ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಪುಟ್ಟ ಸಹಾಯ, ಈ ನವಜಾತ ಶಿಶುವಿನ ಜೀವ ಉಳಿಸಬಹುದು

Google Oneindia Kannada News

ಪ್ರಮೀಳಾ ಅವರ ಅವಧಿಗೂ ಮುನ್ನ ಜನಿಸಿರುವ ನವಜಾತ ಹೆಣ್ಣುಮಗುವಿಗೆ ಇನ್ನು ಮೂರು ತಿಂಗಳು ಎನ್‌ಐಸಿಯು ಚಿಕಿತ್ಸೆಯ ನೆರವು ಬೇಕಾಗಿದೆ. ಆದರೆ ಅದಕ್ಕೆ ತಗುಲುವ ವೆಚ್ಚವನ್ನು ಭರಿಸುವಷ್ಟು ಶಕ್ತಿ ಆ ಮಗುವಿನ ಪೋಷಕರಿಗೆ ಇಲ್ಲ.

ನಿಮ್ಮ ಪುಟ್ಟ ಕಂದಮ್ಮನನ್ನು ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ನೋಡುವುದು ಎಷ್ಟು ಹೃದಯ ಕಿವುಚುವ ಸನ್ನಿವೇಶ ಎಂದು ನಾನು ವಿವರಿಸಲಾರೆ. ನಾನು ತಾಯಿಯಾಗಬೇಕೆಂದು ಹಲವು ವರ್ಷಗಳಿಂದ ಕನಸು ಕಟ್ಟಿಕೊಂಡವಳು. ಆದರೆ ನನ್ನ ಕನಸು ನುಚ್ಚು ನೂರಾಗಿ ಹರಿದುಹೋಗಿತ್ತು. ನನ್ನ ಮಗುವನ್ನು ಈ ಜಗತ್ತಿಗೆ ಕರೆತರುವ ಮೊದಲೇ ಆತನನ್ನು ಕಳೆದುಕೊಂಡಿದ್ದೆ.

ಈಗ ನಾನು ಕೊನೆಗೂ ಅಮ್ಮನಾದೆ. ಆದರೆ ನನ್ನ ಮಗು ನನ್ನಿಂದ ಈಗ ದೂರದಲ್ಲಿ, ಇನ್‌ಕ್ಯುಬೇಟರ್ ಒಳಗೆ ತನ್ನ ಬದುಕಿಗಾಗಿ ಹೋರಾಡುತ್ತಿದ್ದಾಳೆ. ಆಕೆಯನ್ನು ನಾನು ಉಳಿಸಿಕೊಳ್ಳಬಲ್ಲೆನೇ ಎಂಬುದೂ ನನಗೆ ತಿಳಿದಿಲ್ಲ- ಪ್ರಮೀಳಾ, ತಾಯಿ.

Confined to the incubator, this newborn baby needs help to survive

ನವೆಂಬರ್ 25ರ ಬೆಳಿಗ್ಗೆ ಪ್ರಮೀಳಾ ಎದ್ದಾಗ ವಿಪರೀತ ರಕ್ತಸ್ರಾವವಾಗುತ್ತಿತ್ತು. ಅವರು ಆಗ ಆರು ತಿಂಗಳ ಗರ್ಭಿಣಿ. ಅವರ ಪರಿಸ್ಥಿತಿ ನೋಡಿ ಕಂಗೆಟ್ಟ ಪತಿ ಆಂಡ್ರೂ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ಪ್ರಮೀಳಾ ಅವರನ್ನು ತುರ್ತು ಕೊಠಡಿಗೆ ಸಾಗಿಸಲಾಯಿತು. ಅಲ್ಲಿ ಹಲವು ಗಂಟೆಗಳವರೆಗೆ ಅವರ ಮೇಲೆ ನಿಗಾ ವಹಿಸಲಾಯಿತು. ಪ್ರಸವ ವಿಳಂಬವಾಗಿ ನಡೆಯಲೆಂದು ಚುಚ್ಚುಮದ್ದು ನೀಡಲಾಯಿತು. ಆದರೆ ಯಾವುದೇ ಸಹಾಯ ಮಾಡಲಿಲ್ಲ. ಆಕೆಯ ನೋವು ತೀವ್ರವಾಯಿತು. 'ದಯವಿಟ್ಟು ನನ್ನ ಮಗುವನ್ನು ಉಳಿಸಿಕೊಡಿ' ಎಂದು ದಾದಿ ಬಳಿ ಅಂಗಲಾಚಿದರು. ಪ್ರಮೀಳಾ ಅವರನ್ನು ತುರ್ತು ಚಿಕಿತ್ಸೆಯ ಸಿ-ವಿಭಾಗಕ್ಕೆ ಕರೆದೊಯ್ಯಲಾಯಿತು.

