ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ: ವಿಷ ಆಹಾರ ಸೇವಿಸಿ ನಾಲ್ವರ ಸಾವು ಪ್ರಕರಣ; ಕಿರುಕುಳ ತಾಳದೆ ವಿಷ ಬೆರೆಸಿದ್ದ ಪುತ್ರಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 18: ಚಿತ್ರದುರ್ಗ ಜಿಲ್ಲೆ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಮನೆಯಲ್ಲಿ ವಿಷ ಆಹಾರ ಸೇವಿಸಿ ನಾಲ್ವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮನೆಯ ಮಗಳೇ ಊಟದಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಸತ್ಯ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಜುಲೈ 22ರಂದು ನಡೆದ ಈ ಪ್ರಕರಣ ಇಡೀ ಚಿತ್ರದುರ್ಗ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ಬಗ್ಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆಯನ್ನು ಮುಂದುವರೆಸಿ ಊಟ ಮಾಡಿದ್ದ ಆಹಾರವನ್ನು (ರಾಗಿಮುದ್ದೆ, ರಾಗಿಮುದ್ದೆ ಮಾಡಿದ್ದ ಅಲ್ಯುಮಿನಿಯಂ ಪಾತ್ರೆ, ವಾಂತಿ) ಹಾಗೂ ಆಹಾರ ತಯಾರು ಮಾಡಲು ಬಳಸಿದ್ದ ಎಲ್ಲಾ ಆಹಾರ ಪದಾರ್ಥಗಳನ್ನು ಆರ್.ಎಫ್.ಎಸ್.ಎಲ್. ದಾವಣಗೆರೆಗೆ ಕಳುಹಿಸಿದ್ದರು. ರಾಗಿ ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆತಿರುವ ಬಗ್ಗೆ ಆರ್ವರದಿ ಬಂದಿದ್ದು, ಬಾಲಕಿಯೇ ಊಟದಲ್ಲಿ ವಿಷ ಬೆರೆಸಿರುವುದು ತಿಳಿದು ಬಂದಿದೆ.

ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಬಾಲಕಿಯನ್ನು, ಕುಟುಂಬದ ತಂದೆ, ತಾಯಿ ಹಾಗೂ ಇತರೆ ಸದಸ್ಯರುಗಳು ಬಾಲಕಿ ಬಗ್ಗೆ ತಾತ್ಸಾರ ಮನೋಭಾವನೆಯನ್ನು ತಾಳಿದ್ದರು. ಅಲ್ಲದೆ ಶಾಲೆಯನ್ನು ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದರು. ಪೋಷಕರು ಹಾಗೂ ಇತರೆ ಕುಟುಂಬ ಸದಸ್ಯರು ವಿನಾಕಾರಣ ಬೈಯುವುದು, ಕೂಲಿ ಕೆಲಸಕ್ಕೆ ಕಳುಹಿಸುತ್ತಿರುವುದು ಬಾಲಕಿಗೆ ದ್ವೇಷ ಹುಟ್ಟಿಸಿತ್ತು.

Chitradurga: Young Girl Admits Poisoning 4 Family Members With Fertilizer In Bharamasagara

ಉಳಿದ ಮಕ್ಕಳಾದ ರಮ್ಯಾ ಹಾಗೂ ರಾಹುಲ್‌ರನ್ನು ಪೋಷಕರು ಪ್ರೀತಿಯಿಂದ ಕಾಣುತ್ತಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕಿಯನ್ನು ತಿರಸ್ಕಾರ ಮನೋಭಾವದಿಂದ ಕಾಣುತ್ತಿದ್ದರು. ಇದರಿಂದ ಬಾಲಕಿ ಇವರನ್ನು ವಿಷ ಹಾಕಿ ಹಾಯಿಸಿದರೆ ನನಗೆ ಯಾರು ಬೈಯುವುದಿಲ್ಲ, ಕೂಲಿ ಕೆಲಸಕ್ಕೆ ಕಳುಹಿಸಿವುದಿಲ್ಲ ಎಂದು ಯೋಚಿಸಿ ರಾತ್ರಿ ಊಟದ ರಾಗಿ ಮುದ್ದೆಯಲ್ಲಿ ವಿಷ ಹಾಕಿ ನಾಲ್ವರ ಸಾವಿಗೆ ಕಾರಣವಾಗಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ ಎಂದು ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ
ವಿಷಾಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದ ಘಟನೆ ಕಳೆದ ಜುಲೈ 22ರಂದು ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯ ಇಸಾಮುದ್ರ ಗ್ರಾಮದಲ್ಲಿ ನಡೆದಿತ್ತು.

