ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸದುರ್ಗದಲ್ಲಿ ನಿನ್ನೆ ರಾತ್ರಿ 9 ಗಂಟೆ 9 ನಿಮಿಷಕ್ಕೆ ಜನಿಸಿತು ಮಗು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 06: ದೇಶಾದ್ಯಂತ ಜನತೆ ಕೊರೊನಾ ತಡೆಯಲು ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಪ್ರಧಾನಿ ಕರೆ ನೀಡಿದ್ದ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಎಲ್ಲೆಲ್ಲೂ ಬೆಂಬಲ ವ್ಯಕ್ತವಾಗಿದೆ.

ನಿನ್ನೆ ರಾತ್ರಿ 9 ಗಂಟೆ 9 ನಿಮಿಷದಲ್ಲಿ ದೀಪ ಹಚ್ಚಿಡುವ ಮೂಲಕ ತಮ್ಮ ಬೆಂಬಲ ನೀಡಿದ್ದಾರೆ. ಹಲವು ಗಣ್ಯಾತಿಗಣ್ಯರು ದೀಪ ಹಚ್ಚಿ ಕತ್ತಲ ವಿರುದ್ಧ ಹೋರಾಡುವ ಛಲ ವ್ಯಕ್ತಪಡಿಸಿದ್ದಾರೆ. ಇದೇ ಸಮಯಕ್ಕೆ ಆಂಬುಲೆನ್ಸ್ ನಲ್ಲಿ ಹೊಸದುರ್ಗದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Baby Took Birth In Hosadurga At 9 Night At 9 Minutes Yesterday

 ರಸ್ತೆ ಬದಿಯೇ ದೀಪ ಬೆಳಗಿದ ಮನೆ ಇಲ್ಲದ ಬಡವರು ರಸ್ತೆ ಬದಿಯೇ ದೀಪ ಬೆಳಗಿದ ಮನೆ ಇಲ್ಲದ ಬಡವರು

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರದ ಮಾವಿನಕಟ್ಟೆ ಸರ್ಕಲ್ ನಲ್ಲಿ ಜ್ಯೋತಿ ಬೆಳಗಿಸುವ ಸಮಯದಲ್ಲಿ ಆಂಬುಲೆನ್ಸ್ ನಲ್ಲಿ ಹೊಸದುರ್ಗದ ಅಡವಿಸಂಗೇಹಳ್ಳಿ ಗ್ರಾಮದ ರೇಖಾ ಗುರುಮೂರ್ತಿ ಎಂಬುವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎಲ್ಲರೂ ದೀಪ ಹಚ್ಚಿದ್ದ, ಕೊರೊನಾ ನಿವಾರಣೆಗೆ ಪಣ ತೊಟ್ಟು ಇಡೀ ದೇಶವೇ ಒಗ್ಗಟ್ಟಾದ ಸಮಯದಲ್ಲಿ ಮಗು ಹುಟ್ಟಿದ್ದಕ್ಕೆ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

English summary
Yesterday narendra modi called to light a lamp at night 9 to show unity to fight against coronavirus. At that time baby took birth in hosadurga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X