'ಇದು ಹೆಣ್ಣುಮಗು'- ಕೆಲವು ಗಂಟೆಗಳ ಬಳಿಕ ಪ್ರಮೀಳಾ ಅವರಿಗೆ ಆಸ್ಪತ್ರೆ ಸಿಬ್ಬಂದಿ ಹೇಳಿದರು. ಆದರೆ ಆಕೆಯ ಮಗು ಅತ್ತಿರಲಿಲ್ಲ.

Confined to the incubator, this newborn baby needs help to survive

'ಅಲ್ಲಿ ಕೊಂಚವೂ ಶಬ್ದ ಕೇಳಿಸಲಿಲ್ಲ. ನನ್ನ ಮಗುವನ್ನು ವೈದ್ಯರು ಎನ್‌ಐಸಿಯುಗೆ ಕರೆದೊಯ್ದಿದ್ದು ಅಷ್ಟೇ ಗೊತ್ತು. ಅವಳು ತೀರಾ ಚಿಕ್ಕದಾಗಿದ್ದಳು. ಟವೆಲ್‌ನಲ್ಲಿ ಅವಳನ್ನು ಸುತ್ತಲಾಗಿತ್ತು. ಇಂತಹ ಪರಿಸ್ಥಿತಿ ಯಾವ ಪೋಷಕರಿಗೂ ಬರಬಾರದು' ಎಂದು ಆಕೆ ಕಣ್ಣೀರಿಟ್ಟರು.

ಹುಟ್ಟುವಾಗ ಆಕೆಯ ಮಗು ಇದ್ದದ್ದು ಕೇವಲ 600 ಗ್ರಾಂ ತೂಕ. ಅಕಾಲಿಕ ಜನನದ ಕಾರಣದಿಂದಾಗಿ ಆಕೆಯಲ್ಲಿ ಉಸಿರಾಟದ ಸಮಸ್ಯೆಯ ಜತೆಗೆ ಜೀವಕ್ಕೆ ಅಪಾಯಕಾರಿಯಾದ ಇತರೆ ಸಮಸ್ಯೆಗಳೂ ಇರುವುದು ಪತ್ತೆಯಾಯಿತು.

'ನನ್ನ ಮಗುವನ್ನು ನೋಡಬೇಕೆಂದು ನಾನು ಹಲವು ವರ್ಷಗಳಿಂದ ಕನಸು ಕಂಡಿದ್ದೆ. ಆದರೆ ಅಂದು ಆಕೆಯನ್ನು ನೋಡಲು ನನಗೆ ಯಾವ ಧೈರ್ಯವೂ ಇರಲಿಲ್ಲ' ಎಂದು ಪ್ರಮೀಳಾ ತಮ್ಮ ಮಗುವನ್ನು ಮೊದಲ ಬಾರಿ ನೋಡಲು ಹೋದ ಗಳಿಗೆಯನ್ನು ನೆನಪಿಸಿಕೊಂಡರು.

'ನನ್ನ ಮಗು ತೀರಾ ಚಿಕ್ಕದಾಗಿತ್ತು. ಆಕೆ ಪೆಟ್ಟಿಗೆಯೊಳಗಿದ್ದಾಳೆ, ಅನೇಕ ಕೊಳವೆಗಳನ್ನು ಸಿಕ್ಕಿಸಲಾಗಿದೆ. ಆಕೆ ಹೀಗೆ ಇರಬೇಕಾಗಿರಲಿಲ್ಲ. ಆಕೆ ಖುಷಿಯಿಂದ ನನ್ನ ತೋಳಿನಲ್ಲಿ ಕುಣಿದಾಡಬೇಕಿತ್ತು' ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.

'ಈಗ ಎಲ್ಲವೂ ದೂರದ ಕನಸು ಎನಿಸುತ್ತಿದೆ' ಎಂದು ತಮ್ಮ ಕಣ್ಣೀರನ್ನು ಅವರು ಒರೆಸಿಕೊಂಡರು. ತಮ್ಮ ನವಜಾತ ಮಗುವಿಗಾಗಿ ತಾವೇ ಕುಳಿತು ಹೆಣೆದಿದ್ದ ಕೆಂಪು ಬಣ್ಣದ ಪುಟಾಣಿ ಫ್ರಾಕ್‌ಅನ್ನು ಎದೆಗೆ ಅವುಚಿಕೊಂಡರು.

