ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟಾಚಾರ ಆರೋಪ: ಮಾನನಷ್ಟ ಮೊಕದ್ದಮೆ ಹಾಕುತ್ತೇನೆಂದ ಕೃಷಿ ಸಚಿವ ಬಿ.ಸಿ. ಪಾಟೀಲ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 11: ಬಿಜೆಪಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಸಿ. ಪಾಟೀಲ್, "ಯಾಕೆ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಇಲ್ಲವೇ, ಸಿದ್ದರಾಮಯ್ಯರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರಲಿಲ್ಲವೇ?‌," ಎಂದು ಮರು ಪ್ರಶ್ನಿಸಿದರು.

"ಭ್ರಷ್ಟಾಚಾರ ಆರೋಪದ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ಧ. ನಮ್ಮಲ್ಲಿ ಯಾವುದೇ ಕಳ್ಳತನದ ಪ್ರಕ್ರಿಯೆ ಇಲ್ಲ. ಕೃಷಿ ಇಲಾಖೆ ಒಂದೇ ಸಂಪೂರ್ಣ ಪಾರದರ್ಶಕವಾಗಿ ಕೆಲಸ ವಿರ್ವಹಿಸುತ್ತದೆ. ಯಾರು ಆರೋಪ ಮಾಡಿದ್ದಾರೆ ಅವರು ಆರೋಪವನ್ನು ಸಾಬೀತು ಮಾಡಬೇಕು, ಇಲ್ಲದಿದ್ದಲ್ಲಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ," ಎಂದು ಎಚ್ಚರಿಕೆ ನೀಡಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ರೈತರಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.

will file defamation case against people who filed corruption case against me says bc patil

"ರಾಜಕೀಯದಲ್ಲಿ ಆರೋಪ ಮಾಡುವವರು ಇರುತ್ತಾರೆ. ಯಾರು ಉತ್ತಮ ಕೆಲಸ ಮಾಡುತ್ತಾರೆ ಅಂತವರ ವಿರುದ್ಧ ಕೆಲವರು ಸುಮ್ಮನೆ ಆರೋಪ ಮಾಡುತ್ತಾರೆ. ನನ್ನ ವಿರುದ್ಧದ ಭ್ರಷ್ಟಾಚಾರ ದೂರು ದುರುದ್ದೇಶ ಪೂರಿತ," ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

"ಜನರು ಕಾಂಗ್ರೆಸ್ ಪರವಾಗಿದ್ದಿದ್ದರೆ ಯಾಕೆ ಅವರನ್ನು ಮನೆಯಲ್ಲಿ ಕೂರಿಸುತ್ತಿದ್ದರು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಜನರಿಗೆ ಕಾಂಗ್ರೆಸ್ ಬಗ್ಗೆ ವಿರೋಧವಿದೆ ಅವರು ಅದರಿಂದ ಹೊರ ಬರಲು ಸಾಧ್ಯವಿಲ್ಲ, 2023ರ ಚುನಾವಣೆಯಲ್ಲಿಯೂ ಕೂಡ ನಾವೇ ಗೆದ್ದು ಅಧಿಕಾರ ಮಾಡುತ್ತೇವೆ," ಎಂದು ಕೃಷಿ ಸಚಿವರು ತಿಳಿಸಿದರು.

"ಸ್ಟೀಲ್ ಬ್ರಿಡ್ಜ್ ಮಾಡುವಾಗ 500 ಕೋಟಿ ರೂ. ಕಿಕ್‌ಬ್ಯಾಕ್ ತೆಗೆದುಕೊಂಡಿದ್ದಾರೆ ಎಂಬ ಆರೋಪ‌ ಬಂದಿತ್ತಲ್ಲ, ಆರೋಪ ಮಾಡುವವರು ಇದ್ದೇ ಇರುತ್ತಾರೆ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದರು. ಯಾವಾಗ ಅವರಿಗೆ ಮಾಡಲೂ ಏನೂ ಕೆಲಸ ಇಲ್ಲದಿದ್ದಾಗ, ಅಸಮಾಧಾನದಿಂದ ಈ ರೀತಿ ಆರೋಪ‌ ಮಾಡುತ್ತಾರೆ. ಇದರ ಬಗ್ಗೆ ಯಾವುದೇ ತನಿಖೆ ಆಗಲಿ‌ ನಾವು ಉತ್ತರ ಕೊಡಲು ಸಿದ್ದರಿದ್ದೇವೆ," ಎಂದು ಬಿ.ಸಿ. ಪಾಟೀಲ್ ಸವಾಲು ಹಾಕಿದರು.

will file defamation case against people who filed corruption case against me says bc patil

"ಎಲ್ಲವೂ ಆನ್‌ಲೈನ್ ಟೆಂಡರ್ ಆಗುತ್ತದೆ, ಟೆಂಡರ್‌ದಾರ ಆನ್‌ಲೈನ್‌ನಲ್ಲಿ‌ ಅರ್ಜಿ ಹಾಕಿ ಹಣ ಕಟ್ಟುತ್ತಾನೆ. ಆನ್‌ಲೈನ್‌ಲ್ಲಿ ಕಂಪನಿಗಳಿಗೆ ಹಣ ಹೋಗುತ್ತದೆ, ಇಲ್ಲಿ ಎಲ್ಲವೂ ಪಾರದರ್ಶಕತೆ ಇರುತ್ತದೆ," ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.

