂದ ಒಟ್ಟು 22 ಲಕ್ಷ ರೂಪಾಯಿ ನಗದು, 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಮಾಹಿತಿ ನೀಡಿದ ಎಸ್ಪಿ

ಆರೋಪಿಗಳ ಮಾಹಿತಿ ನೀಡಿದ ಎಸ್ಪಿ

"ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಆರೋಪಿಗಳ ಬಗ್ಗೆ ಮಾಹಿತಿ ಪಡೆದು ದಾವಣಗೆರೆ ಜಿಲ್ಲೆಯ ಬಾತಿ ಗುಡ್ಡದಲ್ಲಿ ಮತ್ತೆ ಕೃತ್ಯ ಎಸಗುವ ಯೋಜನೆ ರೂಪಿಸಿದ್ದ ಬಗ್ಗೆ ಮಾಹಿತಿ ಪಡೆದ ಡಿವೈಎಸ್ಪಿ ಬಿ‌. ಎಸ್. ಬಸವರಾಜ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಇವರೆಲ್ಲರೂ ಸಂಬಂಧಿಕರು ಹಾಗೂ ಒಂದೇ ಊರಿನವರು" ಎಂದು ಎಸ್ಪಿ ರಿಷ್ಯಂತ್ ಹೇಳಿದ್ದಾರೆ.

Recommended Video

ಬ್ಲ್ಯಾಕ್ ಪಲ್ಸಾರ್ ನಲ್ಲಿ ಬಂದು ಮಹಿಳೆಯ ಸರ ಎಗರಿಸಿದ ದೃಶ್ಯ ಸಿಸಿಟಿವಿಯಲ್ಲಿ | Oneindia Kannada ಸೆರೆ
13 ಪ್ರಕರಣದಲ್ಲಿ ಬೇಕಾಗಿದ್ದರು

13 ಪ್ರಕರಣದಲ್ಲಿ ಬೇಕಾಗಿದ್ದರು

ದಾವಣಗೆರೆ ಜಿಲ್ಲೆಯಲ್ಲಿ ಜನರ ಗಮನ ಬೇರೆಡೆ ಸೆಳೆದು ಹಣ ದೋಚಿದ 13 ಪ್ರಕರಣಗಳಲ್ಲಿ ಬೇಕಾಗಿದ್ದ ಈ ಆರೋಪಿಗಳು ತಿಂಗಳಿಗೆ ಒಬ್ಬೊಬ್ಬರು 2 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಬಟ್ಟೆ ಮೇಲೆ ಬಣ್ಣ ಹಾಕುವುದು, ದುಡ್ಡು ಬೀಳಿಸಿ ಹಣ ದೋಚುವುದು, ಮೈಮೇಲೆ ಉಗಿಯುವುದು, ಕೆಸರು ಎರಚುವುದು ಸೇರಿದಂತೆ ಆರು ರೀತಿಯಲ್ಲಿ ಜನರ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದರು. ಮಾತ್ರವಲ್ಲ ಶಾಸ್ತ್ರ ತುಂಬಾ ನಂಬುತ್ತಿದ್ದ ಇವರೆಲ್ಲರೂ ಜೂಜಾಡುವ ಚಟ ಹೊಂದಿದ್ದರು.

English summary
Davanagere police arrested 11 members OG Kuppam gang. Notorious inter state gang involved in 13 robbery case in Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X