ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದ ಅಮ್ಮನಹಟ್ಟಿಗೆ "ಮದ್ಯಮುಕ್ತ ಗ್ರಾಮ" ಫಲಕ ಅಳವಡಿಸಿದ ಗ್ರಾಮಸ್ಥರು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರಿ 26: ಗಂಡಸರ ಕುಡಿತದ ಚಟದಿಂದ ಬೇಸತ್ತು ನರಳುತ್ತಿರುವ ಅಸಂಖ್ಯ ಕುಟುಂಬಗಳು ಇಂದಿಗೂ ಕೆಲವು ಗ್ರಾಮಗಳಲ್ಲಿವೆ. ಕುಡಿತದ ಗೀಳಿನಿಂದ ಅವರನ್ನು ಹೊರತಂದು ಜಾಗೃತಿ ತರಲು ಹಲವು ಪ್ರಯತ್ನಗಳೂ ನಡೆಯುತ್ತಿವೆ. ಅಂಥ ಒಂದು ಪ್ರಯತ್ನವನ್ನು ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಮ್ಮನಹಟ್ಟಿ ಗ್ರಾಮದಲ್ಲಿ ಮಾಡಲಾಗಿದೆ.

ಕುಡಿತದ ಹಾವಳಿಯಿಂದ ಕಂಗೆಟ್ಟಿದ್ದ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಬದಲಾಯಿಸಬೇಕು ಎಂದು ಗ್ರಾಮದ ಕೆಲ ಯುವಕರು ಸ್ವಯಂ ಪ್ರೇರಿತವಾಗಿ "ಮದ್ಯಮುಕ್ತ ಗ್ರಾಮ" ಎಂದು ನಾಮಫಲಕ ಅಳವಡಿಸಿದ್ದಾರೆ. ಇಂದು 71ನೇ ಗಣರಾಜ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಮದ್ಯ ಪ್ರಿಯರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ?ಮದ್ಯ ಪ್ರಿಯರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ?

ಅಮ್ಮನಹಟ್ಟಿ ಗ್ರಾಮದಲ್ಲಿ ಸಾಕಷ್ಟು ಮಂದಿ ಕುಡಿತಕ್ಕೆ ಒಳಗಾಗಿದ್ದರು. ಗ್ರಾಮದಲ್ಲಿ ಮಕ್ಕಳು, ಹೆಂಗಸರು ಮದ್ಯಪಾನ ಮಾಡುವವರ ಕಾಟದಿಂದ ಅನುಭವಿಸಿದ ತೊಂದರೆಯೂ ಅಷ್ಟಿಷ್ಟಲ್ಲ. ಇವನ್ನು ಕಂಡಿದ್ದ ಗ್ರಾಮದ ಯುವಕರು ಗ್ರಾಮಸ್ಥರ, ಶಿಕ್ಷಕರ ಸಹಾಯದಿಂದ ಕುಡುಕರಿಗೆ ಅಂತ್ಯ ಕಾಣಿಸಲು ಈ ಫಲಕವನ್ನು ಹಾಕಿದ್ದಾರೆ.

Youths Put Madyamuktha Grama Board In Ammanahatti In Chitradurga

ಅಗ್ಗದ ದರದಲ್ಲಿ ಮದ್ಯ, ಮದ್ಯದಂಗಡಿ ಹೆಚ್ಚಳ, ಗೊಂದಲ, ಸ್ಪಷ್ಟನೆಅಗ್ಗದ ದರದಲ್ಲಿ ಮದ್ಯ, ಮದ್ಯದಂಗಡಿ ಹೆಚ್ಚಳ, ಗೊಂದಲ, ಸ್ಪಷ್ಟನೆ

"ಗ್ರಾಮದಲ್ಲಿ 400ಕ್ಕೂ ಹೆಚ್ಚು ಮನೆಗಳಿವೆ. ಸುಮಾರು ವರ್ಷಗಳಿಂದ ಗ್ರಾಮದ ಗ್ರಾಮದ ಮುರ್ನಾಲ್ಕು ಕಡೆ ಮದ್ಯ ಮಾರಾಟ ನಡೆಯುತ್ತಿದೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿ ಮದ್ಯ ಮಾರಾಟ ಮಾಡುವವರಿಗೆ ದಂಡ ವಿಧಿಸಿದ್ದರು. ಆದರೂ ಗ್ರಾಮದಲ್ಲಿ ಮದ್ಯ ಮಾರಾಟ ನಿಂತಿರಲಿಲ್ಲ. ಆದ್ದರಿಂದ ಹೀಗೆ ಮಾಡಿದೆವು" ಎಂದು ಗ್ರಾಮದ ಯುವಕರು ಹರ್ಷ ವ್ಯಕ್ತಪಡಿಸಿದ್ದಾರೆ.

English summary
Some youth in the village have voluntarily put "Madhumukta grama" board on behalf of 71st republic day in ammanahatti village in chitradurga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X