• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗದ ರೈತ ಮಹಿಳೆಗೆ ನೀರಾವರಿ ಸೌಲಭ್ಯದ ಆಶ್ವಾಸನೆ ಕೊಟ್ಟ ಸಿಎಂ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಜುಲೈ 27: ಚಿತ್ರದುರ್ಗದ ರೈತ ಮಹಿಳೆ ವಸಂತಮ್ಮಳಿಗೆ ಮುಂದಿನ ದಿನಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಆಶ್ವಾಸನೆಯನ್ನು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ.

   India - Bangladesh ಸಂಬಂಧಕ್ಕೆ ಹುಳಿ ಹಿಂಡಿದ China | Oneindia Kannada

   ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ "ಆಡಳಿತ 1 ವರ್ಷ, ಸವಾಲುಗಳ ವರ್ಷ- ಪರಿಹಾರದ ಸ್ಪರ್ಶ" ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಚಿತ್ರದುರ್ಗದ ವಸಂತಮ್ಮಳನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭ ಮುಖ್ಯಮಂತ್ರಿಗಳು ಈ ಆಶ್ವಾಸನೆಯನ್ನು ನೀಡಿದ್ದಾರೆ.

   ವಿವಾದಿತ ತೀರ್ಮಾನಗಳಿಂದಲೂ ಸದ್ದು ಮಾಡಿದ ಸರ್ಕಾರ!

   ಕೊರೊನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಚಿತ್ರದುರ್ಗದ ಹಿರಿಯೂರಿನ ಕಾಟನಾಯಕನಹಳ್ಳಿ ಗ್ರಾಮದ ಈ ರೈತ ಮಹಿಳೆ ವಸಂತಮ್ಮ, ತಾವು ಬೆಳೆದ ಈರುಳ್ಳಿಯನ್ನು ಮಾರಾಟ ಮಾಡಲಾಗದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು. ವಸಂತಮ್ಮಳ ಸಮಸ್ಯೆಯನ್ನು ಗಮನಿಸಿದ ಮುಖ್ಯಮಂತ್ರಿಗಳು ಅವರಿಗೆ ಕರೆಮಾಡಿ ಸಾಂತ್ವಾನ ಹೇಳಿದ್ದರು ಮತ್ತು ಜಿಲ್ಲೆಯ ತೋಟಗಾರಿಕಾ ಅಧಿಕಾರಿಗಳನ್ನು ಸಮಸ್ಯೆಗೆ ಸ್ಪಂದಿಸುವಂತೆ ನಿರ್ದೇಶಿಸಿದ್ದರು.

   ಚಿತ್ರದುರ್ಗ ಜಿಲ್ಲಾ ತೋಟಗಾರಿಕಾ ಇಲಾಖೆ ಅಧಿಕಾರಿಗಳು ವಸಂತಮ್ಮ ಬೆಳೆದ ಈರುಳ್ಳಿ ಬೆಳೆಯನ್ನು ಸಾಗಿಸಲು ಮತ್ತು ಮಾರಾಟ ಮಾಡಲು ಸಹಕರಿಸಿದ್ದರು.

   English summary
   Chief Minister Yediyurappa today promised to provide irrigation facility to chitradurga woman farmer vasantamma.she was invited to the bjp government one year completion programme
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X