"ಇನ್ನು ನಿಫಾ ವೈರಸ್ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೇರಳದಿಂದ ಬರುವವರು ನೆಗೆಟಿವ್ ವರದಿ ಇಲ್ಲದೆ ಯಾರೂ ಬಾರದಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಯಾವುದೇ ರೈತ ವಿರೋಧಿ ಕಾಯ್ದೆಗಳು ಇಲ್ಲ. ರೈತರಿಗೆ ಎಂಎಸ್‌ಪಿಯನ್ನು ಕೂಡ ಉತ್ತಮವಾಗಿ ಕೊಡಲಾಗುತ್ತಿದೆ, ರೈತರು ಲಾಭವನ್ನು ಪಡೆಯುತ್ತಿದ್ದಾರೆ," ಎಂದರು.

"ರೈತರಿಗೆ ಎಲ್ಲಿ ಬೇಕಾದರೂ ಬೆಳೆಯನ್ನು ಮಾರಲು ಅವಕಾಶ ನೀಡಿದ್ದೇವೆ. ಇಂತಹ ಅವಕಾಶ ನೀಡಿದ ಕೇಂದ್ರ ಸರ್ಕಾರ ರೈತರಿಗೆ ನೀಡಿದ್ದು ವಿರೋಧ ನೀತಿಯೇ ಎಂದು ಪ್ರಶ್ನಿಸಿ, ಇದು ರೈತ ವಿರೋಧ ನೀತಿಯಲ್ಲ, ದುರುದ್ದೇಶದಿಂದ ವಿರೋಧಿಸುತ್ತಿದ್ದಾರೆ," ಎಂದು ಹೇಳಿದರು.

will file defamation case against people who filed corruption case against me says bc patil

ಇನ್ನು ಗಣೇಶ ಆಚರಣೆಗೆ ಹಿಂದೂ‌ ಮಹಾಸಭಾ ಗಣಪತಿಯ ಸಮಿತಿ ಸೆಡ್ಡು ಹೊಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, "ಅದೇನು ದೊಡ್ಡ ವಿಷಯವಲ್ಲ, ನಾವೆಲ್ಲರೂ ಹಿಂದೂಗಳು, ಭಾರತೀಯರು ಇದರ ಬಗ್ಗೆ ಸಿಎಂ ಮತ್ತು ಸಂಘ ಪರಿವಾರದವರು ಕುಳಿತು ಮಾತನಾಡುತ್ತಾರೆ. ಐದು ದಿನಗಳ ಕಾಲ ಅವಕಾಶ ನೀಡಿದ್ದಾರೆ, ಅದರಂತೆ ಆಚರಣೆಯಾಗುತ್ತದೆ, ಇದನ್ನು ಎರಡನೇ ದಿನ ನೋಡೋಣ ಮುಂದೇನು ಆಗುತ್ತೆ," ಎಂದು ತಿಳಿಸಿದರು.

"ಮತ್ತೊಂದು ಕಡೆ ಉಡುಪಿಯಲ್ಲಿ‌ ನಡೆಯುತ್ತಿರುವ ಮತಾಂತರ ಕುರಿತು ಪ್ರತಿಕ್ರಿಯಿಸಿ, ಮತಾಂತರ ಮಾಡುವುದು ಅಕ್ಷಮ್ಯ ಅಪರಾಧ. ಅವರ ಮೇಲೆ ಕ್ರಮ ಜರುಗಿಸಲಾಗುತ್ತದೆ," ಎಂದರು.

ಕಿಡಿಗೇಡಿಗಳಿಂದ ಗಣೇಶ ಮೂರ್ತಿ ಧ್ವಂಸ
ಕಿಡಿಗೇಡಿಗಳಿಂದ ಗಣೇಶ ಮೂರ್ತಿಯನ್ನು ಧ್ವಂಸ ಮಾಡಿರುವ ಘಟನೆ ಚಿತ್ರದುರ್ಗ
ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ಮೂರ್ತಿಯನ್ನು ಹೊಡೆದು ಹಾಕಿದ್ದು, ಗಣಪತಿ ಹಬ್ಬದಂದೆ ಮೂರ್ತಿಯನ್ನು ಕೆಡವಿದ್ದಾರೆ. ತಳಕು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

English summary
Will file defamation case against people who Alleged Corruption Case against Me Says Agriculture minister BC Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X