ಮನೆಯಲ್ಲಿ ಊಟಕ್ಕಾಗಿ ಅಂದು ರಾತ್ರಿ ರಾಗಿ ಮುದ್ದೆ, ಸಾಂಬಾರು ಸೇವನೆ ಬಳಿಕ ಅಸ್ವಸ್ಥರಾಗಿದ್ದರು. ಬಾಲಕಿ ಮಾತ್ರ ಅನ್ನ ಸಾಂಬಾರು ಊಟ ಮಾಡಿದ್ದಳು. ಬಾಲಕಿ ಬಿಟ್ಟು ಅಸ್ವಸ್ಥರಾದವರನ್ನು ಕೂಡಲೇ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ತಿಪ್ಪಾನಾಯ್ಕ್ (46), ಪತ್ನಿ ಸುಧಾಬಾಯಿ (43) ಹಾಗೂ ವೃದ್ಧೆ ಗುಂಡಿ ಬಾಯಿ (75) ಮೃತಪಟ್ಟಿದ್ದರು. ರಮ್ಯಾ (16) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ವಿಷಾಹಾರ ಸೇವಿಸಿ ರಾಹುಲ್ (5), ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡಿದ್ದನು. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

Chitradurga: Young Girl Admits Poisoning 4 Family Members With Fertilizer In Bharamasagara

ರಾಗಿ ಮುದ್ದೆಯಲ್ಲಿ ವಿಷ ಹಾಕಿ 4 ಜನರ ಕೊಲೆ ಮಾಡಿರುವ ಘಟನೆ ಬಗ್ಗೆ ಕ್ರಮ ಜರುಗಿಸುವಂತೆ ಚಂದ್ರಶೇಖರ ಯಾನೆ ರಾಹುಲ್ ಈತನು ಭರಮಸಾಗರ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಈತನ ದೂರಿನನ್ವಯ ಭರಮಸಾಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಅದರಂತೆ ಸದರಿ ಪ್ರಕರಣವನ್ನು ಪತ್ತೆ ಹಚ್ಚಲು ವೃತ್ತ ನಿರೀಕ್ಷಕ ಮಧು ನೇತೃತ್ವದಲ್ಲಿ ಪಿಎಸ್ಐ ರಾಜು ಹಾಗೂ ಸಿಬ್ಬಂದಿ ಒಳಗೊಂಡಂತೆ ತಂಡವನ್ನು ರಚಿಸಿದ್ದರು. ಈ ಪ್ರಕರಣದಲ್ಲಿ ಮೃತರಾದ ಸುಧಾಬಾಯಿ ಮಗಳೇ ಈ ಕೃತ್ಯವನ್ನು ಎಸಗಿರುವುದು ಬೆಳಕಿಗೆ ಬಂದಿದೆ.

ರಾಜಕೀಯ ನಾಯಕರ ಭೇಟಿ
ವಿಷ ಸೇವಿಸಿ ನಾಲ್ವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ಸಾಂತ್ವನ ಹೇಳಿ, ವೈಯಕ್ತಿಕ ಪರಿಹಾರ ನೀಡಿದ್ದರು. ಇದಲ್ಲದೆ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಸಹ ಮೃತರ ಮನೆಗೆ ಭೇಟಿ ನೀಡಿದ್ದರು. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಶಿವಮೊಗ್ಗ ಜಿಲ್ಲೆಗೆ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಭರಮಸಾಗರದ ಇಸಾಮುದ್ರ ಗ್ರಾಮದ ಮೃತರ ಕುಟುಂಬಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

Recommended Video

IPL ಮೆಗಾ ಹರಾಜಿನಲ್ಲಿ ಧೋನಿ ಉಳಿಸಿಕೊಳ್ಳಲು CSK ಮಾಸ್ಟರ್ ಪ್ಲಾನ್ | Oneindia Kannada

English summary
Young girl admits poisoning 4 family members with fertilizer in bharamasagara Of Chitradurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X