ಇನ್‌ಕ್ಯುಬೇಟರ್‌ನಲ್ಲಿರುವ ಆ ಪುಟಾಣಿ ತುಸು ಚೇತರಿಸಿಕೊಳ್ಳುತ್ತಿದೆ. ಆದರೆ ಆಕೆಗೆ ಚಿಕಿತ್ಸೆ ಮುಂದುವರಿಸಲು ಪೋಷಕರು ಶಕ್ತರಾಗಿಲ್ಲ.

ಪ್ರಮೀಳಾ ಅವರ ನವಜಾತ ಶಿಶುವಿನ ಆರೋಗ್ಯ ನಿಧಾನವಾಗಿ ಸುಧಾರಿಸುತ್ತಿದೆ. ಆದರೆ ಆಕೆಗೆ ಇನ್ನೂ ಮೂರು ತಿಂಗಳ ಚಿಕಿತ್ಸೆಯ ಅಗತ್ಯವಿದೆ. ಆಕೆಯ ಬಡ ಪೋಷಕರು ಸುಮಾರು 15 ಲಕ್ಷ ರೂ ($21,087) ವೆಚ್ಚ ತಗುಲುವ ಜೀವ ರಕ್ಷಕ ಚಿಕಿತ್ಸೆಯನ್ನು ಒದಗಿಸುವಷ್ಟು ಆರ್ಥಿಕವಾಗಿ ಶಕ್ತರಾಗಿಲ್ಲ.

'ಜನ್ಮ ನೀಡುವ ಮೊದಲೇ ಒಂದು ಮಗುವನ್ನು ನಾನು ಕಳೆದುಕೊಂಡಿದ್ದೆ. ಆದರೆ ಈ ಬಾರಿ ಸ್ವಲ್ಪ ಭರವಸೆ ಇದೆ. ನನ್ನ ಮಗುವನ್ನು ಮನೆಗೆ ಕರೆದೊಯ್ಯಬಹುದು. ನಾನು ತಾಯಿಯಾಗಬಹುದು. ನನಗೆ ನನ್ನ ಮಗುಬೇಕು. ದಯವಿಟ್ಟು ಆಕೆಯನ್ನು ನನ್ನಿಂದ ದೂರ ಕಳಿಸಬೇಡಿ' ಎಂದು ಪ್ರಮೀಳಾ ರೋಧಿಸಿದರು.

ಜಿಮ್ ನಿರ್ವಹಣೆಯ ಕೆಲಸ ಮಾಡುತ್ತಿರುವ ಆಂಡ್ರೂ ತಿಂಗಳಿಗೆ 8000 ರೂ ಸಂಪಾದಿಸುತ್ತಾರೆ. ಇದು ಅವರ ಏಕೈಕ ಮಗುವಿನ ಜೀವ ಉಳಿಸಲು ಸಾಲುವುದಿಲ್ಲ.

ನಿಮ್ಮ ಪುಟ್ಟ ಸಹಾಯ ಈ ಪೋಷಕರಿಗೆ ಭರವಸೆ ನೀಡಬಲ್ಲದು. ಹಾಗೂ ಅವರ ನವಜಾತ ಪುಟಾಣಿ ಮಗುವಿಗೆ ಬದುಕಲು ಒಂದು ಅವಕಾಶ ಕೊಡಬಲ್ಲದು. ದಯಮಾಡಿ ಉದಾರವಾಗಿ ದೇಣಿಗೆ ನೀಡಿ.

ಈ ದೇಣಿಗೆ ಸಂಗ್ರಹಕಾರರ ಬ್ಯಾಂಕ್ ಖಾತೆಗೆ ನೇರವಾಗಿ ದೇಣಿಗೆ ಜಮೆ ಮಾಡಿ. ರೂಪಾಯಿ ವರ್ಗಾವಣೆಗೆ ಮಾತ್ರ ಅವಕಾಶ.

ವರ್ಚ್ಯುವಲ್ ಖಾತೆ ಸಂಖ್ಯೆ: 6999413500149231

ವರ್ಚ್ಯುವಲ್ ಖಾತೆ ಹೆಸರು: ಪ್ರಮೀಳಾ-ಕೆಟ್ಟೋ

ಖಾತೆ ಮಾದರಿ: ಚಾಲ್ತಿ

ಐಎಫ್‌ಎಸ್‌ಸಿ: YESB0CMSNOC

Ketto.org is a leading crowdfunding platform that supports crowdfunding for cancer, heart and many other treatments.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X